Advertisement

Adi Jambava Samavesha: ಅಂಬೇಡ್ಕರ್‌ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ

05:30 AM Nov 13, 2024 | Team Udayavani |

ಹಾವೇರಿ/ಶಿಗ್ಗಾಂವಿ: ಸಂವಿಧಾನ ಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ್‌ ಇಸ್ಲಾಂ ಧರ್ಮಕ್ಕೆ ಸೇರಲು ಸಿದ್ಧತೆ ಮಾಡಿಕೊಂಡಿದ್ದರು ಎಂಬ ಕಾಂಗ್ರೆಸ್‌ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ವಿವಾದಾತ್ಮಕ ಹೇಳಿಕೆ ಸಂಚಲನ ಮೂಡಿಸಿದ್ದು, ಚರ್ಚೆಗೆ ಕಾರಣವಾಗಿದೆ.

Advertisement

ಶಿಗ್ಗಾಂವಿಯಲ್ಲಿ ಆಯೋಜಿಸಿದ್ದ ಆದಿ ಜಾಂಬವ ಜಾಗೃತಿ ಸಮಾವೇಶದಲ್ಲಿ ಮಾತನಾಡುವ ವೇಳೆ, ಡಾ| ಅಂಬೇಡ್ಕರ್‌ ಮುಸ್ಲಿಂ ಧರ್ಮ ಸ್ವೀಕರಿಸಲು ಎಲ್ಲ ಸಿದ್ಧತೆ ಆಗಿತ್ತು. ಆದರೆ ಕೊನೇ ಕ್ಷಣದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು ಎಂದು ಓದಿದ್ದೇನೆ.

ಒಂದು ವೇಳೆ ಅವರು ಬೌದ್ಧ ಧರ್ಮ ಸ್ವೀಕರಿಸದಿದ್ದರೆ ದಲಿತರು ಮುಸ್ಲಿಂ ಆಗುತ್ತಿದ್ದರು. ಆರ್‌.ಬಿ. ತಿಮ್ಮಾಪುರ ಹೋಗಿ ರಹೀಮ್‌ ಖಾನ್‌ ಆಗುತ್ತಿದ್ದರು. ಡಾ| ಜಿ. ಪರಮೇಶ್ವರ ಹೋಗಿ ಪೀರಸಾಹೇಬ್‌ ಆಗುತ್ತಿದ್ದರು. ಎಲ್‌. ಹನುಮಂತಪ್ಪ ಹೋಗಿ ಹಸನಸಾಬ್‌ ಆಗುತ್ತಿದ್ದರು. ಮಂಜುನಾಥ ತಿಮ್ಮಾಪುರ ಹೋಗಿ ಬಾಬೂಸಾಬ್‌ ಆಗುತ್ತಿದ್ದರು. ಆದರೆ ಈಗಲೂ ಎಲ್ಲೆಲ್ಲಿ ದಲಿತ ಕೇರಿ ಇದೆಯೋ ಅಲ್ಲೆಲ್ಲ ಪಕ್ಕದಲ್ಲಿಯೇ ಮುಸ್ಲಿಂ ದರ್ಗಾ ಇದೆ. ದಲಿತರಿಗೂ, ಮುಸ್ಲಿಮರಿಗೂ ಇರುವ ಬಾಂಧವ್ಯ ಹಾಗೇ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next