Advertisement

Udupi ಟೆಸ್ಟ್‌ ಡ್ರೈವ್‌ ನೆಪದಲ್ಲಿ ಕಾರಿಗೆ ಜಖಂ; ಕಳ್ಳತನಕ್ಕೆ ಯತ್ನ

09:39 PM May 21, 2024 | Team Udayavani |

ಉಡುಪಿ: ಟೆಸ್ಟ್‌ ಡ್ರೈವ್‌ ನೆಪದಲ್ಲಿ ಕಾರನ್ನು ಜಖಂಗೊಳಿಸಿದ ಘಟನೆ ನಡೆದಿದೆ.

Advertisement

ಮೇ 17ರಂದು ಬಾರಕೂರಿನ ಆಸ್ಟಲಿನ್‌ ಸೋನಲ್‌ ಲೂವಿಸ್‌, ತನ್ನ ಸ್ವಿಫ್ಟ್ ಡಿಸೈರ್‌ ಕಾರನ್ನು ಮಾರಾಟ ಮಾಡುವ ಉದ್ದೇಶದಿಂದ ಪರಿಚಯದ ಮಹ್ಮದ್‌ ಫಾಝಿಲ್‌ ಅವರು ತೆಗೆದುಕೊಂಡು ಹೋಗಿ ಟೆಸ್ಟ್‌ ಡ್ರೈವ್‌ಗಾಗಿ ಇಸಾಕ್‌ ಮತ್ತು ಇತರರಿಗೆ ನೀಡಿದ್ದರು.

ಆರೋಪಿಗಳು ಕಾರನ್ನು ಜಖಂಗೊಳಿಸಿ 2 ಲ.ರೂ.ನಷ್ಟ ಉಂಟು ಮಾಡಿದ್ದಾರೆ. ಜತೆಗೆ ಕಾರಿನಲ್ಲಿ ಅಕ್ರಮವಾಗಿ ತಲವಾರು ಇರಿಸಿ ಉಡುಪಿಯಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆಸ್ಟಲಿನ್‌ ಸೋನಲ್‌ ಲೂವಿಸ್‌ ಅವರು ಉಡುಪಿ ನಗರ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next