Advertisement

Udupi: ಕಾರಿಗೆ ಗುದ್ದಿದ ಪಿಕಪ್‌ ವಾಹನ: ಕಾರು ಜಖಂ

12:01 AM Nov 11, 2024 | Team Udayavani |

ಉಡುಪಿ: ವಾಹನ ದಟ್ಟಣೆ ಸಂದರ್ಭ ನಿಲ್ಲಿಸಿದ್ದ ಕಾರಿಗೆ ಪಿಕಪ್‌ ಹಿಂದಿನಿಂದ ಢಿಕ್ಕಿ ಹೊಡೆದು ಕಾರು ಮುಂದಕ್ಕೆ ಚಲಿಸಿ ಮುಂದಿದ್ದ ಪಿಕಪ್‌ ವಾಹನಕ್ಕೆ ತಾಗಿ, ಕಾರು ಜಖಂಗೊಂಡ ಘಟನೆ ಮಣಿಪಾಲ-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

Advertisement

ಹೆದ್ದಾರಿ 169ಎ ರಸ್ತೆಯ ಶಿವಳ್ಳಿ ಜುವೆಲ್ಲರಿ ಬಳಿ ಕಾರ್ಕಳ ನಿವಾಸಿ ರಜತ್‌ ಕುಮಾರ್‌ ಎಂಬವರು ಕಾರು ನಿಲ್ಲಿಸಿದ್ದರು. ಈ ವೇಳೆ ಹಿಂದಿನಿಂದ ಬಂದ ಟಿಪ್ಪರ್‌ ಕಾರಿಗೆ ಢಿಕ್ಕಿ ಹೊಡೆದಿದೆ. ಕಾರು ಮುಂದಕ್ಕೆ ಚಲಿಸಿ ಮುಂದಿದ್ದ ಪಿಕಪ್‌ ವಾಹನಕ್ಕೆ ತಾಗಿದೆ.

ಘಟನೆಯಲ್ಲಿ ಕಾರಿನ ಹಿಂಭಾಗ ಮತ್ತು ಮುಂಭಾಗ ಜಖಂಗೊಂಡಿದ್ದು ಟಿಪ್ಪರ್‌ ಚಾಲಕನ ನಿರ್ಲಕ್ಷ್ಯ, ಅಜಾಗರೂಕತೆ ಚಾಲನೆ ಕುರಿತು ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next