Advertisement
ಬೆಂಗಳೂರಿಗೆ ಉದ್ಯಾನನಗರಿ, ಸಿಲಿಕಾನ್ ಸಿಟಿ, ಐಟಿ-ಬಿಟಿ ನಗರ ಇತ್ಯಾದಿ ಅನ್ವರ್ಥ ನಾಮಗಳಿವೆ . ರಾಜಧಾನಿಯ ಅತಿವೇಗದ ಬೆಳವಣಿಗೆಯೂ ಕಾರಣ ಇರಬಹುದು. ಆದರೆ, ಕಳೆದ ಮೂರು ವರ್ಷಗಳಿಂದ ಸೈಬರ್ ಅಪರಾಧ ಪ್ರಕರಣಗಳು ದ್ವಿಗುಣಗೊಳ್ಳುತ್ತಾ ಬೆಂಗಳೂರು ಸೈಬರ್ ಕ್ರೈಂ ಸಿಟಿಯಾಗುವತ್ತಾ ಹೆಜ್ಜೆಹಾಕುತ್ತಿದೆ. ನಗರದ ಅಪರಾಧ ನಡೆಸುತ್ತಿರುವ ಬಹುತೇಕ ವಂಚಕರು ಅಪ್ ಗ್ರೇಡ್ ಆಗಿರುವಂತಿದೆ. ಅಂತರ್ಜಾಲದ ಮೂಲಕ ತಮ್ಮ ಗುರುತು ಮರೆಮಾಚಿ ಬ್ಯಾಂಕ್ ಅಕೌಂಟ್‌ಗಳಿಗೆಕನ್ನ ಹಾಕಿ ಹಣಲೂಟಿ ಮಾಡುತ್ತಿದ್ದಾರೆ. ಜತೆಗೆ, ಆನ್‌ಲೈನ್ ಮಾರಾಟ ತಾಣಗಳು, ಸಾಮಾಜಿಕ ಜಾಲತಾಣಗಳನ್ನು ವಂಚನೆಗೆ ಆಶ್ರಯತಾಣವನ್ನಾಗಿ ಮಾಡಿಕೊಂಡಿದ್ದಾರೆ.
Related Articles
Advertisement
ಪೊಲೀಸ್ ಅಧಿಕಾರಿಗಳೇ ಟಾರ್ಗೆಟ್ : ಪೊಲೀಸ್ ಇಲಾಖೆಯ ಐಪಿಎಸ್ ಅಧಿಕಾರಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆಯುವ ವಂಚಕರು, ಅವರ ಹೆಸರಿನಲ್ಲಿ ಸಾರ್ವಜನಿಕರಿಂದ ಹಣವಸೂಲಿ ಮಾಡುತ್ತಿದ್ದಾರೆ. ಉತ್ತರಕರ್ನಾಟಕದ ಪೊಲೀಸ್ ಅಧಿಕಾರಿ ಮತ್ತು ಐಎಸ್‌ಡಿಯಲ್ಲಿ ಕರ್ತವ್ಯ ನಿರ್ವಹಿಸುವ ಐಪಿಎಸ್ ಅಧಿಕಾರಿಹೆಸರಿನಲ್ಲಿ ನಕಲಿಖಾತೆ ತೆರೆಯಲಾಗಿತ್ತು. “ತಾನೂ ಪೊಲೀಸ್ ಇಲಾಖೆಯಲ್ಲಿಕರ್ತವ್ಯ ನಿರ್ವಹಿಸುತ್ತಿದ್ದು, ಕೌಟುಂಬಿಕ ಮತ್ತು ವೈಯಕ್ತಿಕ ಸಮಸ್ಯೆಗಳು ಉಂಟಾಗಿವೆ. ದಯವಿಟ್ಟು ಹಣ ನೀಡುವಂತೆ ಇನ್‌ಬಾಕ್ಸ್‌ನಲ್ಲಿ ಚಾಟ್ ಮಾಡುತ್ತಾರೆ. ಅದನ್ನು ನಂಬಿದ ಕೆಲ ಸಾರ್ವಜನಿಕರು ವಂಚಕರು ಸೂಚಿಸಿದ ಖಾತೆಗಳಿಗೆ ಹಣಹಾಕುತ್ತಿದ್ದಾರೆ. ಇತ್ತೀಚೆಗೆ ಉತ್ತರಕರ್ನಾಟಕದ ಪೊಲೀಸ್ ಅಧಿಕಾರಿ ಹೆಸರಿನಲ್ಲಿ ನಕಲಿ ಖಾತೆ ತೆರೆದು ಐದು ಲಕ್ಷಕ್ಕೂ ಅಧಿಕ ಹಣಪಡೆದುಕೊಂಡು ವಂಚಿಸಿದ್ದರು. ಈ ವಿಚಾರ ತಿಳಿದ ಪೊಲೀಸ್ ಅಧಿಕಾರಿಗಳು ತಮ್ಮ ಅಸಲಿಖಾತೆಯಲ್ಲಿ ನಕಲಿಖಾತೆಗಳ ಬಗ್ಗೆ ಮಾಹಿತಿ ನೀಡಿ, ದಯವಿಟ್ಟು ಸಾರ್ವಜನಿಕರು ನಕಲಿಖಾತೆಗಳಿಗೆ ಹಣ ಹಾಕಬೇಡಿ. ಅಂತಹ ವಿಚಾರಗಳು ಕಂಡು ಬಂದಲ್ಲಿ ಪೊಲೀಸ್ ಸಹಾಯವಾಣಿಅಥವಾ ಅಧಿಕೃತಖಾತೆಯ ಇನ್‌ಬಾಕ್ಸ್‌ನಲ್ಲಿ ಮೆಸೇಜ್ ಮಾಡುವಂತೆ ಮನವಿ ಮಾಡಿದ್ದಾರೆ.
ದೇಶದಲ್ಲಿ ಹೆಚ್ಚು ತಂತ್ರಜ್ಞಾನ ಬಳಕೆ ಆಗುತ್ತಿರುವ ನಗರಗಳಲ್ಲಿ ಬೆಂಗಳೂರು ಪ್ರಮುಖ ಸ್ಥಾನ ಹೊಂದಿದೆ. ಹೀಗಾಗಿಯೇ, ಸೈಬರ್ ವಂಚಕರು ನಗರದಲ್ಲಿವಂಚನೆಗಳನ್ನು ಹೆಚ್ಚು ಎಸಗುತ್ತಿದ್ದಾರೆ.ಪೊಲೀಸ್ ಇಲಾಖೆಕೂಡ ಪ್ರತಿಯೊಂದುದೂರನ್ನೂ ಸ್ವೀಕರಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.ಸಾರ್ವಜನಿಕರುಕೂಡ ಸೈಬರ್ ವಂಚನೆ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸಿದಾಗ ಈ ವಂಚನೆಗೆಕಡಿವಾಣ ಬೀಳಲಿದೆ. – ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ
ಕೊಲೆ ಪ್ರಕರಣದಲ್ಲಿ ದ್ವಿತೀಯ ಸ್ಥಾನ : ದೇಶದ ಮಹಾನಗರಗಳಲ್ಲಿ ಅತಿ ಹೆಚ್ಚು ಅಪರಾಧಕೃತ್ಯಗಳು ನಡೆಯುವ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಅದರಲ್ಲೂ ಕೊಲೆ ಪ್ರಕರಣಗಳಲ್ಲಿ ಎರಡನೇ ಸ್ಥಾನದಲ್ಲಿದೆ. ವೈಯಕ್ತಿದ ದ್ವೇಷಕ್ಕೆ ಅತಿ ಹೆಚ್ಚು ಬೆಂಗಳೂರಿನಲ್ಲಿಯೇ ಕೊಲೆಗಳು ನಡೆದಿವೆ. ಇನ್ನು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿಯೂ ಮುಂದಿದೆ ಮಕ್ಕಳ ಮೇಲಿನ ಕೃತ್ಯಗಳು 17 ಕೊಲೆ 4 ಆತ್ಮಹತ್ಯೆ 958 ಕಿಡ್ನಾಪ್ ಕೇಸ್ 350ಲೈಂಗಿಕ ಕಿರುಕುಳ ಸೇರಿ ಇತ್ಯಾದಿ265 ಪೋಕ್ಸೋ(ಶೇ.6.4) 63 ಲೈಂಗಿಕ ಹಲ್ಲೆ (ಶೇ.1.6) 18 ಲೈಂಕಿಗ ಕಿರುಕುಳ (ಶೇ.0.4)
ತಂತ್ರಜ್ಞರ ಕೊರತೆ : ಬೆಂಗಳೂರಿನಲ್ಲಿ ಎಂಟು ವಿಭಾಗಗಳಲ್ಲಿಸಿಇಎನ್ ಠಾಣೆಗಳನ್ನು ತೆರೆಯಲಾಗಿದೆ. ಆದರೆ, ಅಗತ್ಯ ತಂತ್ರಜ್ಞರಕೊರತೆಯನ್ನು ಈಗಲೂ ಠಾಣೆಗಳಲ್ಲಿಕಾಣಬಹುದು. ಹೀಗಾಗಿ ಸೈಬರ್‌ಕ್ರೈಂಗಳು ತನಿಖೆಯ ವೇಗಕಡಿಮೆಯಾಗಿದೆ. ಮತ್ತೂಂದೆಡೆ ಸಾಮಾಜಿಕ ಜಾಲತಾಣಗಳಕೇಂದ್ರಕಚೇರಿಗಳಿಂದ ಬರುವ ಪ್ರತಿಕ್ರಿಯೆ ತನಿಖೆ ಇತ್ಯರ್ಥಕ್ಕೆ ಸಹಕಾರವಾಗುತ್ತಿಲ್ಲ ಎನ್ನುತ್ತವೆ ಮೂಲಗಳು.
ದೇಶದಲ್ಲಿ ಹೆಚ್ಚು ತಂತ್ರಜ್ಞಾನ ಬಳಕೆ ಆಗುತ್ತಿರುವ ನಗರಗಳಲ್ಲಿ ಬೆಂಗಳೂರುಪ್ರಮುಖಸ್ಥಾನ ಹೊಂದಿದೆ. ಹೀಗಾಗಿಯೇ,ಸೈಬರ್ ವಂಚಕರು ನಗರದಲ್ಲಿವಂಚನೆಗಳನ್ನು ಹೆಚ್ಚು ಎಸಗುತ್ತಿದ್ದಾರೆ.ಪೊಲೀಸ್ ಇಲಾಖೆಕೂಡ ಪ್ರತಿಯೊಂದು ದೂರನ್ನೂ ಸ್ವೀಕರಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಸಾರ್ವಜನಿಕರುಕೂಡ ಸೈಬರ್ ವಂಚನೆ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸಿದಾಗ ಈ ವಂಚನೆಗೆಕಡಿವಾಣ ಬೀಳಲಿದೆ. –ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ
-ಮಂಜುನಾಥ್‌ಲಘುಮೇನಹಳ್ಳಿ