Advertisement

ನ್ಯೂಜಿಲ್ಯಾಂಡ್‌ನ‌ಲ್ಲಿ ಸಾಲು ಸಾಲು ಕ್ರಿಕೆಟ್‌ ಸರಣಿ

09:41 PM Aug 20, 2020 | mahesh |

ವೆಲ್ಲಿಂಗ್ಟನ್: ಕೋವಿಡ್‌-19 ಹಾವಳಿಯ ನಡುವೆಯೂ ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಮಂಡಳಿ ಮುಂಬರುವ ದಿನಗಳಲ್ಲಿ ಸಾಲು ಸಾಲು ಅಂತಾರಾಷ್ಟ್ರೀಯ ಸರಣಿಗಳನ್ನು ನಡೆಸಲು ಮುಂದಾಗಿದೆ. ಪಾಕಿಸ್ಥಾನ, ಆಸ್ಟ್ರೇಲಿಯ, ಬಾಂಗ್ಲಾದೇಶ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ನ್ಯೂಜಿಲ್ಯಾಂಡಿಗೆ ಪ್ರವಾಸ ಬರಲಿವೆ ಎಂದು ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೇವಿಡ್‌ ವೈಟ್‌ ತಿಳಿಸಿದ್ದಾರೆ.

Advertisement

“ಸರಣಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ನಮಗೆ ಭಾರೀ ಯಶಸ್ಸು ಸಿಕ್ಕಿದೆ. ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿಯವರನ್ನು ಕೇವಲ ದೂರವಾಣಿಯಲ್ಲಿ ಸಂಪರ್ಕಿಸಲಾಗಿದ್ದು, ಅವರು ಒಪ್ಪಿಗೆ ಸೂಚಿಸಿದ್ದಾರೆ. ಹಾಗೆಯೇ ಪಾಕಿಸ್ಥಾನ, ಆಸ್ಟ್ರೇಲಿಯ ಮತ್ತು ಬಾಂಗ್ಲಾದೇಶ ತಂಡಗಳೂ ನ್ಯೂಜಿಲ್ಯಾಂಡ್‌ ಪ್ರವಾಸವನ್ನು ಖಚಿತಪಡಿಸಿವೆ’ ಎಂದು ವೈಟ್‌ ತಿಳಿಸಿದರು.ಆದರೆ ಈ ಸರಣಿಗಳ ವೇಳಾಪಟ್ಟಿಯನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ. ಪಂದ್ಯಗಳೆಲ್ಲ ಜೈವಿಕ ಸುರಕ್ಷಾ ವಲಯದಲ್ಲಿ ನಡೆಯಲಿವೆ ಎಂದು ಡೇವಿಡ್‌ ವೈಟ್‌ ಹೇಳಿದರು. ಕಳೆದ ಮಾರ್ಚ್‌ನಲ್ಲಿ ಆಸ್ಟ್ರೇಲಿಯದ ಏಕದಿನ ಸರಣಿಯನ್ನು ಕೊರೊನಾದಿಂದಾಗಿ ಅರ್ಧದಲ್ಲೇ ಕೊನೆಗೊಳಿಸಿದ ಬಳಿಕ ನ್ಯೂಜಿಲ್ಯಾಂಡ್‌ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next