Advertisement

ಕಡಲಾಮೆ ನಕ್ಷೆಯಲ್ಲಿ ಗೋವಾವನ್ನು ಅಗ್ರಸ್ಥಾನದಲ್ಲಿ ಇರಿಸಲು ನಿರ್ಧಾರ : ಸಚಿವ ರಾಣೆ

07:02 PM May 01, 2022 | Team Udayavani |

ಪಣಜಿ: ಉತ್ತರ ಗೋವಾದ ಮೊರ್ಜಿ ಮತ್ತು ದಕ್ಷಿಣ ಗೋವಾದ ಆಗೊಂದಾ, ಗಾಲಜೀಬಾಗ್ ಬೀಚ್‍ನ್ನು ಆಮೆಗಳ ಸಂತಾನೋತ್ಪತ್ತಿ ಪ್ರದೇಶ ಎಂದು ಕರೆಯಲಾಗುತ್ತದೆ ಎಂದು ಅರಣ್ಯ ಸಚಿವ ವಿಶ್ವಜಿತ್ ರಾಣೆ ಮಾಹಿತಿ ನೀಡಿದ್ದಾರೆ.

Advertisement

ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಪಂಚದ ಅಪರೂಪದ ಜಾತಿಯ ಆಲಿವ್ ರಿಡಲೆ ಆಮೆಗಳು ಈ ಬೀಚ್‍ಗಳಲ್ಲಿ ಮೊಟ್ಟೆಯುಡುತ್ತವೆ. ಈ ಸ್ಥಳಗಳಲ್ಲಿ ಮೊಟ್ಟೆಗಳನ್ನು ರಕ್ಷಿಸಲಾಗುತ್ತದೆ. ಆದ್ದರಿಂದ ಆಮೆ ಸಾಕಾಣೆಗಾಗಿ ಈ ಪ್ರದೇಶವನ್ನು ಸಂರಕ್ಷಿಸಲಾಗುತ್ತದೆ ಎಂದರು.

ಗೋವಾದಲ್ಲಿ ಆಮೆ ಸಾಕಣೆಗೆ ಹೆಚ್ಚಿನ ಪ್ರದೇಶ ಸಂರಕ್ಷಿಸಲಾಗುವುದು. ದೇಶದ ಕಡಲಾಮೆ ನಕ್ಷೆಯಲ್ಲಿ ಗೋವಾವನ್ನು ಅಗ್ರಸ್ಥಾನದಲ್ಲಿ ಇರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕಾಗಿ ರಾಜ್ಯದ ಅರಣ್ಯ ಇಲಾಖೆಯ ಭಾಗವನ್ನು ಬಳಸಿಕೊಳ್ಳಲಾಗುವುದು. ಆಲಿವ್ ರಿಡಲೆ ಆಮೆಗಳು ಇತ್ತೀಚಿನ ದಿನಗಳಲ್ಲಿ ಸಮುದ್ರ ತೀರದಲ್ಲಿ ಮೊಟ್ಟೆಯಿಡುತ್ತವೆ. ಈ ಆಮೆಗಳು ಗೋವಾದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮೊಟ್ಟೆಯಿಟ್ಟಿವೆ. ಆಮೆ ರಕ್ಷಣೆ ಯಶಸ್ವಿಗೊಳಿಸಲು ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ರಾಣೆ ಹೇಳಿದರು.

ಆಲಿವ್ ರಿಡಲೆ ಅಪರೂಪದ ಸಮುದ್ರ ಆಮೆಗಳಲ್ಲಿ ಒಂದಾಗಿದೆ. ಈ ಆಮೆಗಳು ಪ್ರತಿ ವರ್ಷ ಗೋವಾದ ಸಮುದ್ರ ತೀರಕ್ಕೆ ಆಗಮಿಸುತ್ತವೆ. ನೊವೆಂಬರ್ ನಿಂದ ಏಪ್ರಿಲ್ ವರೆಗೆ ಮೊಟ್ಟೆಯಿಡುತ್ತವೆ. ಗೋವಾ ಸಮುದ್ರ ತೀರದಲ್ಲಿ 89 ಆಮೆಗಳು ಗೂಡುಕಟ್ಟಿವೆ. ಈ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next