Advertisement

ICC: ಹೈಬ್ರಿಡ್‌ ಮಾದರಿಯಲ್ಲಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಕೂಟ: ಐಸಿಸಿ ಸಮ್ಮತಿ

01:34 AM Dec 06, 2024 | Team Udayavani |

ಹೊಸದಿಲ್ಲಿ: ಮುಂದಿನ ವರ್ಷದ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಕೂಟವನ್ನು ಹೈಬ್ರಿಡ್‌ ಮಾದರಿಯಲ್ಲಿ ಸಂಘಟಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಒಮ್ಮತಕ್ಕೆ ಬಂದಿದ್ದು ಭಾರತವು ತನ್ನ ಪಾಲಿನ ಪಂದ್ಯಗಳನ್ನು ದುಬಾೖಯಲ್ಲಿ ಆಡಲು ಅವಕಾಶ ಕಲ್ಪಿಸಿದೆ.

Advertisement

ಇದೇ ರೀತಿಯ ವ್ಯವಸ್ಥೆಗೆ ಎಲ್ಲ ಸದಸ್ಯ ರಾಷ್ಟ್ರಗಳು ತಾತ್ವಿಕವಾಗಿ ಒಪ್ಪಿಕೊಂಡಿದ್ದು 2027ರ ವರೆಗೆ ನಡೆಯುವ ಬಹುರಾಷ್ಟ್ರಗಳ ಐಸಿಸಿ ಕೂಟಗಗಳು ಇದೇ ರೀತಿ ನಡೆಯಲಿವೆ. ಐಸಿಸಿಯ ನೂತನ ಅಧ್ಯಕ್ಷ ಜಯ್‌ ಶಾ ಅವರು ಗುರುವಾರ ಮಂಡಳಿಯ ನಿರ್ದೇಶಕ ಜತೆ ನಡೆಸಿದ ಸಭೆಯ ವೇಳೆ ಈ ನಿರ್ಧಾರವನ್ನು ಅಂತಿಮಗೊಳಿಸಲಾಗಿದೆ.

ಈ ಸಭೆಯಲ್ಲಿ ಪಾಕಿಸ್ಥಾನದ ಪ್ರತಿನಿಧಿಗಳು ಭಾಗವಹಿಸಿದ್ದರು. ಚಾಂಪಿಯನ್ಸ್‌ ಟ್ರೋಫಿ ಮುಂದಿನ ವರ್ಷದ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಪಾಕಿಸ್ಥಾನದಲ್ಲಿ ನಡೆಯಲಿದ್ದು ಭಾರತದ ಪಂದ್ಯಗಳು ದುಬಾೖಯಲ್ಲಿ ಜರಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next