Advertisement
ಪೋಪ್ಅರ್ಜೆಂಟಿನಾದ ಕ್ಯಾಥೋಲಿಕ್ ಚರ್ಚ್ ಕ್ರೆçಸ್ತ ಸಮುದಾಯದ ಅತ್ಯಂತ ಪ್ರಮುಖ ಧಾರ್ಮಿಕ ಸ್ಥಳ. ಇಲ್ಲಿನ ಮುಖ್ಯ ಪಾದ್ರಿ(ಪೋಪ್)ಗಳು ಸಾವನ್ನಪ್ಪಿದರೆ ಅವರಿಗೆ ವಿಶೇಷ ರೀತಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಚರ್ಚಿನ ಮುಖ್ಯ ಅಧಿಕಾರಿಯು ಪೋಪ್‌ನ ಬಳಿ ಮೂರು ಬಾರಿ ಅವರ ಹೆಸರನ್ನು ಗಟ್ಟಿಯಾಗಿ ಕರೆಯುತ್ತಾರೆ. ಅವರು ಅದಕ್ಕೆ ಪ್ರತಿಕ್ರಿಯಿಸದಿದ್ದಲ್ಲಿ,(ವೈದ್ಯಕೀಯ ದೃಢೀಕರಣದ ನಂತರ) ಅವರನ್ನು ನಿಧನ ಎಂದು ಘೋಷಿಸಲಾಗುತ್ತದೆ. ತಕ್ಷಣ ಪೋಪ್ ಅಪಾರ್ಟ್‌ಮೆಂಟ್ ಅನ್ನು ಸೀಲ್ ಮಾಡಲಾಗುತ್ತದೆ. ಕಾಲೇಜ್ ಆಫ್ ಕಾರ್ಡಿನಲ್ಸ್‌ನ ಡೀನ್ ಅವರು ಕ್ಯಾಥೋಲಿಕ್ ಫುನರಲ್ ರೀಡಿಂಗ್ಸ್ ಓದುತ್ತಾರೆ. 9 ದಿನಗಳ ಸಂತಾಪ ಕಾರ್ಯಕ್ರಮ ನಡೆಯುತ್ತದೆ. ಅದರಲ್ಲಿ 4 ಮತ್ತು 6ನೇ ದಿನದ ಮಧ್ಯದಲ್ಲಿ ಮೃತರ ಅಂತ್ಯಕ್ರಿಯೆ ನಡೆಯುತ್ತದೆ.
ಸೌದಿ ಅರೇಬಿಯಾದಲ್ಲಿ ರಾಜಮನೆತನವಿದೆಯಾದರೂ ಅಲ್ಲಿ, ಸಾವಿಗೆ ಅಷ್ಟೊಂದು ಪ್ರಾಮುಖ್ಯತೆ ಕೊಡಲಾಗುವುದಿಲ್ಲ. ರಾಜ ಅಥವಾ ರಾಣಿ ಮೃತರಾದಾಗ ಅವರ ಪಾರ್ಥಿವ ಶರೀರವನ್ನು ಯಾವುದಾದರೊಂದು ಸ್ಥಳದಲ್ಲಿ ಹೂಳಲಾಗುವುದು. ಸಾವಿನ ಪ್ರಯುಕ್ತ ಸರ್ಕಾರ ರಜೆಯಾಗಲೀ, ಧ್ವಜವನ್ನು ಅರ್ಧಕ್ಕೆ ಹಾರಿಸುವ ಸಂಪ್ರದಾಯ ಅಲ್ಲಿಲ್ಲ. ರಾಜ ಆತನ ಜೀವನದಲ್ಲಿ ಅದೆಷ್ಟೇ ಅದ್ಧೂರಿತನವನ್ನು ನೋಡಿದ್ದರೂ, ಮೃತರಾದ ನಂತರ ಅತ್ಯಂತ ಸರಳವಾಗಿ ಅವರನ್ನು ಮಣ್ಣು ಮಾಡಲಾಗುತ್ತದೆ. ಬೇರೆ ರಾಷ್ಟ್ರಗಳಂತೆ ಅಂತಿಮ ದರ್ಶನಕ್ಕೆ ಸಾಲು ನಿಲ್ಲುವ ಅಭ್ಯಾಸವೂ ಇಲ್ಲಿಲ್ಲ. ಕುಟುಂಬದವರು ಮತ್ತು ಆಪ್ತರಷ್ಟೇ ಸೇರಿಕೊಂಡು, ಮೃತ ಸಮಯದ 24 ಗಂಟೆಗಳೊಳಗೆ ಅಂತಿಮ ಸಂಸ್ಕಾರವನ್ನು ಮಾಡಿ ಮುಗಿಸುತ್ತಾರೆ.
Related Articles
ಬ್ರಿಟನ್‌ನಲ್ಲಿ ರಾಜ ಅಥವಾ ರಾಣಿ ಸಾವನ್ನಪ್ಪಿದ ತಕ್ಷಣ ಅವರ ಹಿರಿಯ ಮಗ ಅಥವಾ ಮಗಳನ್ನು ರಾಜ/ರಾಣಿ ಎಂದು ಘೋಷಿಸಲಾಗುತ್ತದೆ. ಹಲವು ದಿನಗಳ ಸಂತಾಪ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅವರನ್ನು ವೆಸ್ಟ್‌ಮಿಂಸ್ಟರ್ ಅರಮನೆಯಿಂದ ವೆಸ್ಟ್‌ಮಿಂಸ್ಟರ್ ಅಬ್ಬೆಗೆ ಮೆರವಣಿಗೆ ಮೂಲಕ ಕರೆದೊಯ್ಯಲಾಗುತ್ತದೆ. ಆ ಮೆರವಣಿಗೆಯಲ್ಲಿ ರಾಯಲ್ ಕುಟುಂಬದವರು ಭಾಗಿಯಾಗುತ್ತಾರೆ. ಅಲ್ಲಿಂದ ಸಾಂವಿಧಾನಿಕ ಆರ್ಚ್ ಎಂದೂ ಕರೆಸಿಕೊಳ್ಳುವ ವೆಲ್ಲಿಂಗ್‌ಟನ್ ಆರ್ಚ್‌ಗೆ ಮೆರವಣಿಗೆ ಸಾಗುತ್ತದೆ. ಅಲ್ಲಿಂದ ವಿಂಡ್ಸರ್‌ಗೆ ಕರೆದೊಯ್ಯಲಾಗುತ್ತದೆ. ರಾಣಿ ಅಥವಾ ರಾಜನ ಅಂತಿಮ ಸಂಸ್ಕಾರಕ್ಕೂ ಮೊದಲು(ಸಾಮಾನ್ಯವಾಗಿ ಅದರ ಹಿಂದಿನ ದಿನ) ರಾಷ್ಟ್ರೀಯವಾಗಿ ರಾಣಿಗೆ ಸಂತಾಪ ಸೂಚನೆ ನಡೆಯುತ್ತದೆ. ಆ ಸಮಯದಲ್ಲಿ ಸಾಮುದಾಯಿಕವಾಗಿ ಸಂತಾಪ ಸೂಚಿಸಲಾಗುತ್ತದೆ. ಹಾಗೆಯೇ ಬ್ರಿಟನ್‌ನ ಪ್ರತಿ ಮನೆಗಳಲ್ಲೂ ನಿಗದಿ ಪಡಿಸಿದ ಸಮಯದಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಿ ಸಂತಾಪ ಸೂಚಿಸಲಾಗುತ್ತದೆ. ಬ್ರಿಟನ್‌ನಿಂದ ಹೊರಗಿರುವವರಿಗೂ ಬ್ರಿಟನ್ನರೂ ಸಂತಾಪ ತಾವಿದ್ದಲ್ಲಿಂದಲೇ ಸಂತಾಪ ಸೂಚಿಸುತ್ತಾರೆ. ರಾಜಮನೆತನದವರ ಪಾರ್ಥಿವ ಶರೀರವನ್ನು ವಿಂಡ್ಸರ್‌ನಲ್ಲಿ ಮಣ್ಣು ಮಾಡಲಾಗುತ್ತದೆ. ಮಣ್ಣು ಮಾಡುವ ಸ್ಥಳ ನೆಲಮಾಳಿಗೆಯಲ್ಲಿದ್ದು, ಅದು ಸಂಪೂರ್ಣವಾಗಿ ರಾಜಮನೆತನದ ಖಾಸಗಿ ಸ್ಥಳವಾಗಿರುತ್ತದೆ. ಅಲ್ಲಿಗೆ ಬೇರೆಯವರ ಪ್ರವೇಶವಿರುವುದಿಲ್ಲ. ಸಂತಾಪ ಸೂಚನೆಯ ಕಾಲದಲ್ಲಿ ಪ್ರತಿ ದಿನವೂ ನಿರ್ದಿಷ್ಟ ಬಣ್ಣದ ವಸ್ತ್ರವನ್ನು ಹಾಕುವ ನಿಯಮವಿರುತ್ತದೆ.
Advertisement
ಭೂತಾನ್ ರಾಜ/ರಾಣಿ:ಭೂತಾನ್ ರಾಜ ಅಥವಾ ರಾಣಿ ಸಾವನ್ನಪ್ಪಿದಾಗ ಮೊದಲಿಗೆ ಅವರನ್ನು ಗ್ರ್ಯಾಂಡ್ ಅರಮನೆಗೆ ಕರೆತರಲಾಗುತ್ತದೆ. ಸ್ನಾನದ ವಿಧಿ ವಿಧಾನವನ್ನು ಅವರ ಮಗ/ಮಗಳ ಸಾನಿಧ್ಯದಲ್ಲಿ ನಡೆಸಲಾಗುತ್ತದೆ. ನಂತರ ಸಾಂಕೇತಿಕ ಸ್ನಾನ ನಡೆಸಿ, ಅದರಲ್ಲಿ ಸಾರ್ವಜನಿಕರಿಗೂ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಕೆಲ ದಿನಗಳ ಸಂತಾಪದ ನಂತರ ಪಾರ್ಥೀವ ಶರೀರವನ್ನಿರಿಸಿದ್ದ ಶವಪೆಟ್ಟಿಗೆಯನ್ನು ಬೆಂಕಿಯಲ್ಲಿ ಸುಡಲಾಗುತ್ತದೆ. ಪಾರ್ಥಿವ ಶರೀರವನ್ನು ಅರಮನೆಯ ದುಸೀತ್ ಮಹಾ ಪ್ರಸಾತ್ ಸಿಂಹಾಸನವಿರುವ ಸಭಾಂಗಣದಲ್ಲಿ ಇರಿಸಲಾಗುತ್ತದೆ. ಒಂದು ವರ್ಷದ ಕಾಲ ಆ ಪಾರ್ಥಿವ ಶರೀರವನ್ನು ಅಲ್ಲೇ ಇರಿಸಲಾಗುತ್ತದೆ. ಅದಕ್ಕೆ ನೂರು ದಿನಗಳ ಕಾಲ ನಿತ್ಯ ಪೂಜೆ ನಡೆಯುತ್ತದೆ. 7, 15, 50 ಮತ್ತು 100ನೇ ದಿನದ ಪೂಜೆಯಲ್ಲಿ ಅವರ ಮಗ/ಮಗಳು ಪಾಲ್ಗೊಳ್ಳುತ್ತಾರೆ. ಪಾರ್ಥಿವ ಶರೀರವನ್ನಿರಿಸಿದ 15 ದಿನಗಳ ನಂತರ ಅದರ ದರ್ಶನ ಪಡೆಯಲು ಸಾರ್ವಜನಿಕರಿಗೂ ಅವಕಾಶ ನೀಡಲಾಗುತ್ತದೆ. 100 ದಿನಗಳಿಗೆ ಅದ್ಧೂರಿ ಕಾರ್ಯಕ್ರಮವನ್ನೂ ನಡೆಸಲಾಗುತ್ತದೆ. ಈ ನೂರು ದಿನಗಳ ಅವಧಿಯಲ್ಲಿ ಅನೇಕ ವಿದೇಶಿ ಗಣ್ಯರು, ಪ್ರವಾಸಿಗರು ಸೇರಿದಂತೆ ಹಲವು ಪ್ರಮುಖರು ಪಾರ್ಥಿವ ಶರೀರದ ದರ್ಶನ ಪಡೆಯುತ್ತಾರೆ. ಹಾಗೆಯೇ ಅದೇ ವೇಳೆ ಒಂದಿಷ್ಟು ದೇಣಿಗೆ ಅಥವಾ ಕಾಣಿಕೆಯನ್ನೂ ಕೊಟ್ಟು ಹೋಗುವ ಸಂಪ್ರದಾಯವಿದೆ. ಒಂದು ವರ್ಷವಾದ ನಂತರ ಪಾರ್ಥಿವ ಶರೀರದ ನಿಜವಾದ ಅಂತ್ಯಕ್ರಿಯೆ ನಡೆಯುತ್ತದೆ. ಸಾರ್ವಜನಿಕ ಸ್ಮಶಾನದಲ್ಲಿಯೇ ಅಂತ್ಯಕ್ರಿಯೆ ನಡೆಸಿ, ಅದರ ಬೂದಿಯನ್ನು ಅರಮನೆಯೆ ಚಕ್ರಿ ಮಹಾ ಪ್ರಸಾತ್ ಸಿಂಹಾಸನ ಸಭಾಂಗಣ, ವಾಟ್ ರಾಚಬೋಫೀಟ್‌ನಲ್ಲಿ ರಾಯಲ್ ಸ್ಮಶಾನ ಹಾಗೂ ವಾಟ್ ಬೋವೊನಿವೆಟ್ ವಿಹಾರ ರಾಯಲ್ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ಕಾರ್ಯಕ್ರಮ ಖಾಸಗಿಯಾಗಿರುತ್ತದೆ. ಜಪಾನ್
ಜಪಾನ್‌ನಲ್ಲಿ ರಾಜಮನೆತನದವರಿಗೆ ಸ್ಟೇಟ್ ಫುನರಲ್ ಮಾಡಲಾಗುತ್ತದೆ. ಆದರೆ ಸರ್ಕಾರದ ನಿರ್ಧಾರದ ಮೇರೆಗೆ ಕೆಲವು ರಾಜಕಾರಣಿಗಳಿಗೂ ಈ ಗೌರವ ಸಿಗುತ್ತದೆ. ಎರಡನೇ ವಿಶ್ವ ಯುದ್ಧದ ನಂತರ ಮಾಜಿ ಪ್ರಧಾನಿ ಶಿನೊjà ಅಬೆ ಅವರಿಗೆ ಆ ಗೌರವ ಸಿಗುತ್ತಿದೆ. ಶಿಂಜೋ ಅಬೆ ಅವರನ್ನು ಜು.8ರಂದು ಹತ್ಯೆಗೀಡು ಮಾಡಿದ ನಂತರ ನಾಲ್ಕು ದಿನಗಳಲ್ಲೇ ಅವರ ಪಾರ್ಥಿವ ಶರೀರವನ್ನು ಟೋಕ್ಯೋದ ಬೌದ್ಧ ದೇಗುಲದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಇದೀಗ ಮಂಗಳವಾರ ಅವರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಮತ್ತೊಮ್ಮೆ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಜಪಾನ್‌ನ ರಾಜ ಮೃತರಾದಾಗಲೂ ಇದೇ ರೀತಿ ಕಾರ್ಯಕ್ರಮಗಳು ಜರುಗುತ್ತವೆ. ಮೊದಲಿಗೆ ಕುಟುಂಬ ಮತ್ತು ಅತ್ಯಾಪ್ತರಷ್ಟೇ ಸೇರಿಕೊಂಡು ಖಾಸಗಿಯಾಗಿ ಅಂತ್ಯಕ್ರಿಯೆ ನಡೆಸುತ್ತಾರೆ. ನಂತರ ಅವರ ಶವಪೆಟ್ಟಿಗೆಯನ್ನು ಅರಮನೆಯಿಂದ ಸ್ಮಶಾನಕ್ಕೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತದೆ. ಅಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಆಗ ರಾಜಮನೆತನದವರೆಲ್ಲರೂ ಅಂತಿಮ ನಮನವನ್ನೂ ಸಲ್ಲಿಸುತ್ತಾರೆ. ಖಾಸಗಿ ಅಂತ್ಯಕ್ರಿಯೆ ಹಾಗೂ ಸಾರ್ವಜನಿಕ ಅಂತ್ಯಕ್ರಿಯೆ ಮಧ್ಯೆ ಸಾಕಷ್ಟು ದಿನಗಳ ಕಾಲಾವಕಾಶ ಇರುವುದು ವಿಶೇಷ.