Advertisement
ಆದರೆ ಮಂಗಳವಾರ ವಿಂಡೀಸ್-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಗೊಂದಲ ಉದ್ಭವಿಸಿದೆ. ದಕ್ಷಿಣ ಆಫ್ರಿಕಾ ಆಟಗಾರ ಕ್ವಿಂಟನ್ ಡಿ ಕಾಕ್ ಮಂಡಿಯೂರಿ ಕುಳಿತು ವರ್ಣಭೇದವನ್ನು ವಿರೋಧಿಸಲು ತಿರಸ್ಕರಿಸಿದ್ದಾರೆ. ಮಾತ್ರವಲ್ಲ, ಪಂದ್ಯದಿಂದಲೇ ಹೊರಗುಳಿದರು!
ಕೂಟದ ಮೊದಲ ದಿನವಾದ ಶನಿವಾರ ಇಂಗ್ಲೆಂಡ್-ಇಂಡೀಸ್ ತಂಡಗಳು ಮಂಡಿಯೂರಿ ವರ್ಣ ಭೇದವನ್ನು ವಿರೋಧಿಸಿದ್ದವು. ರವಿವಾರ ಭಾರತ-ಪಾಕಿಸ್ಥಾನ ಆಟಗಾರರೂ ಇದನ್ನು ಅನುಸರಿ ಸಿದ್ದರು. ಆದರೆ ಮಂಗಳವಾರದ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಡಿ ಕಾಕ್ ಇದನ್ನು ನಿರಾಕರಿಸಿದರು. ಇದನ್ನೂ ಓದಿ:ಲಾಡ್ಜ್ ಗೆ ಕರೆದೊಯ್ದು ಆತ್ಯಾಚಾರ: ಆರೋಪಿಸಿ ಬಂಧನ
Related Articles
ಈ ಹಿಂದೆಯೂ ಡಿಕಾಕ್ ಇದನ್ನು ವಿರೋಧಿಸಿದ್ದರು. “ವಿರೋಧ ಮಾಡುವುದು ಪ್ರತಿಯೊಬ್ಬರ ನಿರ್ಧಾರವಾಗಬೇಕು. ಅದನ್ನು ಯಾರ ಮೇಲೂ ಯಾರೂ ಒತ್ತಾಯಪೂರ್ವಕವಾಗಿ ಹೇರುವಂತಿಲ್ಲ. ಪ್ರತಿಯೊಂದನ್ನೂ ನಾನು ನಿರ್ಧರಿಸುವುದು ಹೀಗೆ’ ಎಂದು ಹೇಳಿಕೊಂಡಿದ್ದರು. ಈ ನಿಲುವನ್ನೇ ಡಿ ಕಾಕ್ ಈಗ ಮುಂದುವರಿಸಿದ್ದಾರೆ.
Advertisement
ಆದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ, ಆಟಗಾರರೆಲ್ಲರಿಗೂ ಜನಾಂಗೀಯ ನಿಂದನೆಯನ್ನು ವಿರೋಧಿಸಬೇಕೆಂದು ಆದೇಶ ನೀಡಿದೆ. ಆ ದೇಶ ಹಿಂದೆಯೂ ವರ್ಣಭೇದದ ಇಕ್ಕಟ್ಟಿಗೆ ಸಿಲುಕಿತ್ತು.