Advertisement

ವಿದ್ಯುತ್‌ ಬಿಲ್‌ ಸ್ಪಷ್ಟನೆಗೆ ಸಂಪರ್ಕಿಸಿ

05:08 PM May 18, 2020 | Naveen |

ದಾವಣಗೆರೆ: ಕೋವಿಡ್ ವೈರಸ್‌ ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ವಿಧಿಸಿದ್ದರಿಂದ ಮೇ ತಿಂಗಳಲ್ಲಿ ವಿತರಿಸಿದ ವಿದ್ಯುತ್‌ ಬಿಲ್‌ ಸಂಬಂಧ ಸ್ಪಷ್ಟೀಕರಣಕ್ಕಾಗಿ ಬೆಸ್ಕಾಂ ಉಪವಿಭಾಗದ ಕಚೇರಿ ದೂರವಾಣಿ ಸಂಖ್ಯೆಗೆ ಕರೆ, ವಾಟ್ಸ್‌ಆ್ಯಪ್‌ ಅಥವಾ ಎಸ್‌ಎಂಎಸ್‌ ಮೂಲಕ ಮಾಹಿತಿ ಪಡೆಯಬಹುದು ಎಂದು ಬೆಸ್ಕಾಂ ಚಿತ್ರದುರ್ಗ ವಿಭಾಗದ ಮುಖ್ಯ ಇಂಜಿನಿಯರ್‌ ತಿಳಿಸಿದ್ದಾರೆ.

Advertisement

ಕಳೆದ ಏಪ್ರಿಲ್‌ ತಿಂಗಳಿನಲ್ಲಿ ಗ್ರಾಹಕರಿಗೆ ಮೀಟರ್‌ ರೀಡಿಂಗ್‌ ಪ್ರಕಾರ ಬಿಲ್‌ ನೀಡಿಲ್ಲ. ಬದಲಾಗಿ ಹಿಂದಿನ ತಿಂಗಳುಗಳ ಬಳಕೆಯ ಸರಾಸರಿ ಆಧಾರದ ಮೇಲೆ ವಿದ್ಯುತ್‌ ಬಿಲ್‌ ಸಿದ್ಧಪಡಿಸಲಾಗಿದೆ. ಮೇ ತಿಂಗಳಲ್ಲಿ ಸೀಲ್‌ ಡೌನ್‌ ಏರಿಯಾ ಹೊರತುಪಡಿಸಿ ಉಳಿದ ಎಲ್ಲಾ ಸ್ಥಾವರಗಳಿಗೆ ವಾಸ್ತವಿಕವಾಗಿ ಬಳಸಿದ ಯುನಿಟ್‌ ಆಧಾರದಲ್ಲಿ ವಿದ್ಯುತ್‌ ಬಿಲ್‌ ವಿತರಿಸಲಾಗುತ್ತಿದೆ. ಮೇ ತಿಂಗಳಲ್ಲಿ ವಿತರಿಸಲಾದ ವಿದ್ಯುತ್‌ ಬಿಲ್‌ ಗಳ ಬಗ್ಗೆ ಸ್ಪಷ್ಟೀಕರಣದ ಅಗತ್ಯವಿದ್ದಲ್ಲಿ ಬೆಸ್ಕಾಂನ ಉಪವಿಭಾಗ ಕಚೇರಿಗಳ ದೂರವಾಣಿ ಸಂಖ್ಯೆಗಳಿಗೆ ವಾಟ್ಸಾಪ್‌, ಎಸ್‌ಎಂಎಸ್‌ ಅಥವಾ ದೂರವಾಣಿ ಮುಖಾಂತರ ಸಂಪರ್ಕಿಸಬಹುದು.

ದಾವಣಗೆರೆ ನಗರ ಉಪ ವಿಭಾಗ -1: 9448279028, 9449844729. ದಾವಣಗೆರೆ ನಗರ ಉಪ ವಿಭಾಗ -2: 9448279029, 9449844731. ದಾವಣಗೆರೆ ಗ್ರಾಮಾಂತರ ಉಪವಿಭಾಗ: 9448279030, 9449843556. ಆನಗೋಡು -9448094833, 9449844744. ಜಗಳೂರು- 9448279031, 9449844743. ಚನ್ನಗಿರಿ -9448279032, 9449844738. ಸಂತೆಬೆನ್ನೂರು -9448279033, 9449844740. ಹರಿಹರ -9448279034, 9449843562. ಹೊನ್ನಾಳಿ -9448279035, 9449843563. ನ್ಯಾಮತಿ -8277893935, 8095837100 ಮೂಲಕ ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next