Advertisement
ಆರಂಭದಲ್ಲಿ ಅರ್ಶದೀಪ್ ಸಿಂಗ್ ಅವರು 18 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾದರು. ಬಳಿಕ ರಬಾಡಾ ಗುಜರಾತ್ ಟೈಟಾನ್ಸ್ ಗೆ ಬಳಿಕ ಶ್ರೇಯಸ್ ಅಯ್ಯರ್ ಅವರು ದಾಖಲೆಯ 26.75 ಕೋಟಿ ರೂ ಬೆಲೆಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾದರು. ಇಂಗ್ಲೆಂಡ್ ನ ಜೋಸ್ ಬಟ್ಲರ್ ಅವರು 15.75 ಕೋಟಿ ರೂ ಗೆ ಗುಜರಾತ್ ತಂಡ ಸೇರಿದರು.
Related Articles
Advertisement
ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಹರಾಜಿಗೆ ಬಂದೊಡನೆ ಭಾರಿ ಬಿಡ್ಡಿಂಗ್ ಆರಂಭವಾಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪೈಪೋಟಿಯಲ್ಲಿ ಬಿಡ್ ನಡೆಸಿದವು. ಹತ್ತು ಕೋಟಿವರೆಗೆ ಬಿಡ್ ಮಾಡಿದ ಬೆಂಗಳೂರು ಬಳಿಕ ಹಿಂದೆ ಸರಿಯಿತು. ಬಳಿಕ ಹೈದರಾಬಾದ್ ತಂಡವು ಬಿಡ್ಡಿಂಗ್ ನಡೆಸಿತು.
ಕೊನೆಗೆ ರಿಷಭ್ ಪಂತ್ ಅವರು 20.75 ಕೋಟಿ ರೂ ಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾದರು. ಬಳಿಕ ಡೆಲ್ಲಿ ಆರ್ ಟಿಎಂ ಕಾರ್ಡ್ ಪ್ರಯೋಗಿಸಿತು. ಬಳಿಕ ಲಕ್ನೋ ಬರೋಬ್ಬರಿ 27 ಕೋಟಿ ರೂ ಬಿಡ್ ಏರಿಸಿತು. ಹೀಗಾಗಿ ಪಂತ್ ಲಕ್ನೋ ಪಾಲಾದರು. ಪಂತ್ ಹೀಗಾಗಿ ಅತ್ಯಂತ ದುಬಾರಿ ಆಟಗಾರ ಎಂಬ ಅಯ್ಯರ್ ದಾಖಲೆ ಮುರಿದರು. ಈ ಹಿಂದೆ ಡೆಲ್ಲಿ ಪರವಾಗಿ ಆಡಿದ್ದ ಪಂತ್ ಈ ಸೀಸನ್ ನಲ್ಲಿ ಲಕ್ನೋ ತಂಡದಲ್ಲಿ ಆಡಲಿದ್ದಾರೆ.