Advertisement

ಗಾಲೆ ಟೆಸ್ಟ್‌: ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಕ್ಕೆ 10 ವಿಕೆಟ್‌ ಜಯ

11:12 PM Jul 01, 2022 | Team Udayavani |

ಗಾಲೆ: ದ್ವಿತೀಯ ಸರದಿಯಲ್ಲಿ ತೀವ್ರ ಬ್ಯಾಟಿಂಗ್‌ ಕುಸಿತ ಅನುಭವಿಸಿದ ಶ್ರೀಲಂಕಾ ಗಾಲೆ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ 10 ವಿಕೆಟ್‌ಗಳಿಂದ ಶರಣಾಗಿದೆ.

Advertisement

ಆಸ್ಟ್ರೇಲಿಯ ಗೆಲುವಿಗೆ ಕೇವಲ 5 ರನ್‌ ಬೇಕಿತ್ತು. ಡೇವಿಡ್‌ ವಾರ್ನರ್‌ ಒಂದು ಫೋರ್‌, ಒಂದು ಸಿಕ್ಸರ್‌ ಬಾರಿಸಿ ನಾಲ್ಕೇ ಎಸೆತಗಳಲ್ಲಿ ಇದನ್ನು ಪೂರೈಸಿದರು. ಪಂದ್ಯ ಕೇವಲ ಎರಡೂವರೆ ದಿನಗಳಲ್ಲಿ ಮುಗಿಯಿತು.

ಶ್ರೀಲಂಕಾದ 212 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಜವಾಬು ನೀಡಿದ ಆಸ್ಟ್ರೇಲಿಯ 321 ರನ್‌ ಪೇರಿಸಿ 109 ರನ್‌ ಲೀಡ್‌ ಗಳಿ ಸಿತು. ದ್ವಿತೀಯ ಸರದಿಯಲ್ಲಿ ಲಂಕಾ ಬ್ಯಾಟಿಂಗ್‌ ಮರೆತವರಂತೆ ಆಡಿ 22.5 ಓವರ್‌ಗಳಲ್ಲಿ ಜುಜುಬಿ 113 ರನ್ನಿಗೆ ಕುಸಿಯಿತು.

Advertisement

Udayavani is now on Telegram. Click here to join our channel and stay updated with the latest news.

Next