Advertisement

Vice President: 2047ಕ್ಕೆ ವಿಕಸಿತ ಭಾರತ ನಿರ್ಮಾಣ: ಜಗದೀಪ್‌ ಧನಕರ್‌

12:25 AM Oct 26, 2024 | Team Udayavani |

ಮಂಡ್ಯ: ಇಸವಿ 2047ರ ವೇಳೆಗೆ ವಿಕಸಿತ ಭಾರತವಾಗಲಿದೆ. ಅದಕ್ಕಾಗಿ ಯುವಜನತೆ ಕೈಜೋಡಿಸ ಬೇಕು. ಮಾಜಿ ರಾಷ್ಟ್ರಪತಿ ಅಬ್ದುಲ್‌ಕಲಾಂ ಪರಿಕಲ್ಪನೆಯಂತೆ ಪ್ರತಿಯೊಬ್ಬರೂ ಭವಿಷ್ಯ ಭಾರತದ ಕನಸು ಕಾಣಬೇಕು ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಹೇಳಿದರು.

Advertisement

ಆದಿಚುಂಚನಗಿರಿ ವಿಶ್ವವಿದ್ಯಾಲ ಯದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಬಿಜಿಎಸ್‌ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅನಂತರ ಡಿಜಿ-ಮೆಡ್‌ಗೆ ಚಾಲನೆ ನೀಡಿ ಮಾತನಾಡಿದರು. ದೇಶದ ಜಿಡಿಪಿ ದರ ಹೆಚ್ಚಾಗಿ ಅಭಿವೃದ್ಧಿಯತ್ತ ಭಾರತ ಸಾಗುತ್ತಿದೆ. ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ ಶಿಕ್ಷಣದ ಜತೆಗೆ ಸಂಸ್ಕೃತಿಯ ಸಾರವನ್ನು ಸಾರುತ್ತಿದೆ. ಮಂದಿರ, ಮಠದ ಕಲ್ಪನೆಯನ್ನು ಸಹ ನೀಡುತ್ತಿದೆ ಎಂದು ಶ್ಲಾಘಿಸಿದರು.

ಅವಿಸ್ಮರಣೀಯ
ಪೀಠಾಧ್ಯಕ್ಷ ಡಾ| ನಿರ್ಮಲಾನಂದ ನಾಥ ಸ್ವಾಮೀಜಿ ಮಾತನಾಡಿ, 20 ವರ್ಷಗಳ ಹಿಂದೆ ಅಂದಿನ ರಾಷ್ಟ್ರಪತಿಯಾಗಿದ್ದ ಅಬ್ದುಲ್‌ ಕಲಾಂ ಅವರು ಈ ವಿದ್ಯಾಸಂಸ್ಥೆಯಲ್ಲಿ ಸಂವಾದ ನಡೆಸಿ 2020 ವಿಷನ್‌ ಬಗ್ಗೆ ಸಂದೇಶ ನೀಡಿದ್ದರು. 20 ವರ್ಷಗಳ ಅನಂತರ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ನಮ್ಮ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಲು ಬಂದಿರುವುದು ಅವಿಸ್ಮರಣೀಯ ಎಂದು ಹೇಳಿದರು.

ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರನ್ನು ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಕೈಹಿಡಿದು ವೇದಿಕೆಗೆ ಕರೆತಂದರು. ರಾಷ್ಟ್ರಗೀತೆ ಬಳಿಕ ದೇವೇಗೌಡರಿಗೆ ಕೈ ಮುಗಿದು, ಕಾಲಿಗೆ ನಮಸ್ಕರಿಸಿದದರು. ಇದಕ್ಕೂ ಮೊದಲು ಹೆಲಿಕಾಪ್ಟರ್‌ ಮೂಲಕ ಆಗಮಿಸಿದ ಅವರು ನೇರವಾಗಿ ಕಾಲಭೈರವೇಶ್ವರಸ್ವಾಮಿಯ ದರ್ಶನ ಪಡೆದರು.

ಇಂದು ದೇವೇಗೌಡರ ನಿವಾಸಕ್ಕೆ ಉಪರಾಷ್ಟ್ರಪತಿ
ಬೆಂಗಳೂರು: ರಾಜ್ಯ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಶನಿವಾರ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 9.30 ಗಂಟೆಗೆ ದೇವೇಗೌಡರ ಪದ್ಮನಾಭನಗರದ ನಿವಾಸಕ್ಕೆ ಆಗಮಿಸಲಿರುವ ಧನಕರ್‌, ದೇವೇಗೌಡರ ಪತ್ನಿ ಚನ್ನಮ್ಮ ಆರೋಗ್ಯವನ್ನು ವಿಚಾರಿಸಲಿದ್ದಾರೆ.

Advertisement

ಭಾರತರತ್ನ ಸಿಗಬೇಕಿತ್ತು
50 ವರ್ಷಗಳ ಹಿಂದೆ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರು ಗ್ರಾಮೀಣ ಭಾಗದ ಖಾಲಿ ಸ್ಥಳದಲ್ಲಿ ನೀರು ಸಿಗದ ನಾಗಮಂಗಲದ ಈ ಸ್ಥಳದಲ್ಲಿ ವಿದ್ಯಾಭ್ಯಾಸ ನೀಡಲು ಆದಿಚುಂಚನಗಿರಿಯಂತಹ ವಿಶ್ವವಿದ್ಯಾಲಯ ಸ್ಥಾಪಿಸಿದರು. ಇದು ಅವಿಸ್ಮರಣೀಯ ವಿಷಯ. ಬಾಲಗಂಗಾಧರನಾಥ ಶ್ರೀಗಳಿಗೆ ಭಾರತರತ್ನ ಸಿಗಬೇಕಿತ್ತು. ಆದರೆ, ಪದ್ಮಭೂಷಣ ಪ್ರಶಸ್ತಿ ಸಿಕ್ಕಿತು ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next