Advertisement

ಇಂದಿನಿಂದ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ -2ಗೆ ಶುರು

09:30 AM Jul 21, 2019 | Lakshmi GovindaRaj |

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ (ಡಿಕೆಡಿ)ನ ಫ್ಯಾಮಿಲಿ ವಾರ್‌ ಸೀಜನ್‌-2 ಪ್ರಸಾರವಾಗಲು ವೇದಿಕೆ ಸಿದ್ಧವಾಗಿದೆ. ಈ ಹೊಸ ಸೀಜನ್‌ನಲ್ಲಿ ಜೀ ಕನ್ನಡ ವಾಹಿನಿಯ ಕುಟುಂಬದ ಪ್ರಮುಖ ತಾರೆಗಳು ಪಾಲ್ಗೊಂಡು ವೀಕ್ಷಕರನ್ನು ಮನರಂಜಿಸಲಿದ್ದಾರೆ.

Advertisement

ಈಗಾಗಲೇ ಜೀ ವಾಹಿನಿಯಲ್ಲಿ ಜನಪ್ರಿಯವಾಗಿರುವ ಕಮಲಿ, ಗಟ್ಟಿಮೇಳ, ಬ್ರಹ್ಮಗಂಟು, ಜೋಡಿಹಕ್ಕಿ, ರಾಧಾ ಕಲ್ಯಾಣ, ಮಹಾದೇವಿ, ಪಾರು, ಜೋಡಿಹಕ್ಕಿ, ಉಘೇ ಉಘೇ ಮಹಾದೇಶ್ವರ, ಸರೆಗಮಪ, ಡ್ರಾಮಾ ಜೂನಿಯರ್ ಸೀಜನ್‌-2 ಮತ್ತು ಕಾಮಿಡಿ ಕಿಲಾಡಿಗಳು ಸೀಜನ್‌-3 ಸೇರಿದಂತೆ, ಹಲವಾರು ರಿಯಾಲಿಟಿ ಶೋ ಮತ್ತು ಧಾರಾವಾಹಿಗಳಿಂದ ಹೊಸ ಪ್ರತಿಭಾವಂತರು ಫ್ಯಾಮಿಲಿ ವಾರ್‌ ಸೀಜನ್‌-2ರಲ್ಲಿ ಪ್ರಮುಖ ಸ್ಪರ್ಧಿಗಳಾಗಿ ಭಾಗವಹಿಸುತ್ತಿದ್ದಾರೆ.

ಇನ್ನು ಈ ಬಾರಿಯ ಡಿಕೆಡಿ ಸೀಜನ್‌ನಲ್ಲಿ ನಟಿ ರಕ್ಷಿತಾ, ವಿಜಯ ರಾಘವೇಂದ್ರ ಮತ್ತು ಸಂಗೀತ ಸಂಯೋಜಕ ಅರ್ಜುನ್‌ ಜನ್ಯಾ ತೀರ್ಪುಗಾರರಾಗಿ ಭಾಗವಹಿಸಲಿದ್ದು, ಅನುಶ್ರೀ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ಈ ಕಾರ್ಯಕ್ರಮ ಇಂದಿನಿಂದ (ಜುಲೈ 20) ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಜೀ ಕನ್ನಡ ಮತ್ತು ಜೀ ಕನ್ನಡ ಹೆಚ್‌.ಡಿ ಯಲ್ಲಿ ಪ್ರಸಾರವಾಗಲಿದ್ದು, ಇಂದು ಕಾರ್ಯಕ್ರಮದ ಗ್ರ್ಯಾಂಡ್‌ ಪ್ರೀಮಿಯರ್‌ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next