Advertisement

Davis Cup Tennis; ಭಾರತ ವಿರುದ್ಧ ಉತ್ತಮ ನಿರ್ವಹಣೆ: ತಾಹಿರಿ

11:23 PM Sep 14, 2023 | Team Udayavani |

ಲಕ್ನೋ: ಡೇವಿಸ್‌ ಕಪ್‌ ವಿಶ್ವ ಬಣ ಎರಡರ ಹೋರಾಟದಲ್ಲಿ ನಮ್ಮ ತಂಡವು ಬಲಿಷ್ಠ ಭಾರತ ತಂಡದೆದುರು ಉತ್ತಮ ನಿರ್ವಹಣೆ ನೀಡುವ ದೃಢವಿಶ್ವಾಸಯಿದೆ ಎಂದು ಮೊರೊಕ್ಕೋ ತಂಡದ ನಾಯಕ ಮೆಹದಿ ತಾಹಿರಿ ಹೇಳಿದ್ದಾರೆ.

Advertisement

ತವರಿನಲ್ಲಿ ಸಂಭವಿಸಿದ ಭೀಕರ ಭೂಕಂಪದಿಂಧ ನಮ್ಮ ಆಟಗಾರರು ತೀವ್ರ ಆಘಾತಗೊಂಡಿದ್ದಾರೆ. ಭೂಕಂಪ ಸಂಭವಿಸಿದ ದಿನವೇ ನಾವು ಭಾರತಕ್ಕೆ ಪ್ರಯಾಣಿಸಿತ್ತು. ನಮ್ಮ ಹೃದಯ ಮತ್ತು ಆತ್ಮ ತವರಿನ ಜನರ ಹತ್ತಿರವಿದೆ. ಇಂತಹ ಕಠಿನ ಪರಿಸ್ಥಿತಿಯಲ್ಲಿ ನಾವು ಅವರಿಂದ ದೂರ ಇರಲು ಬಹಳ ಕಷ್ಟ ಆಗುತ್ತಿದೆ. ಬಹಳಷ್ಟು ಜನರು ಭೂಕಂಪದಿಂದ ಮೃತಪಟ್ಟಿದ್ದಾರೆ. ನಾವು ಅವರಿಗೆ ಸಹಾಯ ಮಾಡಲು ಬಯಸಿದ್ದೆವು. ದುರದೃಷ್ಟವಶಾತ್‌ ನಾವು ಇಲ್ಲಿದ್ದೇವೆ ಎಂದು ತಾಹಿರಿ ಹೇಳಿದ್ದಾರೆ. ಶುಕ್ರವಾರ ಸಂಭವಿಸಿದ 6.8 ತೀವ್ರತೆಯ ಭೂಕಂಪದಿಂದ ಸುಮಾರು ಮೂರು ಸಾವಿರದಷ್ಟು ಜನರು ಮೃತಪಟ್ಟಿದ್ದರೆ 5 ಸಾವಿರ ಜನರು ಗಾಯಗೊಂಡಿದ್ದರು.

ಭಾರತ ತಂಡದಲ್ಲಿ ಹಲವು ಉತ್ತಮ ಸಿಂಗಲ್ಸ್‌ ಆಟಗಾರರು ಇದ್ದಾರೆ. ಆದರೂ ನಾವು ಉತ್ತಮ ನಿರ್ವಹಣೆ ನೀಡಲು ಪ್ರಯತ್ನಿಸಲಿದ್ದೇವೆ ಎಂದು ತಾಹಿರಿ ಹೇಳಿದ್ದಾರೆ. ಡೇವಿಸ್‌ ಕಪ್‌ ಹೋರಾಟವು ಸೆ. 16 ಮತ್ತು 17ರಂದು ನಡೆಯಲಿದೆ.

ಭಾರತ ಪರ ಸುಮಿತ್‌ ನಗಲ್‌ ಮತ್ತು ಶಶಿ ಮುಕುಂದ್‌ ಸಿಂಗಲ್ಸ್‌ನಲ್ಲಿ ಆಡಲಿದ್ದಾರೆ. ರೋಹನ್‌ ಬೋಪಣ್ಣ ಮತ್ತು ಯೂಕಿ ಭಾಂಬ್ರಿ ಡಬಲ್ಸ್‌ನಲ್ಲಿ ಆಡಲಿದ್ದರೆ ದಿಗ್ವಿಜಯ್‌ ಪ್ರತಾಪ್‌ ಸಿಂಗ್‌ ತಂಡದ ಐದನೇ ಸದಸ್ಯರಾಗಿ ಇರಲಿದ್ದಾರೆ.

ಡೇವಿಸ್‌ನಲ್ಲಿ ಹೋರಾಡಲು ನಾವು ಇಲ್ಲಿಗೆ ಬಂದಿದ್ದೇವೆ. ನಾವು ದುರ್ಬಲ ತಂಡ ವಾಗಿರಬಹುದು. ಆದರೆ ಪಂದ್ಯ ಗಳು ರ್‍ಯಾಂಕಿಂಗ್‌ ಆಧಾರದಲ್ಲಿ ನಡೆ ಯುವುದಿಲ್ಲ. ಅಂಗಣದಲ್ಲಿ ಉತ್ತಮ ನಿರ್ವಹಣೆ ನೀಡುವವರನ್ನು ಪಂದ್ಯದ ಫ‌ಲಿ ತಾಂಶ ಅವಲಂಭಿಸಿದೆ. ನಾವು ಗೆಲ್ಲಲು ಹೋರಾಡ ಲಿದ್ದೇವೆ ಎಂದು ತಾಹಿರಿ ಹೇಳಿದ್ದಾರೆ.

Advertisement

ನಾವು ಮೊರೊಕ್ಕೋವನ್ನು ಹಗುರವಾಗಿ ಕಾಣುವುದಿಲ್ಲ. ಅದರ ಜತೆ ಇಲ್ಲಿನ ಭಾರೀ ಸೆಕೆ ನಮಗೆ ದೊಡ್ಡ ಸವಾಲು ಆಗಲಿದೆ. ಹೀಗಾಗಿ ಎಚ್ಚರಿಕೆಯಿಂದ ಆಡಿ ಗೆಲ್ಲಲು ಪ್ರಯತ್ನಿಸಲಿದ್ದೇವೆ ಎಂದು ಭಾರತ ತಂಡದ ನಾಯಕ ರೋಹಿತ್‌ ರಾಜ್‌ಪಾಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next