Advertisement
ಹಸುಗಳಿಗೆ ಮೇವು ತರಲು ಹೋಗಿದ್ದಾಗ ಚಿರತೆ ದಾಳಿ ನಡೆಸಿದೆ. ರಾತ್ರಿಯಾದರೂ ಕರಿಯಮ್ಮ ಬಾರದಿದ್ದಾಗ ಮನೆಯವರು ಹುಡುಕಾಟ ನಡೆಸಿದ್ದು, ಜಮೀನಿನಲ್ಲಿ ಶವ ಪತ್ತೆ ಆಗಿದೆ.
ಶವ ಹೊತ್ತೂಯ್ಯಲು ಚಿರತೆ ಮತ್ತೆ ಬರಬಹುದು ಎಂದು ಗ್ರಾಮಸ್ಥರು ಘಟನೆ ಸ್ಥಳದಲ್ಲಿ ಬೆಂಕಿ ಹಾಕಿಕೊಂಡು ಕಾಯುತ್ತಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಚಿರತೆ ಮತ್ತೆ ಬಂದು ಮೃತದೇಹವನ್ನು ಹೊತ್ತೂಯಲು ಯತ್ನಿಸಿತು. ಆಗ ಗ್ರಾಮಸ್ಥರು ದೊಣ್ಣೆ, ಟಾರ್ಚ್ಗಳನ್ನು ಬಳಸಿ ಚಿರತೆಯನ್ನು ಬೆದರಿಸಿ ಓಡಿಸಿದರು. ಚಿರತೆ ಸೆರೆಗೆ ಕಾರ್ಯಪಡೆ
ಮಹಿಳೆಯನ್ನು ಬಲಿಪಡೆದ ಚಿರತೆಯ ಸೆರೆಗೆ ವಿಶೇಷ ತಂಡವನ್ನು ರಚನೆ ಮಾಡಿದ್ದು, 40 ಸಿಬಂದಿ, 10 ಬೋನು, 18 ಸಿಸಿ ಕೆಮರಾ, ಥರ್ಮಾಲ್ ಡ್ರೋನ್ ಕೆಮರಾ, ಬನ್ನೇರುಘಟ್ಟದ ಅರವಳಿಕೆ ವೈದ್ಯರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಡಿಎಫ್ಒ ಸೆರೀನಾ ಸಿಕ್ಕಲಿಗಾರ್ ಹೇಳಿದ್ದಾರೆ.