Advertisement

ಕೋವಿಡ್: 7ನೇ ಸ್ಥಾನದಲ್ಲಿ ದಾವಣಗೆರೆ; ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಲ್ಲೇ ಹೆಚ್ಚು

02:15 AM May 08, 2020 | Hari Prasad |

ಬೆಂಗಳೂರು: ಕೋವಿಡ್ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ವಾರದ ಹಿಂದಷ್ಟೇ 17ನೇ ಸ್ಥಾನದಲ್ಲಿದ್ದ ದಾವಣಗೆರೆ ಜಿಲ್ಲೆ ಈಗ ಏಕಾಏಕಿ 7ನೇ ಸ್ಥಾನಕ್ಕೆ ಜಿಗಿದಿದೆ.

Advertisement

ಇಲ್ಲಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಗುರುವಾರ ಮತ್ತೆ ಮೂರು ಪ್ರಕರಣಗಳು ದೃಢವಾಗಿದ್ದು, ಇವರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿನ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿದೆ.

ದಾವಣಗೆರೆಯಲ್ಲಿ ಎಪ್ರಿಲ್‌ ಅಂತ್ಯದಲ್ಲಿದ್ದ ಸೋಂಕುಪೀಡಿತರ ಸಂಖ್ಯೆ 4 ಮಾತ್ರ. ಆದರೆ ಮೇ ಮೊದಲ ವಾರದಲ್ಲಿ 44 ಪ್ರಕರಣಗಳು ದೃಢವಾಗಿವೆ. ಸದ್ಯ ಬೆಂಗಳೂರು ಹೊರತುಪಡಿಸಿದರೆ ಇಲ್ಲಿಯೇ ಅತೀ ಹೆಚ್ಚು ಸಕ್ರಿಯ ಪ್ರಕರಣಗಳಿವೆ (41).

ಉಳಿದಂತೆ ರಾಜ್ಯಾದ್ಯಂತ ಸೋಂಕುಪೀಡಿತರ ಸಂಖ್ಯೆ 700 ದಾಟಿದೆ. ಗುರುವಾರ ಮತ್ತೆ 12 ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸಂಖ್ಯೆ 705ಕ್ಕೆ ಏರಿದೆ. ಇವೆಲ್ಲದರ ನಡುವೆ 12 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಮಹಾರಾಷ್ಟ್ರ: 18 ಸಾವಿರ ಸೋಂಕು
ಮಹಾರಾಷ್ಟ್ರದಲ್ಲಿ ಕೋವಿಡ್ ಪೀಡಿತರ ಸಂಖ್ಯೆ 18 ಸಾವಿರ ದಾಟಿದೆ. ಗುರುವಾರ 1,362  ಪ್ರಕರಣಗಳು ದಾಖಲಾಗಿವೆ. ಧಾರಾವಿಯಲ್ಲಿ 50 ಪ್ರಕರಣ ಪತ್ತೆಯಾಗಿವೆ.

Advertisement

ಮಹಾರಾಷ್ಟ್ರದಲ್ಲಿ 531 ಪೊಲೀಸರಿಗೆ ಸೋಂಕು ತಗುಲಿದೆ. ಮುಂಬಯಿ ನಗರ ಒಂದರಲ್ಲೇ 250 ಪ್ರಕರಣಗಳು ದೃಢಪಟ್ಟಿವೆ. ಅರ್ಥರ್‌ ಜೈಲಿನ 72 ಕೈದಿಗಳು ಮತ್ತು 7 ಸಿಬಂದಿಗೂ ಕೋವಿಡ್ ತಗುಲಿದೆ.

ಕರಾವಳಿಯಲ್ಲಿ ಹೊಸ ಪ್ರಕರಣವಿಲ್ಲ
ಕರಾವಳಿ ಜಿಲ್ಲೆಗಳಲ್ಲಿ ಗುರುವಾರ ಹೊಸ ಕೊವಿಡ್ ಪ್ರಕರಣ ಪತ್ತೆಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 92 ವರದಿಗಳು ನೆಗೆಟಿವ್‌ ಆಗಿವೆ. ಇನ್ನೂ 272 ವರದಿ ಬರಲು ಬಾಕಿ ಇದೆ. ಕಾಸರಗೋಡು ಜಿಲ್ಲೆಯಲ್ಲಿಯೂ ಗುರುವಾರ ಹೊಸ ಸೋಂಕು ದೃಢಪಟ್ಟಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next