Advertisement

ಡೋಕ್‌ಲಾಂ ಬಿಕ್ಟಟ್ಟು : ಭಾರತ-ಚೀನ ನೇರ ಮಾತುಕತೆಗೆ ಮೆನನ್‌ ಸಲಹೆ

03:52 PM Jul 15, 2017 | Team Udayavani |

ಹೊಸದಿಲ್ಲಿ : ಸಿಕ್ಕಿಂ ಗಡಿಯಲ್ಲಿ ಉದ್ಭವಿಸಿರುವ ಡೋಕ್‌ಲಾಂ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತ ನೇರವಾಗಿ ಚೀನದೊಂದಿಗೆ ವ್ಯವಹರಿಸಬೇಕು; ವಿವಾದಿತ ವಿಷಯದಲ್ಲಿ ಯಾವುದೇ ಅಂತಿಮ ಹೇಳಿಕೆ ಇಲ್ಲವೇ ನಿರ್ಧಾರ ಬರುವ ತನಕ, ಅನಿರ್ದಿಷ್ಟಾವದಿಗೆ ಇಲ್ಲವೇ ಕಾಲಮಿತಿಗೆ ಒಳಪಟ್ಟಂತೆ ಶಾಂತಿಯಿಂದ ಸಹಬಾಳ್ವೆಯನ್ನು ನಡೆಸಲು ಉಭಯ ದೇಶಗಳು ರಾಜತಾಂತ್ರಿಕ ಮಾರ್ಗದಲ್ಲಿ ಮಾತುಕತೆಯನ್ನು ನಡೆಸಬೇಕು ಎಂದು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್‌ ಮೆನನ್‌ ಹೇಳಿದ್ದಾರೆ. 

Advertisement

ಡೋಕ್‌ಲಾಂ ನಂತಹ ಗಡಿ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ವಿಶ್ವದಿಂದ ಯಾವುದೇ ಪಾಠ ಕಲಿತುಕೊಳ್ಳುವುದರಲ್ಲಿ ಅರ್ಥವಿಲ್ಲ; ಮಾತ್ರವಲ್ಲ ಉಭಯತರಿಗೆ ಇದು ಪರಸ್ಪರರ ಮನಸ್ಸನ್ನು ಓದುವ ಸಂದರ್ಭವೂ ಅಲ್ಲ; ಹಾಗಾಗಿ ನೇರ ಮಾತುಕತೆಯ ಮೂಲಕವೇ ಉಭಯ ದೇಶಗಳು ಈ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬೇಕು ಎಂದು ಮೆನನ್‌ ಹೇಳಿದರು. 

ಡೋಕ್‌ಲಾಮ್‌ ನಲ್ಲಿ ಏರ್ಪಟ್ಟಿರುವ ಭಾರತ – ಚೀನ ಸೇನಾ ಮುಖಾಮುಖೀಯು ಈ ಜುಲೈನಲ್ಲಿ ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಎರಡೂ ದೇಶಗಳು ತಮ್ಮ ಸೇನೆಯನ್ನು ಗಡಿಯಿಂದ ಹಿಂದಕ್ಕೆ ಕರೆಸಿಕೊಳ್ಳಲು ನಿರಾಕರಿಸಿವೆ. ಪರಿಣಾಮವಾಗಿ ಗಡಿ ಬಿಕ್ಕಟ್ಟು ದಿನೇ ದಿನೇ ತೀವ್ರಗೊಳ್ಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next