Advertisement

ಚುನಾವಣೆಗಾಗಿ ನಡೆದ ದಲಿತ ಪರ ಸಮ್ಮೇಳನ?

07:20 AM Jul 24, 2017 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ 126 ನೇ ವರ್ಷಾಚರಣೆ ಆಂಗವಾಗಿ
ಏರ್ಪಡಿಸಿದ್ದ “ಕ್ವೆಸ್ಟ್‌ ಫಾರ್‌ ಇಕ್ವಿಟಿ’ ಅಂತಾರಾಷ್ಟ್ರೀಯ ಕಾರ್ಯಕ್ರಮಕ್ಕೆ ಭಾನುವಾರ ತೆರೆ ಬಿದ್ದಿದೆ.

Advertisement

ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಗಾರ ಮಾರ್ಟಿನ್‌ ಲೂಥರ್‌ ಕಿಂಗ್‌ 3 ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 300 ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ರಾಜ್ಯದ ವಿದ್ವಾಂಸರು ಪಾಲ್ಗೊಂಡು ವಿಷಯ ಮಂಡನೆ ಮಾಡಿದರು. ಮೂರು ದಿನದಲ್ಲಿ 40 ಗೋಷ್ಠಿಗಳು ನಡೆದವು. ಕೊನೆಯ ದಿನ ರಾಜ್ಯ ಸರ್ಕಾರ ಸಮ್ಮೆಳನದ ಪ್ರಮುಖ ಅಂಗವಾಗಿ ಬೆಂಗಳೂರು ಘೊಷಣೆ ಮಾಡಿ ಅಂಬೇಡ್ಕರ್‌ ಅವರ ಆಶಯಗಳನ್ನು ಸಾಕಾರಗೊಳಿಸುವ ಪ್ರಯತ್ನ ನಡೆಸಿತು.

3 ದಿನ ನಡೆದ ಅಂತಾರಾಷ್ಟ್ರೀಯ ಸಮ್ಮೇಳನ ಸಂಪೂರ್ಣಅಂಬೇಡ್ಕರ್‌ ಅವರ ಚಿತ್ರಣವನ್ನು ಬಿಚ್ಚಿಡುವ ಪ್ರಯತ್ನ ನಡೆದಂತೆ ಕಾಣಲಿಲ್ಲ. ಗೋಷ್ಠಿಗಳಲ್ಲಿ ನಡೆದ ವಿಚಾರ ಮಂಡನೆಗಳು ಕೂಡ ಒಂದು ವಾದಕ್ಕೆ ಸೀಮಿತವಾದಂತೆ ಭಾಸವಾಯಿತು. ಅಲ್ಲದೇ ಸಂಪೂರ್ಣ ಕಾರ್ಯಕ್ರಮ ಅಂಬೇಡ್ಕರ್‌ ಸಿದಾಟಛಿಂತ ಪ್ರತಿ ಪಾದನೆಗಿಂತ ಆಳುವ ಸರ್ಕಾರ ಅವರ ಹೆಸರಿನಲ್ಲಿ ಇನ್ನೇನೋ ರಾಜಕೀಯ ಲಾಭ ಪಡೆಯುವ ಪ್ರಯತ್ನದ ಫ‌ಲ ಎನ್ನುವಂತೆ ಬಿಂಬಿತವಾಗಿತ್ತು ಎಂಬ ಮಾತು ಕೇಳಿಬಂದಿದೆ.

ಸರ್ಕಾರ ಸುಮಾರು 30 ಕೋಟಿ ರೂ. ದಲಿತರಿಗೆ ಮೀಸಲಿಟ್ಟಿದ್ದ ಹಣವನ್ನು ಖರ್ಚು ಮಾಡಿದ್ದು, ಅದಕ್ಕೆ ತಕ್ಕ ಪ್ರತಿಫ‌ಲ ಪಡೆಯುವಲ್ಲಿ ಸಮ್ಮೇಳನ ಸಂಪೂರ್ಣ ಯಶಸ್ವಿ ಆದಂತೆ ಕಾಣಲಿಲ್ಲ. ಸಮ್ಮೇಳನದ ಗೋಷ್ಠಿಗಳಲ್ಲಿ ಭಾಗವಹಿಸಿದ ಗಣ್ಯರ ವಿಷಯ ಮಂಡನೆಯೂ ಏಕ ಮುಖವಾಗಿ ಸಾಗಿದ್ದರಿಂದ ಅಂಬೇಡ್ಕರ್‌ ಅವರನ್ನು ವಿರೋಧಿಸುವ ಅಥವಾ ಅವರ ತತ್ವಗಳನ್ನು ತಿಳಿದುಕೊಳ್ಳದವರಿಗೂ ಮಾತನಾಡಲು ಮುಕ್ತ ಅವಕಾಶ ನೋಡಿ, ಅಂಬೇಡ್ಕರ್‌ ಚಿಂತನೆಗಳು ಸಮಾಜದಲ್ಲಿ ಜಾರಿಯಾಗಲು ಯಾಕೆ ವಿಫ‌ಲವಾಗುತ್ತಿವೆ ಎನ್ನುವುದನ್ನೂ ತಿಳಿಯುವ ಪ್ರಯತ್ನ ನಡೆಸಬೇಕಿತ್ತು.

ಅಂಬೇಡ್ಕರ್‌ ಎಂದರೆ ದಲಿತರಿಗೆ ಮಾತ್ರ ಸೀಮಿತ ಅಲ್ಲ. ಎಲ್ಲ ವರ್ಗದವರಿಗೂ ಸೇರಿದವರು ಎನ್ನುವುದನ್ನು ಬಿಂಬಿಸಲು ಹೊರಟಿರುವ ಸರ್ಕಾರ, ದಲಿತ ಸಚಿವರಿಗೆ ಉಸ್ತುವಾರಿ ನೀಡಿದ್ದು, ದಲಿತಪರ ಸಂಘಟನೆಗಳು, ಅಂಬೇಡ್ಕರ್‌ ವಾದದ ಪರವಾಗಿರುವವರನ್ನು ಮಾತ್ರ ಆಹ್ವಾನಿಸಿದ್ದು, ಸರ್ಕಾರ ಸೀಮಿತ ಮನೋಭಾವವನ್ನು ತೊರಿಸಿದಂತಿತ್ತು.

Advertisement

ಬಹುತೇಕ ಸಚಿವರೆ ವಿಶೇಷವಾಗಿ ಮೇಲ್ವರ್ಗದ ಸಚಿವರು ಈ ಕಾರ್ಯಕ್ರಮದಿಂದ ದೂರ ಉಳಿದಿದ್ದು ಕೂಡ ಅಂಬೇಡ್ಕರ್‌ಗೂ ನಮಗೂ ಸಂಬಂಧ ಇಲ್ಲ ಎನ್ನುವುದನ್ನು ಎತ್ತಿ ತೋರಿಸಿದೆ. ಸಚಿವರಾದ ಎಚ್‌. ಆಂಜನೇಯ, ಎಚ್‌.ಸಿ. ಮಹದೇವಪ್ಪ ಹಾಗೂ ಪ್ರಿಯಾಂಕ ಖರ್ಗೆ ಅವರಷ್ಟೇ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದು, ಇಡೀ ಕಾರ್ಯಕ್ರಮದ ಆಂತರ್ಯ ಏನೆಂದು ಬಿಂಬಿಸಿದಂತಿತ್ತು.

ಈ ಸಮಾವೇಶಕ್ಕೆ ಪಕ್ಷವನ್ನೂ ವಿಶ್ವಾಸಕ್ಕೆ ತೆಗೆದುಕೊಂಡಂತೆ ಕಾಣುತ್ತಿಲ್ಲ. ಸ್ವತ ದಲಿತರಾಗಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಕಾಟಾಚಾರಕ್ಕೆ ಸಮಾವೇಶದ ಉದ್ಘಾಟನೆಗೆ ಆಗಮಿಸಿ ನಂತರ ಸುಳಿಯಲೇ ಇಲ್ಲ. ಸದ್ಯ ಕಾಂಗ್ರೆಸ್‌ ನಂಬಿರುವ ದಲಿತರ ಪರಮೋತ್ಛ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸೂಕ್ತ ಪ್ರಾತಿನಿಧ್ಯ ನೀಡದಿರುವುದು. ಸಿಎಂ ಸಿದ್ದರಾಮಯ್ಯ ಹಾಗೂ ಅವರ ಹಿಂಬಾಲಕ ಸಚಿವರ ಪ್ರತಿಷ್ಠೆಗೆ ಮಾಡಿಕೊಂಡ ಜಾತ್ರೆಯಂತಾಯಿತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಮೇಲ್ವರ್ಗದ ಮನಪರಿವರ್ತನೆಯಿಂದಾಗಿ ಅಸ್ಪೃಶ್ಯತೆ ಹೋಗಿದೆ ಅನ್ನುವುದು ದೊಡ್ಡ ಸುಳ್ಳು. ಅದೇನಿದ್ದರೂ ಕಾನೂನು ಮೂಲಕ ಹೋಗಿದೆ. ಆದರೆ, ಇಂದು ಗೋಚರ ಅಸ್ಪೃಶ್ಯತೆ ಹೋಗಿರಬಹುದು. ಆದರೆ, ಅಗೋಚರ ಅಸ್ಪೃಶ್ಯತೆ ಇಂದಿಗೂ ಇದೆ. ಮೇಲ್ವರ್ಗದಲ್ಲಿರುವ ಮೇಲರಿಮೆ ಕೆಳವರ್ಗದಲ್ಲಿನ ಕೀಳರಿಮೆ ನಾಶ ಆಗುವವರೆಗೆ ಸಾಮಾಜಿಕ ನ್ಯಾಯ ಸ್ಥಾಪನೆ ಸಾಧ್ಯವಿಲ್ಲ 
– ದಿನೇಶ್‌ ಅಮಿನ್‌ಮಟ್ಟು
ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ

ದಲಿತರು ಶ್ರೀಮಂತರಾದರೆ ಸಾಲದು, ಅವರು ಬಂಡವಾಳ ಶಾಹಿಗಳಾಗಿ ಆ ಮೂಲಕ ರಾಜಕೀಯ ಮತ್ತು ಆರ್ಥಿಕ ಚೌಕಟ್ಟನ್ನು ತಮ್ಮ ಕೈಯಲ್ಲಿ ಇಟ್ಟುಕೊಳ್ಳಬೇಕು.
ಪೊ›.ಮುಜಾಫ‌ರ್‌ ಅಸಾದಿ,
ರಾಜಕೀಯ ವಿಶ್ಲೇಷಕ

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರ 126ನೇ ಜಯಂತಿ ಪ್ರಯುಕ್ತ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಮೂರು ದಿನಗಳ ಅಂತಾರಾಷ್ಟ್ರೀಯ ಸಮಾವೇಶ ಅಂಬೇಡ್ಕರ್‌ ಚಿಂತನೆಗಳನ್ನು ಪಸರಿಸುವ ಬದಲು ಕಾಂಗ್ರೆಸ್  ಪ್ರಾಯೋಜಿತ ಸಮಾವೇಶವಾಗಿದೆ. ಅಲ್ಲಿ ನಡೆದಿರುವ ಕಾರ್ಯಕ್ರಮಗಳು, ಸಮಾವೇಶಕ್ಕೆ ಬಂದಿರುವ ಗಣ್ಯರೇ ಇದಕ್ಕೆ ಸಾಕ್ಷಿ.
– ಜಗದೀಶ್‌ ಶೆಟ್ಟರ್‌, ವಿಧಾನಸಭೆ ಪ್ರತಿಪಕ್ಷ ನಾಯಕ

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next