Advertisement

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

06:15 PM Dec 22, 2024 | Team Udayavani |

ಕುದೂರು:ಗ್ರಾಮದ ಮಹಾತ್ಮನಗರದ ಮನೆಯೂಂದರಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಕುದೂರು ಪೂಲೀಸರು 24 ಗಂಟೆಯೂಳಗೆ ಭೇದಿಸಿ ಮೂವರು ಕಳ್ಳರನ್ನು ಬಂಧಿಸಿದ್ದಾರೆ.

Advertisement

ಕುದೂರು ಗ್ರಾಮದ ಮಹಾತ್ಮನಗರದಲ್ಲಿರುವ ಸತೀಶ್ ಎನ್ನುವರ ಮನೆಯಲ್ಲಿ ಸುಮಾರು 20 ಲಕ್ಷ ರೂ ನಗದನ್ನು ಹಣವನ್ನು ದೂಚಿಕೂಂಡು ಪರಾರಿಯಾಗಿದ್ದರು.

ಪ್ರಕರಣವನ್ನು ದಾಖಲಿಸಿಕೂಂಡ ಪೂಲೀಸರು‌ 24 ಗಂಟೆಯೂಳಗೆ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವುದಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.

ಘಟನೆ ವಿವರ: ಕುದೂರು ಪೂಲೀಸ್ ಠಾಣೆ ಸರಹದ್ದು ಕುದೂರು ಟೌನ್ ಮಹಾತ್ಮನಗರದ ನಿವಾಸಿ ಸತೀಶ್ ರರ ಮನೆಯಲ್ಲಿ 20 ಲಕ್ಷ ನಗದು ಹಣವನ್ನು ಇಟ್ಟು ಡಿ.19 ರಂದು ಬಟ್ಟೆಗಳನ್ನು ಖರೀದಿ ಮಾಡಲು ಬೆಂಗಳೂರಿಗೆ ತೆರಳಿದ್ದರು. ಈ ಹಿಂದೆ ಸತೀಶ್ ರವರ ಬಳಿ ರಾಗಿ ಲೋಡ್ ಮಾಡಲು ಕೆಲಸಕ್ಕೆ ಬರುತ್ತಿದ್ದ ಆರೋಪಿ ಗಳು ಮನೆಯಲ್ಲಿ ಯಾರೂ ಇಲ್ಲದೆ ಇರುವುದನ್ನು ಖಾತರಿ ಮಾಡಿಕೊಂಡು ಡಿ.19 ರಂದು ಸಂಜೆ 7-ರಿಂದ 8 ಗಂಟೆಯೂಳಗೆ ಮನೆಯ ಬಾಗಿಲು ಮುರಿದು ಒಳಗೆ ಹೋಗಿ ಬೀರುವನ್ನು ಹೊಡೆದು ಅದರಲ್ಲಿ ಇದ್ದ 20.5 ಲಕ್ಷ ರೂ ನಗದನ್ನು ತೆಗೆದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಮುಂದುವರೆಸಿ ರಾಮನಗರ ಅಧೀಕ್ಷಕರಾದ ಕಾರ್ತಿಕ್ ರೆಡ್ಡಿ, ಅಪರ ಅಧೀಕ್ಷಕರಾದ ಸುರೇಶ್, ರಾಮಚಂದ್ರಪ್ಪ, ಡಿವೈಎಸ್ಪಿ ಪ್ರವೀಣ್, ಕುದೂರು ಠಾಣೆಯ ಪಿಐ ನವೀನ್ ಬಿ ಹಾಗೂ ಪಿಎಸ್ಐಗಳಾದ ಜಗದೀಶ್ ನಾಯ್ಕ, ಕೃಷ್ಣಮೂರ್ತಿ, ಸಿಬ್ಬಂಧಿಗಳಾದ ಸೂರ್ಯ ಕುಮಾರ್, ಗುರುಮೂರ್ತಿ, ನಾಗರಾಜು,ಶಿವರಾಜು, ದರ್ಶನ್, ತಾಂತ್ರಿಕ ಸಿಬ್ಬಂಧಿ ಮಹದೇವಯ್ಯ, ಮಾರುತಿ ಕುಮಾರ್, ಸತೀಶ್, ರಾಜೇಶ್,ಅಪ್ಪಸಾಬ್,ಲೂಹೀತ್ ನ್ಯಾಮನ್ ,ಸಂತೋಷ್ ರವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ ಆರೋಪಿ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಕಳ್ಳತನ ಆರೋಪಿಗಳ ಪೈಕಿ ಕುದೂರಿನ ಮುತ್ತುರಾಜ್, ಶ್ರೀಗಿರಿಪುರ ವೆಂಕಟೇಶ್ ಹಾಗೂ ಕಾಗಿಮಡು ಶಿವಶಂಕರ್ ಅವರಿದ್ದ 16 ಲಕ್ಷ ರೂ ನಗದು ಕೃತ್ಯಕ್ಕೆ ಬಳಸಿದ್ದ ಎರಡು ಡಿಯೊ ಸ್ಕೂಟರ್ ನ್ನು ವಶಪಡಿಸಿಕೂಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next