ವಿದ್ಯುತ್ ಶಾಕ್: ವಿಜಯಪುರ ಕೋರ್ಟ್ ಆವರಣದಲ್ಲಿ ಬಾಲಕ ಸಾವು
10:03 AM Jul 05, 2019 | Vishnu Das |
ವಿಜಯಪುರ: ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಗುರುವಾರ ಬೆಳಗ್ಗೆ 4 ವರ್ಷದ ಬಾಲಕನೊಬ್ಬ ವಿದ್ಯುತ್ ಶಾಕ್‌ನಿಂದಾಗಿ ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
Advertisement
ತಂದೆಯೊಂದಿಗೆ ಕೋರ್ಟ್‌ಗೆ ಆಗಮಿಸಿದ್ದ ಮಾಸಿದ ಒಡೆಯರ್ ಎಂಬಾತ ಮೃತ ಬಾಲಕ.
ತಂದೆ ನೀರು ಕುಡಿಯಲೆಂದು ಹೋದ ವೇಳೆ ದೀಪ ಅಳವಡಿಸಲಾದ ಕಂಬದ ಬುಡದಲ್ಲಿ ಬಾಕ್ಸ್‌ನಿಂದ ಹೊರ ಬಂದಿದ್ದ ವಿದ್ಯುತ್ ತಂತಿ ತುಗಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಾಲಕ ಮಲಕಾರಿ ಒಡೆಯರ್ ಎನ್ನುವರ ಏಕೈಕ ಪುತ್ರ .6 ಮಂದಿ ಹೆಣ್ಣು ಮಕ್ಕಳ ಬಳಿಕ ಈತ ಜನಿಸಿದ್ದ ಎಂದು ತಿಳಿದು ಬಂದಿದೆ.