ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಬಂಧಿಕರ ಆರು ಸ್ವತ್ತುಗಳ ಹರಾಜು ಪ್ರಕ್ರಿಯೆ ಮಂಗಳವಾರ ಮುಂಬೈನಲ್ಲಿ ನಡೆದಿದೆ.
ಹರಾಜು ಪ್ರಕ್ರಿಯೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗಿರುವುದು ವಿಶೇಷ. ದೆಹಲಿ ಮೂಲದ ವಕೀಲ ಭೂಪೇಂದ್ರ ಭಾರದ್ವಾಜ್ ನಾಲ್ಕು ಪ್ಲಾಟ್‌ಗಳನ್ನು ಹರಾಜಿನಲ್ಲಿ ಗೆದ್ದಿದ್ದಾರೆ.
ಇನ್ನು ಅಜಯ್ ಶ್ರೀವಾಸ್ತವ್ ಎನ್ನುವ ವಕೀಲರು ಎರಡು ಹಳೆಯ ಪಾಳುಬಿದ್ದ ಬಂಗಲೆಗಳನ್ನು ಹೊಂದಿದ್ದ ಜಾಗವನ್ನು ಹರಾಜಿನಲ್ಲಿ ಗೆದ್ದಿದ್ದಾರೆ. ಈ ಜಾಗದ ಆರಂಭಿಕ ಬೆಲೆ 5.35 ಲಕ್ಷ ರೂಪಾಯಿಯಿತ್ತು. ಶ್ರೀವಾಸ್ತವ್ 11.20 ಲಕ್ಷ ರೂಪಾಯಿಗೆ ಪ್ಲಾಟ್ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೇ, 4.30 ಲಕ್ಷ ರೂಪಾಯಿಗೆ ಮತ್ತೂಂದು ಪ್ಲಾಟ್ ಅನ್ನೂ ಪಡೆದಿದ್ದಾರೆ.
ಇದನ್ನೂ ಓದಿ:ಮುಂಬೈ vs ಡೆಲ್ಲಿ ಫೈನಲ್ ಫೈಟ್ : ಟಾಸ್ ಗೆದ್ದ ಆಯ್ಯರ್ ಪಡೆ ಬ್ಯಾಟಿಂಗ್ ಆಯ್ಕೆ
ದಾವೂದ್ ಸಂಬಂಧಿಕರ ಈ ಎಲ್ಲಾ ಸ್ವತ್ತುಗಳೂ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿದ್ದವು. ಇನ್ನು ದಾವೂದ್‌ನ ಬಂಟ ಇಕ್ಬಾಲ್ ಮಿರ್ಚಿಯ ಮುಂಬೈ ನಿವಾಸವೂ ಹರಾಜಿಗಿತ್ತಾದರೂ, ಯಾರೊಬ್ಬರೂ ಅದರ ಖರೀದಿಗೆ ಮುಂದಾಗಲಿಲ್ಲ.