Advertisement

ಡೇವಿಸ್‌ ಕಪ್‌: ಬೆಂಗಳೂರಿನಲ್ಲಿ ಭಾರತ-ಉಜ್ಬೆಕಿಸ್ಥಾನ ಪಂದ್ಯ

03:45 AM Feb 18, 2017 | Team Udayavani |

ಹೊಸದಿಲ್ಲಿ: ಎಪ್ರಿಲ್‌ನಲ್ಲಿ ನಡೆಯಲಿರುವ ಭಾರತ-ಉಜ್ಬೆಕಿಸ್ಥಾನ ನಡುವಿನ ಡೇವಿಸ್‌ ಕಪ್‌ ಪಂದ್ಯಾವಳಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಅಕಾಡೆಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. 

Advertisement

ಭಾರತ ಆತಿಥ್ಯದಲ್ಲಿ ಇದೇ ತಿಂಗಳ ಆರಂಭದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಡೇವಿಸ್‌ ಕಪ್‌ ಸ್ಪರ್ಧೆಗಳು ನಡೆದಿದ್ದವು. ಇದರಲ್ಲಿ ಭಾರತ 4-1 ರಿಂದ ಭಾರೀ ಜಯ ಸಾಧಿಸಿದೆ. ಅದೇ ರೀತಿ ಉಜ್ಬೆಕಿಸ್ಥಾನ ತಂಡಡ ಕೊರಿಯಾ ವಿರುದ್ಧ ಗೆದ್ದಿದೆ.  ಹೀಗಾಗಿ ಎರಡೂ ತಂಡಗಳ ನಡುವೆ ಭಾರೀ ಹೋರಾಟವನ್ನು ನಿರೀಕ್ಷಿಸಬಹುದಾಗಿದೆ.

ಡೇವಿಸ್‌ ಕಪ್‌ನಲ್ಲಿ ಭಾರತ ಮತ್ತು ಉಜ್ಬೆಕಿಸ್ತಾನ ತಂಡಗಳು 4 ಬಾರಿ ಮುಖಾಮುಖೀಯಾಗಿದ್ದು, ತಲಾ ಎರಡು ಪಂದ್ಯಗಳನ್ನು ಗೆದ್ದ ಇತಿಹಾಸವನ್ನು ಹೊಂದಿವೆ. ಕೊನೆಯ ಬಾರಿಗೆ ಎರಡು ತಂಡಗಳು ಮುಖಾಮುಖೀಯಾಗಿದ್ದು 2012ರಲ್ಲಿ. ಈ ಪಂದ್ಯದಲ್ಲಿ ಉಜ್ಬೆಕಿಸ್ತಾನ 3-2ರಿಂದ ಜಯ ಸಾಧಿಸಿತ್ತು. ಡೇವಿಸ್‌ ಕಪ್‌ ಭಾರತ ತಂಡಕ್ಕೆ ಆಟವಾಡದ ನಾಯಕನಾಗಿ ಮಾಜಿ ಆಟಗಾರ ಮಹೇಶ್‌ ಭೂಪತಿ ಆಯ್ಕೆಯಾದ ಮೇಲೆ ಇದು ಮೊದಲ ಟೂರ್ನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next