Advertisement

1,000 ಕೋಟಿ ಗಳಿಕೆಯತ್ತ ಅಮೀರ್‌ ಚಿತ್ರ ದಂಗಲ್‌

10:37 AM May 15, 2017 | Team Udayavani |

ಹೊಸದಿಲ್ಲಿ: ನಟ ಅಮೀರ್‌ ಖಾನ್‌ ನಟನೆಯ ನೈಜ ಕಥೆ ಆಧರಿಸಿದ ದಂಗಲ್‌ ಚಿತ್ರ ಚೀನದಲ್ಲೂ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿದ್ದು, 1000 ಕೋಟಿ ಗಳಿಕೆಯತ್ತ ದಾಪುಗಾಲಿಟ್ಟಿದೆ. ‘ಶುಯಿ ಜಿಯೊ ಬಾಬಾ’ ಎಂಬ ಹೆಸರಲ್ಲಿ ಮೇ 5ರಂದು ಚೀನದ 9000 ಪರದೆಗಳಲ್ಲಿ ತೆರೆ ಕಂಡ ದಂಗಲ್‌, ಮೊದಲ ದಿನವೇ 88 ಕೋಟಿ ಕೊಳ್ಳೆ ಹೊಡೆದಿದೆ. 

Advertisement

ಈಗಾಗಲೇ ಚೀನದಲ್ಲಿ ಗಳಿಕೆ 200 ಕೋಟಿ ರೂ. ಮೀರಿದ್ದು, ಚಿತ್ರ ಇದೇ ವೇಗದಲ್ಲಿ ಮುನ್ನುಗ್ಗಿದರೆ ಕೆಲವೇ ದಿನಗಳಲ್ಲಿ ಚಿತ್ರ ವಿಶ್ವಾದ್ಯಂತ ಒಟ್ಟಾರೆ 1000 ಕೋಟಿ ರೂ. ಗಳಿಸಲಿದೆ. ಈ ಚಮತ್ಕಾರ ನಡೆದರೆ ರಾಜಮೌಳಿ ನಿರ್ದೇಶನದ ‘ಬಾಹುಬಲಿ-2’ ಚಿತ್ರದೊಂದಿಗೆ ‘ದಂಗಲ್‌’ ಕೂಡ ಸಾವಿರ ಕೋಟಿ ಕ್ಲಬ್‌ ಸೇರಲಿದೆ. ಈ ಮೂಲಕ 1000 ಕೋಟಿ ಗಳಿಸಿದ ಮೊದಲ ಬಾಲಿವುಡ್‌ ಚಿತ್ರ ಎಂಬ ಖ್ಯಾತಿಗೂ ಒಳಗಾಗಲಿದೆ. 2016ರ ಡಿಸೆಂಬರ್‌ನಲ್ಲಿ ತೆರೆ ಕಂಡ ದಂಗಲ್‌ ಚಿತ್ರ ಈವರೆಗೆ ಭಾರತದಲ್ಲಿ 744 ಕೋಟಿ ರೂ. ಗಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next