Advertisement

ಲಂಕೆಯಲ್ಲಿ ಕ್ರಿಕೆಟ್‌ ಜೂಜಾಟ: ಅರ್ಜುನ ರಣತುಂಗ ಕಿಡಿ

03:15 PM Sep 01, 2017 | Team Udayavani |

ಕೊಲಂಬೋ : ಈಚಿನ ದಿನಗಳಲ್ಲಿ ಅತ್ಯಂತ ಕಿಡಿಕಾರುವ ವಿವಾದಾತ್ಮಕ ಹೇಳಿಕೆಗಳನ್ನೇ ನೀಡುವ ಚಾಳಿ ಬೆಳೆಸಿಕೊಂಡಿರುವ ಲಂಕೆಯ ಮಾಜಿ ಕ್ರಿಕೆಟ್‌ ಕಪ್ತಾನ ಹಾಗೂ ಹಾಲಿ ರಾಜಕಾರಣಿ ಅರ್ಜುನ ರಣತುಂಗ “ಲಂಕೆಯಲ್ಲಿ ಕ್ರಿಕೆಟನ್ನು ಜೂಜುಕೋರರು ನಡೆಸುತ್ತಿದ್ದಾರೆ; ಹಾಗಾಗಿ ಲಂಕಾ ಕ್ರಿಕೆಟ್‌ ಇಂದು ವಸ್ತುತಃ ಜೂಜಾಟವಾಗಿದೆ” ಎಂದು ಹೇಳಿದ್ದಾರೆ. 

Advertisement

ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ  ರಣತುಂಗ, “ಲಂಕೆಯ ಕ್ರಿಕೆಟ್‌ನಲ್ಲಿ ಈಚಿನ ದಿನಗಳಲ್ಲಿ ಏನಾಗುತ್ತಿದೆಯೋ ಅದನ್ನು ನಾನು ಒಪ್ಪುವುದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಲಂಕಾ ಕ್ರಿಕೆಟ್‌ ಆಡಳಿತೆ ಅತ್ಯಂತ ಕಳಪೆ ಇದೆ. ಇಲ್ಲಿ ಕ್ರಿಕೆಟನ್ನು ಜೂಜುಕೋರರು ನಡೆಸುತ್ತಿದ್ದಾರೆ. ಹಾಗಾಗಿ ಕ್ರಿಕೆಟ್‌ ಇಲ್ಲಿ ಜೂಜಾಟವಾಗಿದೆ. ಆದುದರಿಂದ ಲಂಕಾ ಕ್ರಿಕೆಟ್‌ ವೈಪಲ್ಯಕ್ಕೆ ನೀವು ಕೇವಲ ಆಟಗಾರರನ್ನು ಮಾತ್ರವೇ ದೂರಿ ಪ್ರಯೋಜನವಿಲ್ಲ’ ಎಂದು ರಣತುಂಗ ಹೇಳಿದರು. 

ಲಂಕಾ ಕ್ರಿಕೆಟ್‌ ಆಡಳಿತ ಮಂಡಳಿಯಲ್ಲಿ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ ಅನುಭವ ಇರುವ ಒಬ್ಬನೇ ಒಬ್ಬ ವ್ಯಕ್ತಿಯೂ ಇಲ್ಲ. ಲಂಕೆಯ ಹಿಂದಿನ ಸರಕಾರ ಬಹಳ ದೀರ್ಘ‌ ಕಾಲ ಈ ಬಗೆಯ ಅನುಭವೀ ಆಟಗಾರರನ್ನು ಆಡಳಿತ ಮಂಡಳಿಯಿಂದ ಹೊರಗಿಟ್ಟಿತು. ಏಕೆಂದರೆ ಅವರು ಹಾಲಿ ಸ್ಥಿತಿ ನಿಭಾವಣೆಗೆ ತಕ್ಕುದಾದವರಲ್ಲ ಎಂಬ ಕಾರಣಕ್ಕೆ. ಅಲ್ಲಿಂದಲೇ ಲಂಕಾ ಕ್ರಿಕೆಟ್‌ನಲ್ಲಿ ತಪ್ಪುಗಳು ಆರಂಭವಾದವು ಎಂದು ರಣತುಂಗ ಕಟುವಾಗಿ ಹೇಳಿದರು. 

ಪ್ರವಾಸೀ ಭಾರತ ತಂಡದೆದುರಿನ ಟೆಸ್ಟ್‌ ಸರಣಿಯನ್ನು  ತನ್ನ ಸ್ವಂತ ನೆಲದಲ್ಲಿ ಲಂಕಾ 3-0 ಅಂತರದಲ್ಲಿ ದಯನೀಯವಾಗಿ ಸೋತಿರುವುದು ಹಾಗೂ ಈಗ ಚಾಲ್ತಿಯಲ್ಲಿರುವ ಐದು ಏಕದಿನ ಪಂದ್ಯಗಳ ಸರಣಿಯನ್ನು 4-0 ಅಂತರದಲ್ಲಿ ಸೋತಿರುವುದು ದೇಶದ ಕ್ರಿಕೆಟಿಗೆ ಬಹುದೊಡ್ಡ ಮುಖಭಂಗವಾಗಿದೆ ಎಂಬುದನ್ನು ರಣತುಂಗ ಒಪ್ಪಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next