Advertisement

ICC; ವನಿತಾ ಕ್ರಿಕೆಟ್‌ ಫ್ಯೂಚರ್‌ ಪ್ರವಾಸ ವೇಳಾಪಟ್ಟಿ ಪ್ರಕಟ

11:59 PM Nov 04, 2024 | Team Udayavani |

ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) 2025ರಿಂದ 29ರ ವರೆಗಿನ ವನಿತಾ ಕ್ರಿಕೆಟ್‌ ಫ್ಯೂಚರ್‌ ಪ್ರವಾಸ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಟೆಸ್ಟ್‌ ಪಂದ್ಯಗಳಿಗೆ ಮತ್ತು ದ್ವಿಪಕ್ಷೀಯ ಸರಣಿಗೆ ಹೆಚ್ಚಿನ ಪ್ರಾಮುಖ್ಯ ನೀಡಿದೆ. ಈ ಅವಧಿ ಯಲ್ಲಿ ಭಾರತವು ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ವಿರುದ್ಧ ತವರಿನ ಸರಣಿಗೆ ಆತಿಥ್ಯ ವಹಿಸಲಿದೆ.

Advertisement

ಆಸ್ಟ್ರೇಲಿಯ, ಇಂಗ್ಲೆಂಡ್‌ ಮಾತ್ರವಲ್ಲದೇ ಭಾರತವು ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ವಿರುದ್ಧವೂ ಆಡಲಿದೆ. ಜಿಂಬಾಬ್ವೆ ತಂಡವು ಫ್ಯೂಚರ್‌ ಪ್ರವಾಸ ವೇಳಾಪಟ್ಟಿಯ 11ನೇ ಸದಸ್ಯರಾಗಿ ಸೇರ್ಪಡೆಗೊಂಡಿದೆ. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತ ವನಿತಾ ತಂಡವು ನ್ಯೂಜಿಲ್ಯಾಂಡ್‌, ವೆಸ್ಟ್‌ಇಂಡೀಸ್‌, ಐರ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಲಿದೆ. ಪ್ರತಿಯೊಂದು ಸದಸ್ಯ ರಾಷ್ಟ್ರವು ತವರು ಮತ್ತು ವಿದೇಶದಲ್ಲಿ ನಾಲ್ಕು ಸರಣಿಯಲ್ಲಿ ಆಡಲಿದೆ.

ಇದಲ್ಲದೇ ಭಾರತ ತಂಡವು ಇಂಗ್ಲೆಂಡಿನಲ್ಲಿ ನಡೆಯಲಿರುವ 2026ರ ಐಸಿಸಿ ವನಿತಾ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ತ್ರಿಕೋನ ಸರಣಿ ಯೊಂದರಲ್ಲಿ ಕಾಣಿಸಿಕೊಳ್ಳಲಿದೆ. ಹಾಲಿ ಚಾಂಪಿಯನ್‌ ನ್ಯೂಜಿಲ್ಯಾಂಡ್‌ ಮತ್ತು ಇಂಗ್ಲೆಂಡ್‌ ತ್ರಿಕೋನ ಸರಣಿಯ ಇನ್ನುಳಿದ ಎರಡು ತಂಡಗಳು.

ಪ್ರವಾಸ ವೇಳಾಪಟ್ಟಿ
ನಾಲ್ಕು ವರ್ಷಗಳ ಅವಧಿಯಲ್ಲಿ ಎಲ್ಲ ಮಾದರಿಯಲ್ಲಿ ವನಿತಾ ಕ್ರಿಕೆಟ್‌ ಪಂದ್ಯಗಳು ನಡೆಯಲಿವೆ. 400ಕ್ಕಿಂತಲೂ ಹೆಚ್ಚಿನ ಪಂದ್ಯಗಳು ಜರಗಲಿವೆ. ತಲಾ ಮೂರು ಪಂದ್ಯ ಗಳ 44 ಏಕದಿನ ಸರಣಿಯಲ್ಲಿ 132 ಪಂದ್ಯಗಳನ್ನು ಆಡಲಾಗುತ್ತದೆ. 2029ರಲ್ಲಿ ವನಿತಾ ಏಕದಿನ ವಿಶ್ವಕಪ್‌ ಕೂಡ ನಡೆಯಲಿದೆ.

ಹೆಚ್ಚು ಟೆಸ್ಟ್‌  
ಈ ಬಾರಿ ಹೆಚ್ಚು ಟೆಸ್ಟ್‌ ಪಂದ್ಯ ಗಳಿಗೆ ಎಲ್ಲ ಸದಸ್ಯ ರಾಷ್ಟ್ರಗಳು ಆದ್ಯತೆ ನೀಡಿವೆ. ಆಸ್ಟ್ರೇಲಿಯ, ಇಂಗ್ಲೆಂಡ್‌, ಭಾರತ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ಇಂಡೀಸ್‌ ಏಕದಿನ ಮತ್ತು ಟಿ20 ಸೇರಿರುವ ಬಹು ಮಾದರಿಯ ಸರಣಿಯಲ್ಲಿ ಆಡಲು ಒಪ್ಪಿಗೆ ಸೂಚಿಸಿವೆ ಎಂದು ಐಸಿಸಿ ಕ್ರಿಕೆಟ್‌ನ ಜನ ರಲ್‌ ಮ್ಯಾನೇಜರ್‌ ವಸೀಮ್‌ ಖಾನ್‌ ಹೇಳಿದ್ದಾರೆ. ಆಸ್ಟ್ರೇಲಿಯ ತಂಡವು ಗರಿಷ್ಠ ಸರಣಿಯಲ್ಲಿ ಆಡಲಿದೆ. ಇಂಗ್ಲೆಂಡ್‌, ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಲಾ ಎರಡು ಮತ್ತು ವೆಸ್ಟ್‌ ಇಂಡೀಸ್‌ ವಿರುದ್ಧ ಒಂದು ಸರಣಿಯಲ್ಲಿ ಆಡಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next