Advertisement
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯನ್ನು ಮತ್ತಷ್ಟು ಪರಿಸರ ಪ್ರಿಯವಾಗಿ ಆಚರಿಸುವ ನಿಟ್ಟಿನಲ್ಲಿ ಸಿದ್ಧತೆಗಳು ಸಾಗಿವೆ. ದೀಪಾವಳಿ ಸಂಬಂಧಿತ ಚೀನಾ ವಸ್ತುಗಳನ್ನುಕೊಳ್ಳದೆ ದೇಶಿ ಉತ್ಪನ್ನಗಳ ನ್ನು ಬಳಸಲು ಕೇಂದ್ರ ಸಲಹೆ ನಿಡಿದೆ. ರಾಜ್ಯ ಸರ್ಕಾರವೂ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿದೆ. ಇದಕ್ಕೆಪೂರಕ ಎಂಬಂತೆ ಸ್ವದೇ ಶಿ ಉತ್ಪನ್ನಗಳೂ ಮಾರುಕಟ್ಟೆಗೆ ಆಗಮಿಸಿವೆ. ಅದರಲ್ಲಿ ಸ್ವದೇಶಿತನದಿಂದಲೇ ರೂಪಗೊಂಡಿರುವ ದೀಪಗಳು ಸೇರಿವೆ.
Related Articles
Advertisement
ಹಣತೆ ಸಿದ್ಧಪಡಿಸುವುದು ಹೇಗೆ? :
ಸಗಣಿ ದೀಪ : ಈ ದೀಪ ಪವಿತ್ರ ಎಂಬ ಪ್ರತೀತಿ ಹಳ್ಳಿಗಳಲ್ಲಿದೆ. ಇಂತಹದೀಪಗಳಿಂದ ಬೆಳಗಿದಾಗ ಸಕಾರತ್ಮಕ ಭಾವನೆ ಮನದ ಸ್ಮತಿಪಟಲದಲ್ಲಿ ಮೂಡಲಿದೆ. ಹಸುವಿನ ಸಗಣಿ ದೀಪವನ್ನು ಗೋ ಮೂತ್ರ ಮತ್ತು ಗೋದಿಹಿಟ್ಟು ಬೆರೆಸಿ ವಿನ್ಯಾಸ ಪಡಿಸಲಾಗುತ್ತಿದೆ. ಈ ಹಣತೆ ಮಣ್ಣಿನಲ್ಲಿ ಬೇಗನೆ ಬೆರೆಯುವ ಕಾರಣಪರಿಸರಕ್ಕೂ, ಮಾನವನಿಗೂ ಯಾವುದೇ ತೊಂದರೆಯಾಗದು.
ಲಿಂಬೆಹಣ್ಣಿನ ಹಣತೆ : ಹಲವು ಕಡೆಗಳಲ್ಲಿ ನಿಂಬೆ ಹಣ್ಣಿನಿಂದ ದೀಪ ಹಚ್ಚುವ ಸಂಪ್ರದಾಯ ಈಗಲೂ ಇದೆ. ನಿಂಬೆ ಹಣ್ಣಿನಲ್ಲೂ ಅತ್ಯಂತ ಸುಲಭ ರೀತಿಯಲ್ಲಿಹಣತೆಗೆ ಜೀವ ನೀಡಬಹುದಾಗಿದೆ.ದೇವರಿಗೆ ಲಿಂಬೆಹಣ್ಣಿನ ದೀಪ ಶ್ರೇಷ್ಠ ಅಂತ ಹೇಳಲಾಗುತ್ತಿದೆ. ದೀಪಾವಳಿಯಲ್ಲೂ ಸುಲಭ ಖರ್ಚಿನಲ್ಲಿ ನಿಂಬೆ ಹಣ್ಣಿನಿಂದ ದೀಪ ಸಿದ್ಧಪಡಿಸಬಹುದಾಗಿದೆ.
ಅಡಿಕೆ ಸಿಪ್ಪೆಯಿಂದ ಹಣತೆ : ಅಡಿಕೆ ಸಿಪ್ಪೆಗೂ ಹಣತೆ ರೂಪ ನೀಡಬಹುದಾಗಿದೆ. ಸಿಪ್ಪೆ ಇರುವ ಅಡಿಕೆಯನ್ನು ಎರಡು ಭಾಗವನ್ನಾಗಿ ಕತ್ತರಿಸಿ ಆ ನಂತರ ಅಡಿಕೆ ಹೊರತರಬೇಕು. ಆ ನಂತರ ಉಳಿಯುವ ಸಿಪ್ಪೆಯಲ್ಲಿ ಭಿನ್ನ ರೂಪದ ದೀಪ ಹಚ್ಚ ಬಹುದಾಗಿದೆ. ಸಾಮಾನ್ಯವಾಗಿ ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಅಡಿಕೆ ಸಿಪ್ಪೆಯ ಹಣತೆ ಪ್ರಸಿದ್ಧಿ ಪಡೆದುಕೊಂಡಿದೆ. ಯಾವು ದೇ ರೀತಿಯಖರ್ಚಿಲ್ಲದೆ ಅಡಿಕೆ ಸಿಪ್ಪೆ ಹಣತೆಯನ್ನು ಸುಲಭ ರೀತಿಯಲ್ಲಿ ಮಾಡಬಹುದಾಗಿದೆ.
ಕಿತ್ತಲೆ ಹಣ್ಣಿನ ಹಣತೆ : ನಿಂಬೆಯಂತೆಯೇ ಕಿತ್ತಲೆ ಹಣ್ಣಿನಿಂದಲೂ ದೀಪ ಹಚ್ಚಬಹುದು.ನಿಂಬೆ ಹಣ್ಣಿಗಿಂತಲೂ ಹೆಚ್ಚು ಎಣ್ಣೆ ಹಾಕುವ ಅವಕಾಶಕಿತ್ತಲೆ ಹಣ್ಣಿನ ದೀಪದಲ್ಲಿರುತ್ತದೆ. ದೀಪವಾಗಿ ಬಳಕೆ ಮಾಡುವ ಒಂದೆರಡು ದಿನದ ಮೊದಲು ಕಿತ್ತಲೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಳ್ಳಬೇಕು. ಜತೆಗೆ ಸಿಪ್ಪೆಗೆ ನಮಗೆ ಬೇಕಾದ ಬಣ್ಣವನ್ನು ಹಚ್ಚಿ ಕೂಡ ಇಷ್ಟವಾದ ರೀತಿಯಲ್ಲಿ ಅಣಿಗೊಳಿಸಬಹುದಾಗಿದೆ.
ಆಲೂಗಡ್ಡೆ ದೀಪ : ಮನೆಯಲ್ಲೇ ಆಲೂಗಡ್ಡೆಯಿಂದಲೂ ಭಿನ್ನ ಶೈಲಿಯ ದೀಪವನ್ನು ರೂಪಿಸಬಹುದಾಗಿದೆ.ಆಲೂಗಡ್ಡೆ ತೆಗೆದುಕೊಂಡು ಅದರ ಮಧ್ಯ ಭಾಗದಲ್ಲಿ ಹೋಲ್ ಮಾಡಿ ಹಣತೆ ಆಕಾರ ನೀಡಬಹುದು. ಆಲೂಗಡ್ಡೆಯ ಸಿಪ್ಪೆ ತೆಗೆಯದೇ ಇದ್ದರೆ ನಾವು ಹಾಕುವ ಎಣ್ಣೆ ಹೆಚ್ಚು ಹೊತ್ತು ಇರುತ್ತದೆ. ನೀಟಾಗಿ ಆಲೂಗಡ್ಡೆಗೆ ಹಣತೆಯ ರೂಪ ನೀಡಿ ಎಣ್ಣೆ ಹಾಕಿ ಹಚ್ಚಿದರೆ ಇತರೆ ಹಣತೆಯಂತೆಯೇ ಉರಿಯಲಿದೆ.
ಪಟಾಕಿ ಸಿಡಿಸುವುದಕ್ಕಿಂತಲೂ ಪ್ರಕೃತಿದತ್ತವಾಗಿ ದೊರೆಯುವ ಎಣ್ಣೆಗಳಿಂದ ದೀಪ ಬೆಳಗಿಸುವುದು ಉತ್ತಮ.ಈ ದೀಪಗಳಿಂದ ಹೊರಹೊಮ್ಮುವ ಹೊಗೆಯು ನಮ್ಮ ಸುತ್ತಮುತ್ತಲಿರುವ ಅಪಾಯಕಾರಿ ಬ್ಯಾಕ್ಟೀರಿಯಾಗಳ ಸಾವಿಗೆ ಕಾರಣವಾಗುತ್ತದೆ.ಈ ಬಗ್ಗೆ ಜನರು ಹೆಚ್ಚು ಆಲೋಚನೆ ಮಾಡಬೇಕು. –ಡಾ.ಯಲ್ಲಪ್ಪ ರೆಡ್ಡಿ, ಪರಿಸರ ತಜ್ಞ
ಪಟಾಕಿ ಮಾರ್ಗಸೂಚಿ ಉಲ್ಲಂಘಿಸಿದರೆಕ್ರಮ :
ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿ ಹೊರತುಪಡಿಸಿ ಬೇರೆ ಪಟಾಕಿ ಸಿಡಿಸುವವರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿದ ಆಯುಕ್ತರು, ಕೋವಿಡ್ ಸೋಂಕು ಹಬ್ಬುವ ಭೀತಿ ಹಾಗೂಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಈ ಬಾರಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಸರ್ಕಾರ ಪಟಾಕಿ ಮಾರಾಟ ಮತ್ತು ಹಚ್ಚುವ ಸಂಬಂಧ ಸ್ಪಷ್ಟವಾದ ಮಾರ್ಗಸೂಚಿ ಹೊರಡಿಸಿದೆ.ಈನಿಯಮಗಳ ಆಧಾರದ ಮೇಲೆ ಪಟಾಕಿ ಮಾರಾಟ ಮಾಡುವವರಿಗೂ ಪರವಾನಗಿ ನೀಡಲಾಗುತ್ತಿದೆ. ಪಾಲಿಕೆಯಿಂದ ಪರವಾನಗಿ ಪಡೆದವರು ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡಬೇಕು. ನಿಯಮ ಉಲ್ಲಂ ಸಿ ಅನ್ಯ ಪಟಾಕಿ ಮಾರಾಟ ಮಾಡಿದರೆ, ಮಾರಾಟಗಾರರ ಮೇಲೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.