Advertisement
ಕೊಡಗು ಜಿಲ್ಲಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಲಕ್ಷಣ ತೀರ್ಥ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಹನಗೋಡು ಅಣೆಕಟ್ಟೆಯಲ್ಲಿ ನೀರಿನ ಒಳಹರಿವು ಹೆಚ್ಚಿದೆ. ನಾಲೆಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸಲಾಗುತ್ತಿದ್ದು, ಜೊತೆಗೆ ಕಳೆದೆರಡು ದಿನಗಳಿಂದ ಬೀಳುತ್ತಿದ್ದ ಮಳೆಯಿಂದಾಗಿ ನಾಲೆಯಲ್ಲಿ ನೀರಿನ ಹರಿವು ಹೆಚ್ಚಾಗಿ ಏರಿ ಒಡೆದಿದೆ. ಆದರೆ ಈವರೆವಿಗೂ ಯಾವ ಎಂಜಿನಿಯರ್‌ಗಳು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ.
Related Articles
Advertisement
ನಂತರ ಒಡೆದಿದ್ದ ಕೂನಿಯನ್ನು ನಿರ್ಮಿಸಿ, ನಾಲೆ ದುರಸ್ತಿ ಪಡಿಸಲಾಗಿತ್ತು. ಈ ಏರಿ ಅಪಾಯದಲ್ಲಿರುವ ಬಗ್ಗೆ ಹಲವಾರು ಬಾರಿ ಎಂಜಿನಿಯರ್‌ಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾರೂ ಗಮನ ಹರಿಸಿಲ್ಲ, ಇದೀಗ ಮತ್ತೆ ಏರಿ ಒಡೆದು ರೈತರಿಗೆ ತೊಡಕಾಗಿದೆ.
ಎಂಜಿನಿಯರ್‌ಗಳು ನಾಪತ್ತೆ: ನಾಲೆ ಏರಿ ಒಡೆದು ಎರಡು ದಿನಗಳಾದವರೂ ಸ್ಥಳಕ್ಕೆ ಈವರೆವಿಗೆ ಸಂಬಂಧಿಸಿದ ಎಂಜಿನಿಯರ್ ಭೇಟಿ ನೀಡಿ, ದುರಸ್ತಿಗೆ ಮುಂದಾಗಿಲ್ಲ. ಈ ಸಂಬಂಧ ಪತ್ರಿಕೆಯು ಎಂಜಿನಿಯರ್‌ಗಳ ಸಂಪರ್ಕಕ್ಕೆ ಯತ್ನಿಸಿದರೂ ಯಾರೊಬ್ಬರೂ ಸಂಪರ್ಕಕ್ಕೆ ಸಿಕ್ಕಿಲ್ಲ.
ರೈತರ ಆಗ್ರಹ: ಇನ್ನಾದರೂ ಹಾರಂಗಿ ಎಂಜಿನಿಯರ್ ಸ್ಥಳಕ್ಕೆ ಭೇಟಿ ಇತ್ತು ತಕ್ಷಣಕ್ಕೆ ಏರಿ ದುರಸ್ತಿ ಪಡಿಸಬೇಕು, ಏರಿ ಅಗಲಗೊಳಿಸಿ ಕಾಂಕ್ರೀಟ್ ಲೈನಿಂಗ್ ಮಾಡಬೇಕು. ಶಾಸಕರು ಸಹ ಎಂಜಿನಿಯರ್‌ಗಳಿಗೆ ಅಗತ್ಯ ಕ್ರಮ ಕೆಗೊಳ್ಳಲು ಸೂಚಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಈವರೆಗೆ ನನ್ನ ಗಮನಕ್ಕೆ ಬಂದಿಲ್ಲ ತಕ್ಷಣಕ್ಕೆ ಏರಿ ದುರಸ್ತಿಪಡಿಸಿ, ಮುಂದಿನ ಕೆರೆಗಳಿಗೆ ನೀರು ತುಂಬಿಸಲು ಎಂಜಿನಿಯರ್ ಗಳಿಗೆ ಸೂಚಿಸುತ್ತೇನೆ.-ಶಾಸಕ ಎಚ್.ಪಿ.ಮಂಜುನಾಥ್