Advertisement
ಸೋತ ಗುಜರಾತ್ ಟೈಟಾನ್ಸ್ ತಂಡವು ಮೇ 26ರಂದು ನಡೆಯುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆಡಲಿದೆ. ಬುಧವಾರ ನಡೆಯುವ ಎಲಿಮಿನೇಟರ್ ಪಂದ್ಯದ ವಿಜೇತ ತಂಡದ ಜತೆ ಗುಜರಾತ್ ಹೋರಾಡಲಿದೆ. ಈ ಪಂದ್ಯದ ವಿಜೇತ ತಂಡವು ಫೈನಲಿನಲ್ಲಿ ಚೆನ್ನೈ ಜತೆ ಮುಖಾಮುಖೀಯಾಗಲಿದೆ.
ಚೆನ್ನೈಯ ನಿಖರ ದಾಳಿಯನ್ನು ಎದುರಿಸಲು ಗುಜರಾತ್ ಆಟಗಾರರು ಬಹಳಷ್ಟು ಒದ್ದಾಟ ನಡೆಸಿದರು. ಆರಂಭದಲ್ಲಿಯೇ ನಿಧಾನವಾಗಿ ರನ್ ಪೇರಿಸತೊಡಗಿದ ಗುಜರಾತ್ ಆಗಾಗ್ಗೆ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಬಿತ್ತು.
Related Articles
Advertisement
ರವೀಂದ್ರ ಜಡೇಜ. ಚಹರ್ ಮತ್ತು ತೀಕ್ಷಣ ಅವರ ಅಮೋಘ ದಾಳಿಗೆ ಗುಜರಾತ್ ಆಟಗಾರರು ಸಂಪೂರ್ಣ ಶರಣಾದರು. ಯಾವುದೇ ಹಂತದಲ್ಲೂ ಪ್ರತಿಹೋರಾಟ ನೀಡಲು ವಿಫಲರಾದ ಕಾರಣ ತಂಡ ಅಂತಿಮವಾಗಿ 157 ರನ್ನಿಗೆ ಆಲೌಟಾಯಿತು.
ಚಹರ್, ತೀಕ್ಷಣ, ಜಡೇಜ ಮತ್ತು ಪತಿರಣ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು. ಜಡೇಜ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 18 ರನ್ ನೀಡಿದ್ದರು.
ಗಾಯಕ್ವಾಡ್ ಅರ್ಧಶತಕಚೆನ್ನೈಯ ಆರಂಭ ಉತ್ತಮವಾಗಿತ್ತು. ಆರಂಭಿಕ ರಾದ ರುತುರಾಜ್ ಗಾಯಕ್ವಾಡ್ ಮತ್ತು ಡೇವನ್ ಸ್ಮಿತ್ ಗುಜರಾತ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ರನ್ ಪೇರಿಸತೊಡ ಗಿದರು. ಶಮಿ ಎಸೆದ ಮೊದಲ ಓವರಿನಲ್ಲಿ ಹೆಚ್ಚಿನ್ ರನ್ ಬಂದಿರಲಿಲ್ಲ. ಆಬಳಿಕ ಅವರಿಬ್ಬರು ಭರ್ಜರಿಯಾಗಿ ಆಡಿದರು. ಇದರಿಂದಾಗಿ ಮೊದಲ 10 ಓವರ್ ಮುಗಿದಾಗ ತಂಡದ ಮೊತ್ತ 80ರ ಗಡಿ ದಾಟಿತ್ತು. ಮುಂದಿನ ಓವರಿನಲ್ಲಿ ಉತ್ತಮವಾಗಿ ಆಡುತ್ತಿದ್ದ ಗಾಯಕ್ವಾಡ್ ಅವರು ಮೋಹಿತ್ ಶರ್ಮ ಅವರಿಗೆ ವಿಕೆಟ್ ಒಪ್ಪಿಸಿದರು. 44 ಎಸೆತ ಎದುರಿಸಿದ ಅವರು 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 60 ರನ್ ಹೊಡೆದರು. ರನ್‌ವೇಗಕ್ಕೆ ಕಡಿವಾಣ
ಗಾಯಕ್ವಾಡ್ ಔಟಾದ ಬಳಿಕ ತಂಡದ ರನ್‌ವೇಗಕ್ಕೆ ಕಡಿವಾಣ ಬಿತ್ತು. ಆಬಳಿಕ ಬಂದ ಶಿವಂ ದುಬೆ 1 ರನ್ ಗಳಿಸಿ ನೂರ್ ಅಹ್ಮದ್‌ಗೆ ಕ್ಲೀನ್‌ಬೌಲ್ಡ್ ಆದರು. ಇದರಿಂದ ತಂಡ ಆಘಾತಕ್ಕೆ ಒಳಗಾಯಿತು. ಅಜಿಂಕ್ಯ ರಹಾನೆ ಕೂಡ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು. ಅಂಬಾಟಿ ರಾಯುಡು, ಧೋನಿ ಇಲ್ಲಿಯೂ ಮಿಂಚಲು ವಿಫಲರಾದರು. ಇದರಿಂದ ತಂಡದ ರನ್ ವೇಗ ಬಹಳಷ್ಟು ಕುಸಿಯಿತು. ಕೊನೆಹಂತದಲ್ಲಿ ರವೀಂದ್ರ ಜಡೇಜ ಉತ್ತಮವಾಗಿ ಆಡಿದ್ದರಿಂದ ತಂಡದ ಮೊತ್ತ 170ರ ಗಡಿ ದಾಟಿತು. ಅಂತಿಮ ಎಸೆತದಲ್ಲಿ ಔಟಾದ ಜಡೇಜ 16 ಎಸೆತ ಎದುರಿಸಿದ್ದು 22 ರನ್ ಗಳಿಸಿದ್ದರು. ಗುಜರಾತ್‌ನ ನಿಖರ ದಾಳಿಯಿಂದಾಗಿ ಚೆನ್ನೈ ಅಂತಿಮ ಮೂರು ಓವರ್‌ಗಳಲ್ಲಿ 35 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಬಿಗು ದಾಳಿ ಸಂಘಟಿಸಿದ ಮೊಹಮ್ಮದ್ ಶಮಿ 28 ರನ್ನಿಗೆ 2 ವಿಕೆಟ್ ಕಿತ್ತರು. ಮೋಹಿತ್ ಶರ್ಮ 31 ರನ್ನಿಗೆ 2 ವಿಕೆಟ್ ಪಡೆದರೆ ರಶೀದ್ ಖಾನ್, ನೂರ್ ಅಹ್ಮದ್ ಮತ್ತು ದರ್ಶನ್ ನಲ್ಕಾಂಡೆ ತಲಾ ಒಂದು ವಿಕೆಟ್ ಪಡೆದರು. ಸ್ಕೋರ್ ಪಟ್ಟಿ
ಚೆನ್ನೈ ಸೂಪರ್ ಕಿಂಗ್ಸ್
ರುತುರಾಜ್ ಗಾಯಕ್ವಾಡ್ ಸಿ ಮಿಲ್ಲರ್ ಬಿ ಶರ್ಮ 60
ಡೇವನ್ ಕಾನ್ವೇ ಸಿ ರಶೀದ್ ಬಿ ಶಮಿ 40
ಶಿವಂ ದುಬೆ ಬಿ ರೂರ್ ಅಹ್ಮದ್ 1
ಅಜಿಂಕ್ಯ ರಹಾನೆ ಸಿ ಗಿಲ್ ಬಿ ನಲ್ಕಾಂಡೆ 17
ಅಂಬಾಟಿ ರಾಯುಡು ಸಿ ಶಣಕ ಬಿ ರಶೀದ್ 17
ರವೀಂದ್ರ ಜಡೇಜ ಬಿ ಶಮಿ 22
ಎಂಎಸ್ ಧೋನಿ ಸಿ ಪಾಂಡ್ಯ ಬಿ ಶರ್ಮ 1
ಮೊಯಿನ್ ಅಲಿ ಔಟಾಗದೆ 9
ಇತರ: 5
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 172
ವಿಕೆಟ್ ಪತನ: 1-87, 2-90, 3-121, 4-125, 5-148, 6-155, 7-172
ಬೌಲಿಂಗ್:
ಮೊಹಮ್ಮದ್ ಶಮಿ 4-0-28-2
ದರ್ಶನ್ ನಲ್ಕಾಂಡೆ 4-0-44-1
ರಶೀದ್ ಖಾನ್ 4-0-37-1
ನೂರ್ ಅಹ್ಮದ್ 4-0-29-1
ಮೋಹಿತ್ ಶರ್ಮ 4-0-31-2 ಗುಜರಾತ್ ಟೈಟಾನ್ಸ್
ವೃದ್ಧಿಮಾನ್ ಸಾಹ ಸಿ ಪತಿರಣ ಬಿ ಚಹರ್ 12
ಶುಭ್‌ಮನ್ ಗಿಲ್ ಸಿ ಕಾನ್ವೆ ಬಿ ಚಹರ್ 42
ಹಾರ್ದಿಕ್ ಪಾಂಡ್ಯ ಸಿ ಜಡೇಜ ಬಿ ತೀಕ್ಷಣ 8
ದಾಸುನ್ ಶಣಕ ಸಿ ತೀಕ್ಷಣ ಬಿ ಜಡೇಜ 17
ಡೇವಿಡ್ ಮಿಲ್ಲರ್ ಬಿ ಜಡೇಜ 4
ವಿಜಯ್ ಶಂಕರ್ ಸಿ ಗಾಯಕ್ವಾಡ್ ಬಿ ಪತಿರಣ 14 ರಾಹುಲ್ ತೆವಾಟಿಯ ಬಿ ತೀಕ್ಷಣ 3
ರಶೀದ್ ಖಾನ್ ಸಿ ಕಾನ್ವೆ ಬಿ ದೇಶಪಾಂಡೆ 30
ದರ್ಶನ್ ನಲ್ಗಾಂಡೆ ರನೌಟ್ 0
ನೂರ್ ಅಹ್ಮದ್ ಔಟಾಗದೆ 7
ಮೊಹಮ್ಮದ್ ಶಮಿ ಸಿ ಚಹರ್ ಬಿ ಪತಿರಣ 5
ಇತರ: 15
ಒಟ್ಟು (20 ಓವರ್‌ಗಳಲ್ಲಿ ಆಲೌಟ್) 157
ವಿಕೆಟ್ ಪತನ: 1-22, 2-41, 3-72, 4-88, 5-88, 6-98, 7-136, 8-136, 9-142
ಬೌಲಿಂಗ್:
ದೀಪಕ್ ಚಹರ್ 4-0-29-2
ತುಷಾರ್ ದೇಶಪಾಂಡೆ 4-0-43-1 ಮಹೀಶ್ ತೀಕ್ಷಣ 4-0-28-2
ರವೀಂದ್ರ ಜಡೇಜ 4-0-18-2
ಮತೀಶ ಪತಿರಣ 4-0-37-2