Advertisement

ಶಿಸ್ತು ಪಾಲನೆಗೆ ಬಿಸಿಎಂ ಜಿಲ್ಲಾ ಅಧಿಕಾರಿ ಸೂಚನೆ

12:20 PM Aug 05, 2018 | |

ರಿಪ್ಪನ್‌ಪೇಟೆ: ಯಾವುದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಶಿಸ್ತು ಪಾಲನೆ ಅಗತ್ಯವೆಂದು ಜಿಲ್ಲಾ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಕುಮಾರ್‌ ಹೇಳಿದರು.

Advertisement

 ಪಟ್ಟಣದ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿ ನಿಲಯಕ್ಕೆ ಶುಕ್ರವಾರ ರಾತ್ರಿ ದಿಢೀರ್‌ ಭೇಟಿ ನೀಡಿ ಅಡಿಗೆ
ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಕಾರ್ಯವೈಖರಿಯನ್ನು ಗಮನಿಸಿದರು. ಅಡಿಗೆ ಪರಿಶೀಲನೆ ಮಾಡಿ, ಕಡತಗಳ
ಪರಿಶೀಲನೆ ನಡೆಸಿ ಅಡಿಗೆ ಸಿಬ್ಬಂದಿಗಳು ತಮ್ಮ ಕೆಲಸ ನಿರ್ವಹಣೆಯ ಸಂದರ್ಭದಲ್ಲಿ ಸಮವಸ್ತ್ರ ಧರಿಸಬೇಕು.

ಇದರಿಂದ ಶುಚಿತ್ವ ಮತ್ತು ಶಿಸ್ತು ಪಾಲನೆಯಾಗುತ್ತದೆ ಎಂದು ಸಿಬ್ಬಂದಿಗಳಿಗೆ ತಾಕೀತು ಮಾಡಿದರು. ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ ಸಾಮಾನ್ಯ ಜ್ಞಾನದ ಬಗ್ಗೆ ಪ್ರಶ್ನೆ ಕೇಳಿದರು. ಉತ್ತರ ನೀಡಲು
ತಡವರಿಸಿದ ವಿದ್ಯಾರ್ಥಿಗಳನ್ನುದ್ದೇಶಿಸಿ ಸರಕಾರ ನಿಮಗೆ ನೀಡುತ್ತಿರುವ ಸವಲತ್ತಿನ ಉದ್ದೇಶ ಸಮಾಜದಲ್ಲಿ ನೀವು
ಒಬ್ಬ ಜ್ಞಾನವಂತರಾಗಬೇಕೆಂಬುದು. 

ಆದರೆ ಕಲಿಯಲು ಬಂದ ನೀವು ಕಲಿಕೆಯಲ್ಲಿ ಆಸಕ್ತಿ ತೋರದಿದ್ದರೆ ಯೋಜನಾ ಉದ್ದೇಶ ವ್ಯರ್ಥವಾಗುತ್ತದೆ. ಆದ್ದರಿಂದ ನಿಮ್ಮ ಕರ್ತವ್ಯದ ಬಗ್ಗೆ ನಿಗಾವಹಿಸಿ ಎಂದು ಸೂಚಿಸಿದರು.  ತಾಲೂಕು ವಿಸ್ತರಣಾಧಿಕಾರಿ ರುದ್ರಮ್ಮ, ಮೇಲ್ವಿಚಾರಕಿ ದಾಕ್ಷಾಯಿಣಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next