ಚೆನ್ನೈ: ಸೌತ್ ಬೆಡಗಿ ನಿತ್ಯಾ ಮೆನನ್ (Nithya Menen) ತನ್ನ ಅಭಿನಯ ಹಾಗೂ ವ್ಯಕ್ತಿತ್ವದಿಂದಲೇ ಮನಗೆದ್ದವರು. ನಿತ್ಯ ಮೆನನ್ – ಜಯಂ ರವಿ (Jayam Ravi) ಅವರ ‘ಕದಳಿಕ್ಕ ನೆರಮಿಲ್ಲೈ’ (Kadhalikka Neramillai) ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಈ ಚಿತ್ರದ ಟ್ರೇಲರ್ ಬಿಡುಗಡೆ ಇತ್ತೀಚೆಗೆ ನರೆವೇರಿದೆ. ಚಿತ್ರತಂಡ ಹಾಗೂ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್ನಲ್ಲಿ ಮಿಂಚಿದ ರಾಕಿಭಾಯ್.!
ಟ್ರೇಲರ್ ರಿಲೀಸ್ ವೇಳೆ ನಟಿ ನಿತ್ಯಾ ಮೆನನ್ ತಮ್ಮನ್ನು ಪ್ರೀತಿಯಿಂದ ಅಪ್ಪಿಕೊಳ್ಳಲು ಬಂದ ನಿರ್ದೇಶಕರನ್ನು ತಡೆ ಹಿಡಿದು ಅವರ ಕೆನ್ನೆಗೆ ಮುತ್ತು ಕೊಟ್ಟಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ನಿರ್ದೇಶಕ ಮಿಸ್ಕಿನ್ (Director Mysskin) ಅವರು ಆಗಮಿಸಿದ್ದಾರೆ. ಅವರನ್ನು ನಿತ್ಯಾ ಮೆನನ್ ವೆಲ್ ಕಂ ಮಾಡಲು ಹೋಗಿದ್ದು, ಈ ವೇಳೆ ಮಿಸ್ಕಿನ್ ನಿತ್ಯಾರನ್ನು ಹಗ್ ಮಾಡಲು ಹೋಗಿದ್ದಾರೆ. ನಿತ್ಯಾ ಕೂಡಲೇ ಅವರನ್ನು ತಡೆದು, ಅಪ್ಪುಗೆಯ ಬದಲಿಗೆ ಮಿಸ್ಕಿನ್ ಅವರ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಮಿಸ್ಕಿನ್ ನಿತ್ಯಾ ಅವರ ಕೈಗೆ ಮುತ್ತು ಕೊಟ್ಟಿದ್ದಾರೆ.
ಇದಾದ ಬಳಿಕ ಜಯಂ ರವಿ ಅವರನ್ನು ನಿತ್ಯಾ ಹಗ್ ಮಾಡಿ ವೆಲ್ಕಂ ಮಾಡಿದ್ದಾರೆ. ಸದ್ಯ ನಿತ್ಯಾ ಮೆನನ್ ಅವರ ಈ ವಿಡಿಯೋ ವೈರಲ್ ಆಗಿದೆ.
ನಿತ್ಯಾ ಹಾಗೂ ಮಿಸ್ಕಿನ್ ಅವರು ಉತ್ತಮ ಸ್ನೇಹಿತರಾಗಿದ್ದಾರೆ. ಮಿಸ್ಕಿನ್ ಅವರ ʼಸೈಕೋʼ ಚಿತ್ರದಲ್ಲಿ ನಿತ್ಯಾ ನಟಿಸಿದ್ದರು.
‘ಕದಳಿಕ್ಕ ನೆರಮಿಲ್ಲೈ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಎಆರ್ ರೆಹಮಾನ್, ಅನಿರುದ್ಧ ರವಿಚಂದರ್ ಮತ್ತು ಇತರರು ಅತಿಥಿಯಾಗಿ ಆಗಮಿಸಿದ್ದರು. ಈ ಚಿತ್ರವನ್ನು ಉದಯನಿಧಿ ಅವರ ಪತ್ನಿ ಕಿರುತಿಗ ನಿರ್ದೇಶಿಸಿದ್ದು, ಜನವರಿ 14 ರಂದು ತೆರೆಗೆ ಬರಲಿದೆ.