Advertisement
ನಿಯಮದ ಪ್ರಕಾರ 9 ಲಕ್ಷ ಕಿ.ಮೀಟರ್ ಸಂಚರಿಸಿರುವ ವಾಹನವನ್ನು ಗುಜರಿಗೆ ಹಾಕಬೇಕು. ಆದರೆ, ಇಲ್ಲಿ ಅದ್ಯಾವುದು ಲೆಕ್ಕಕ್ಕಿಲ್ಲ. ಇಲ್ಲಿನ ಅಧಿಕಾರಿಗಳು ಅವಧಿ ಮುಗಿದ ಬಸ್ ಗಳನ್ನು ಚಲಾಯಿಸಿ ಮೇಲಧಿಕಾರಿಗಳ ಮೆಚ್ಚುಗೆಗಳಿಸಲು ಹೊಸ ಬಸ್‌ಗಳ ಬೇಡಿಕೆಯನ್ನು ಸಲ್ಲಿಸದೇ ಇರುವ ಬಸ್‌ಗಳನ್ನೇ ರಿಪೇರಿ ಮಾಡುವ ಮೂಲಕ ಜನರ ಪ್ರಾಣದ ಹಂಗನ್ನೇ ಮರೆತ್ತಿದ್ದಾರೆ.
ಅವುಗಳನ್ನು ರಿಪೇರಿ ಮಾಡಿಸಿ ಪುನಃ ಸಂಚಾರಕ್ಕೆ ರಸ್ತೆಗಿಳಿಸಲಾಗಿದೆ. ರಸ್ತೆಗಿಳಿಯುವ ಶಕ್ತಿ ಕಳೆದುಕೊಂಡ ವಾಹನಗಳ ಸರ್ವೀಸಿಂಗ್, ಲೈಟಿಂಗ್ ಸೇರಿದಂತೆ ಸಣ್ಣ ಪುಟ್ಟ ವಸ್ತುಗಳನ್ನು ಬದಲಾಯಿಸಿ ಹೊಸ ಬಸ್‌ಗಳಂತೆ ಬಣ್ಣ ಬಳಿದು ರಸ್ತೆಗಿಳಿಸಲಾಗಿದೆ. ಆದರೇ ಅವು ರಸ್ತೆಯಲ್ಲಿ ಸಂಚರಿಸುವುದಕ್ಕೆ ಎಷ್ಟು ಯೋಗ್ಯವೋ ಗೊತ್ತಿಲ್ಲ. ಚಾಲಕರೊಬ್ಬರು ಹೇಳುವ ಪ್ರಕಾರ ವಾಹನಗಳು ರಸ್ತೆಯಲ್ಲಿ ಸಂಚರಿಸಲು ಅಯೋಗ್ಯ ವಾಹನಗಳನ್ನು ಹಾಗೇ ನಡೆಸಲು ಚಾಲಕರ ಮೇಲೆ ಒತ್ತಡ ಹೇರುತ್ತಾರೆ ಎನ್ನಲಾಗಿದೆ. ಚಾಲಕರು ಅಧಿಕಾರಿಗಳ ಮಾತಿಗೆ ಬಗ್ಗಿ ಅನಿವಾರ್ಯವಾಗಿ ವಾಹನಗಳನ್ನು ಚಲಾಯಿಸುತ್ತಾರೆ. ಆದರೇ, ಅವಘಡಗಳು ಸಂಭವಿಸಿದರೆ ಚಾಲಕರ ತಪ್ಪು ಎಂದು ತೋರಿಸಿ ಅಮಾಯಕ ಚಾಲಕರನ್ನು ಬಲಿಪಶು ಮಾಡಲಾಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಚಾಲಕರು ಅಳಲು ತೋಡಿಕೊಂಡಿದ್ದಾರೆ. ಈ ಭಾಗದ ಸಾರ್ವಜನಿಕರು ಹೆಚ್ಚಾಗಿ ಸಾರಿಗೆ ಸಂಸ್ಥೆ ಬಸ್‌ಗಳನ್ನೇ ಅವಲಂಬಿಸಿರುವುದು ಇಲ್ಲಿಂದ ಖಾಸಗಿ ವಾಹನಗಳ ಸೇವೆ ತೀರಾ ವಿರಳ. ಏನು ಅರಿಯದ ಪ್ರಯಾಣಿಕರು ಮಾತ್ರ ಅನಿವಾರ್ಯವಾಗಿ ನಿತ್ಯ ಇಂತಹ ಬಸ್‌ಗಳಲ್ಲೇ ಯಾವಾಗ ಏನಾಗುತ್ತದೊ ಎಂಬ ಆತಂಕದಲ್ಲಿಯೇ ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಮೇಲಾಗಿ ಬಹುತೇಕ ವಾಹನಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳೇ ಇಲ್ಲದಂತಾಗಿದೆ. ಪ್ರಥಮ ಚಿಕಿತ್ಸೆ ಪೆಟ್ಟಿಗೆ ಕಡ್ಡಾಯವಾಗಿರುವ ನಿಯಮ ಇದ್ದರೂ ಪಾಲನೆಯಾಗುತ್ತಿಲ್ಲ. ಈಶಾನ್ಯ ಸಾರಿಗೆ ಸಂಸ್ಥೆಗೆ ಸಾರ್ವಜನಿಕರ ಪ್ರಾಣದ ಪ್ರಾಮುಖ್ಯತೆ ಗೊತ್ತಿಲ್ಲ.
Related Articles
Advertisement
ಇನ್ನು ಮುಂದಾದರೂ ಅಧಿಕಾರಿಗಳು ಕೇವಲ ಆದಾಯ ಮೂಲವನ್ನು ಲೆಕ್ಕಿಸದೇ ಸಾರ್ವಜನಿಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಚಿಂತಿಸಿ ಸಂಚಾರ ಸಾಮರ್ಥ್ಯ ಮುಗಿದ ವಾಹನಗಳನ್ನು ಬದಲಿಸಿ ಹೊಸ ಬಸ್‌ಗಳನ್ನು ಓಡಿಸಲು ಮುಂದಾಗಬೇಕಿ¨ ಜಿಲ್ಲೆಯಲ್ಲಿ 95 ವಾಹನಗಳು 9 ಲಕ್ಷ ಕಿ.ಮೀಟರ್ ಚಾಲನೆ ಪೂರ್ಣಗೊಳಿಸಿವೆ. ಗುಜರಿಗೆ ಹಾಕುವ ವಿಚಾರ ಕೇವಲ ಬಸ್‌ನ ಬಾಡಿಗೆ ಮಾತ್ರ ಅದು ಅನ್ವಯಿಸುತ್ತದೆ. ಕಾಲ ಕಾಲಕ್ಕೆ ಮಷಿನರಿ ಸರಿಪಡಿಸಲಾಗುತ್ತಿರುತ್ತದೆ. ಹಾಗಾಗಿ ಅದನ್ನು ಗಮನಿಸಿಯೇ ಸಂಚಾರಕ್ಕೆ ಬಿಡಲಾಗುತ್ತದೆ. ಸಂತೋಷ ಗೋಗೇರಿ, ವಿಭಾಗೀಯ ನಿಯಂತ್ರಣಾಧಿಕಾರಿ, ಯಾದಗಿರಿ ಸಂಸ್ಥೆಗೆ ಲಾಭ ತೋರಿಸುವ ಉದ್ದೇಶದಿಂದ ಹಳೇ ಬಸ್‌ಗಳನ್ನೇ ಓಡಿಸಲಾಗುತ್ತದೆ. ಕಂಡಿಷನ್ ಇಲ್ಲದ ವಾಹನವನ್ನು ಓಡಿಸಲು ಚಾಲಕರಿಗೆ ಒತ್ತಡವಿದೆ. ಸಾರ್ವಜನಿಕರ ಹಿತದೃಷ್ಟಿಯಿಂದಾದರೂ ಅಧಿಕಾರಿಗಳು ಹೊಸ ಬಸ್‌ಗಳನ್ನು ತಯಾರಿಸಲು ಮುಂದಾಗಬೇಕು.
ದೇವದಾನ್, ಸಾರಿಗೆ ಕಾರ್ಮಿಕರ ಸಂಘದ ಅಧ್ಯಕ್ಷ 9 ಲಕ್ಷ ಕಿ.ಮೀಟರ್ ಕ್ರಮಿಸಿದ ಬಸ್‌ಗಳು ಸಂಚರಿಸದಂತೆ ನಿಯಮ ಇದ್ದರೂ ಸಾರಿಗೆ ಇಲಾಖೆ ಅವುಗಳನ್ನು ಹಾಗೇ ಚಲಾಯಿಸುತ್ತದೆ ಎಂದರೆ ವಿಪರ್ಯಾಸ. ಬಸ್‌ಗಳಲ್ಲಿ ಸರಿಯಾಗಿ ಕುಳಿತುಕೊಳ್ಳಲು ಸೀಟ್ ವ್ಯವಸ್ಥೆ ಇಲ್ಲದಿರುವುದಿಲ್ಲ. ಕೆಲವೊಂದು ಬಸ್‌ಗಳು ಎತ್ತಿನ ಗಾಡಿಯಂತೆ ಓಡುತ್ತವೆ.
ರಮೇಶ, ಪ್ರಯಾಣಿಕ ಅನೀಲ ಬಸೂದೆ