Advertisement
4,000 ಮಂದಿ ನಿರ್ಗಮನಮೊದಲ ಹಂತದಲ್ಲಿ ವಲಸೆ ಕಾರ್ಮಿಕರಿಗೆ ತಮ್ಮ ಗ್ರಾಮಗಳಲ್ಲಿ ಕೃಷಿ ಕಾರ್ಯ ಕೈಗೊಳ್ಳಲು ಅಥವಾ ತಮ್ಮ ಕೆಲಸದ ಸ್ಥಳಗಳಿಗೆ ತಲುಪುವ ಸಲುವಾಗಿ ಅವರನ್ನು ಸ್ವಗ್ರಾಮಗಳಿಗೆ ತಲುಪಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ. ಇದರಂತೆ ದ.ಕ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಂದಲೂ ವಲಸೆ ಕಾರ್ಮಿಕರು ತೆರಳಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
Related Articles
‘ಕೋವಿಡ್ ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ಜನಪ್ರತಿನಿಧಿಗಳೇ ವಿರೋಧ ಮಾಡುತ್ತಿರುವುದು ಸರಿಯಾದ ನಿರ್ಧಾರವಲ್ಲ’ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಆಗ ಶಾಸಕ ವೇದವ್ಯಾಸ್ ಕಾಮತ್ “ಲಾಕ್‌ಡೌನ್ ಜಾರಿಯಲ್ಲಿದ್ದರೂ ನಿಯಮ ಉಲ್ಲಂಘಿಸಿ ಖಾದರ್ ಅವರು ಬೇರೆ ಜಿಲ್ಲೆಯಲ್ಲಿದ್ದವರನ್ನು ಕಾರಲ್ಲಿ ಕರೆದುಕೊಂಡು ಬರುತ್ತಿರುವುದು ಸರಿಯಾದ ನಿರ್ಧಾರವೇ?’ ಎಂದು ಪ್ರಶ್ನಿಸಿದರು. ಅದಕ್ಕೆ ಖಾದರ್, “ಬೇರೆ ಜಿಲ್ಲೆಯಲ್ಲಿ ಬಾಕಿಯಾದವರನ್ನು ಮಾನವೀಯ ದೃಷ್ಟಿಯಿಂದ ಕರೆ ತಂದಿರಬಹುದು. ಇದರಲ್ಲಿ ರಾಜ ಕೀಯ ಇಲ್ಲ’ ಎಂದರು.
Advertisement
ಯು.ಟಿ. ಖಾದರ್ ಅವರನ್ನು ಬೆಂಬಲಿಸಿದ ಐವನ್ ಡಿ’ಸೋಜಾ, “ಲಾಕ್‌ಡೌನ್ ಮಧ್ಯೆ ಜಲ್ಲಿ, ಕಲ್ಲು ಸಾಗಾಟದ ಲಾರಿಗೆ ಅನುಮತಿ ನೀಡುವಂತೆ ಶಾಸಕರೊಬ್ಬರು ಪತ್ರ ನೀಡಿರುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು. ಈ ರೀತಿಯಾಗಿ ಬಿಜೆಪಿ- ಕಾಂಗ್ರೆಸ್ ಶಾಸಕರ ಮಧ್ಯೆ ಕೆಲವೊಂದು ವಿಚಾರವಾಗಿ ಆರೋಪ – ಪ್ರತ್ಯಾರೋಪಗಳು ನಡೆದವು.
ಬೋಳೂರಿನಲ್ಲಿ ಅಂತ್ಯಸಂಸ್ಕಾರಕೋವಿಡ್ನಿಂದ ಮೃತಪಟ್ಟವರನ್ನು ಮಂಗಳೂರಿನ ಬೋಳೂರು ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಸಾಮಾನ್ಯ ರೋಗಿಗಳಿಗೆ ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್ ಹೋಂಗಳಲ್ಲಿ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ಸರಕಾರ ಮಾರ್ಗದರ್ಶನ ಕಳುಹಿಸಲಿದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು.