Advertisement

ಬ್ಲ್ಯಾಕ್ ಫಂಗಸ್ ಸಾಂಕ್ರಾಮಿಕ ರೋಗ ಎಂದು ಘೋಷಿಸಿ: ರಾಜ್ಯ ಸರ್ಕಾರಗಳಿಗೆ ಕೇಂದ್ರ

02:56 PM May 20, 2021 | Team Udayavani |

ನವದೆಹಲಿ: ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಅಡಿಯಲ್ಲಿ “ಮ್ಯೂಕೋರ್ ಮೈಕೋಸಿಸ್( ಬ್ಲ್ಯಾಕ್ ಫಂಗಸ್) ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ(ಮೇ 20) ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದೆ.

Advertisement

ಇದನ್ನೂ ಓದಿ:ರಾಜಸ್ಥಾನ್ ಬಳಿಕ ಬ್ಲ್ಯಾಕ್ ಫಂಗಸ್ ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ತೆಲಂಗಾಣ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಐಸಿಎಂಆರ್ ಬ್ಲ್ಯಾಕ್ ಫಂಗಸ್ ಗೆ ಸಂಬಂಧಿಸಿದಂತೆ ಸ್ಕ್ರೀನಿಂಗ್, ಚಿಕಿತ್ಸೆ ಕುರಿತು ಬಿಡುಗಡೆಗೊಳಿಸಿರುವ ಮಾರ್ಗಸೂಚಿಯನ್ನು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳು, ಮೆಡಿಕಲ್ ಕಾಲೇಜುಗಳು ಅನುಸರಿಸಬೇಕೆಂದು ಸೂಚಿಸಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ದೆಹಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮ್ಯೂಕೋರ್ ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಎಂಬ ಅಪರೂಪದ ಸೋಂಕು ಹೆಚ್ಚಳವಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಮ್ಯೂಕೋರ್ ಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಒಂದು ಸೋಂಕು ರೋಗವಾಗಿದೆ ಎಂದು ತಿಳಿಸಿದೆ.

ಏಕೆ? ಹೇಗೆ ಬರುತ್ತದೆ?

Advertisement

ಮಧುಮೇಹ ಹೆಚ್ಚಿಗೆ ಇರುವವರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ (ಕ್ಯಾನ್ಸರ್‌ ಇತ್ಯಾದಿ ಗಳಿಂದಾಗಿ) ಚಿಕಿತ್ಸೆ ನೀಡುವಾಗ ಅನಿವಾರ್ಯವಾಗಿ ಸ್ಟಿರಾಯ್ಡ ಕೊಡ ಬೇಕಾಗುತ್ತದೆ. ಗಂಭೀರವಾಗಿ ರೋಗಿಗಳು ಆಸ್ಪತ್ರೆಗಳಿಗೆ ಬರುವುದ ರಿಂದ ಸ್ಟಿರಾಯ್ಡ ಕೊಡಲೇ ಬೇಕಾಗುತ್ತದೆ. ಹೆಚ್ಚು ಮಧುಮೇಹ ಇರುವವರಿಗೆ ಸ್ಟಿರಾಯ್ಡ ಕೊಟ್ಟರೆ ಮಾತ್ರ ಕೊರೊನಾವನ್ನು ನಿಯಂತ್ರಿಸ ಬಹುದು. ಇದರ ಜತೆಗೆ ದೇಹದ ರೋಗನಿರೋಧಕ ಶಕ್ತಿಯೂ ಕಡಿಮೆ ಯಾಗುತ್ತದೆ.
ಸೋಂಕಿತರು ತಾವು ಗುಣ ಮುಖರಾಗಿದ್ದೇವೆಂದು ಸಂತೋಷ ದಿಂದ ಮನೆಗೆ ಖುಷಿಯಾಗಿ ಮರಳ ಬಹುದು. ನಿರ್ಲಕ್ಷ್ಯ ವಹಿಸಿದರೆ ಬ್ಲ್ಯಾಕ್‌ ಫ‌ಂಗಸ್‌ ಬರುವ ಅಪಾಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next