Advertisement

ಕನಕಪುರಕ್ಕಾದರೂ ಬರಲಿ ಬೆಂಗಳೂರಿಗಾದರೂ ಬರಲಿ ಬಂದಾಗ ನೋಡೋಣ: ಡಿ ಕೆ ಸುರೇಶ್

12:11 PM Mar 28, 2021 | Team Udayavani |

ಬೆಂಗಳೂರು: ಅವರು ಕನಕಪುರಕ್ಕೆ ಬಂದಾಗ ನೋಡಿಕೊಳ್ಳುತ್ತೇವೆ. ಅವರು ಕನಕಪುರಕ್ಕಾದರೂ ಬರಲಿ, ಬೆಂಗಳೂರಿಗಾದರೂ ಬರಲಿ, ಬಂದಾಗ ನೋಡೋಣ ಎಂದು ಸಂಸದ ಡಿಕೆ ಸುರೇಶ್, ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಚಟುವಟಿಕೆಗಳನ್ನು ಮುಚ್ಚಿಕೊಂಡು ಸರ್ಕಾರ ಅವರನ್ನೇ ರಕ್ಷಣೆ ಮಾಡುತ್ತಿದೆ. ಯುವತಿಯನ್ನು ಡಿ.ಕೆ.ಶಿವಕುಮಾರ್ ನಿಯಂತ್ರಣ ಮಾಡುತ್ತಿದಾರೋ ಅಥವಾ ಎಸ್ಐಟಿ ರಕ್ಷಣೆ ಮಾಡುತ್ತಿದೆಯೋ ಗೊತ್ತಿಲ್ಲ ನನಗೆ ಎಂದರು.

ಎಸ್ಐಟಿ ಫ್ರೇಮ್ ವರ್ಕ್ ಏನು? ಯುವತಿಯ ಹೇಳಿಕೆ ಮೇಲೆ ಇದುವರೆಗೆ ವಿಚಾರಣೆಯೇ ನಡೆಯಲಿಲ್ಲ. ಸರ್ಕಾರ ಇಡೀ ಪ್ರಕರಣ ಮುಚ್ಚಿಹಾಕಲು ಡಿಕೆಶಿ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ನಾವೂ ಕೂಡ ಯುವತಿಯ ರಕ್ಷಣೆ ಮಾಡಲು ನಿಲ್ಲಬೇಕಾಗುತ್ತದೆ ಎಂದರು.

ಇದನ್ನೂ ಓದಿ:ಡಿಕೆಶಿ ಮೇಲೆ ಗೂಬೆ ಕೂರಿಸುವ ಕೆಲಸವಾಗುತ್ತಿದೆ, ಆರೋಪಿಗೆ ಎಸ್ ಐಟಿ ರಕ್ಷಣೆ: ಮಿಥುನ್ ರೈ

ಜಾರಕಿಹೊಳಿ ಅವರು ಅವಾಚ್ಯ ಶಬ್ದ ಬಳಕೆಯ ಬಗ್ಗೆ ಮಾತನಾಡಿದ ಅವರು, ಆ ಯಪ್ಪ ಎದುರು ಸಿಕ್ಕಾಗ ಏನು ಹೇಳಬೇಕೋ ಅದನ್ನು ಹೇಳುತ್ತೇನೆ. ಮಾಧ್ಯಮದ ಎದುರು ಹೇಳುವುದಿಲ್ಲ ಎಂದರು.

Advertisement

ಸರ್ಕಾರದಲ್ಲಿ ಸಿಎಂ ಇಲ್ಲ, ಗೃಹ ಮಂತ್ರಿಗಳೂ ಕೂಡ ಇಲ್ಲ. ಸರ್ಕಾರ ತಂದವರು ಇವರೇ, ಸರ್ಕಾರ ಬೀಳಿಸುವುದು ಇವರೇ ಅಲ್ವಾ, ಇವರಿಂದ ಇಡೀ ಬಿಜೆಪಿಗೆ ಆತಂಕವಿದೆ. ಬಹುಶಃ ಇದೊಂದು ಹಾಸ್ಯಾಸ್ಪದ ಎಂದರು.

ಇದನ್ನೂ ಓದಿ: ಪೊಲೀಸರೆದುರೇ ಬಿಜೆಪಿ ಶಾಸಕನ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದು ಹಾಕಿದ ರೈತರ ಗುಂಪು!

ಜನರಿಗೆ ಸರ್ಕಾರದ ಕಡೆಯಿಂದ ಒಂದು ಸಂದೇಶ ಹೋಗಬೇಕಾಗಿತ್ತು ಆದರೆ ಇನ್ಮುಂದೆ ಮಹಿಳೆಯರ ರಕ್ಷಣೆಗೆ ಸರ್ಕಾರ ಇಲ್ಲ ಅಂತ ಆಗಿದೆ ಎಂದು ಡಿಕೆ ಸುರೇಶ್ ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next