Advertisement
ಅವರು ಫೆ. 10ರಂದು ಕಾರ್ಕಳ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರಗಿದ ಬಿಲ್ಲವ ಸಮಾವೇಶ, ವಿದ್ಯಾರ್ಥಿ ವೇತನ ವಿತರಣೆ, ವಾಣಿಜ್ಯ ಸಂಕೀರ್ಣ ಮತ್ತು ನೂತನ ಸಭಾಂಗಣದ ಉದ್ಘಾಟನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
Related Articles
Advertisement
ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಕಾರ್ಕಳ ದಲ್ಲಿ ಬಿಲ್ಲವ ಸಮುದಾಯದ ಸಭಾಂಗಣ, ವಾಣಿಜ್ಯ ಸಂಕೀರ್ಣ ಸುಂದರವಾಗಿ ನಿರ್ಮಾಣಗೊಂಡಿದೆ. ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಬಹುದೊಡ್ಡ ಕಾರ್ಯ ಮಾಡಿದೆ. ಕೇವಲ ರಾಜಕೀಯ ಮಾತ್ರವಲ್ಲದೆ ಧಾರ್ಮಿಕ, ಶೈಕ್ಷಣಿಕ, ಕ್ರೀಡೆ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲೂ ಬಿಲ್ಲವ ಸಮುದಾಯದವರು ಮುಂದೆ ಬರಬೇಕು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವಲ್ಲಿ ಬಿಲ್ಲವ ಸಂಘದಿಂದ ಪೂರಕ ವಾತಾವರಣ ಒದಗಿಸಿಕೊಡಬೇಕಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಯಕ್ಷಗಾನ ಕಲಾವಿದ ಸೀತಾರಾಮ ಕುಲಾಲ್ ಮಾತನಾಡಿದರು. ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ವೇದ ಕುಮಾರ್, ಉದ್ಯಮಿ ಶ್ರೀಧರ ಎಸ್. ಪೂಜಾರಿ, ರಶ್ಮಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಸಾವಿತ್ರಿ ಡಿ.ಆರ್. ರಾಜು, ಮಹಿಳಾ ವಿಭಾಗದ ಅಧ್ಯಕ್ಷೆ ನಾಗಮ್ಮ, ತಾಲೂಕು ಸಮ್ಮೇಳನದ ಉಪಾಧ್ಯಕ್ಷ ಚಂದ್ರಹಾಸ ಸುವರ್ಣ, ಪ್ರದೀಪ್ ಕೋಟ್ಯಾನ್, ಸುಬೀತ್ ಕುಮಾರ್ ಎನ್., ಕಾರ್ಯದರ್ಶಿ ಪ್ರಭಾಕರ ಬಂಗೇರ, ಪ್ರವೀಣ್ ಸುವರ್ಣ, ಯುವವಿಭಾಗದ ಅಧ್ಯಕ್ಷ ಸಂದೇಶ್ ಕೋಟ್ಯಾನ್, ಶ್ರೀಕೃಷ್ಣ ಕ್ಷೇತ್ರದ ಆಡಳಿತ ಮೊಕ್ತೇಸರ ಭಾಸ್ಕರ ಎಸ್. ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕು ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಡಿ. ಆರ್. ರಾಜು ಸ್ವಾಗತಿಸಿ, ಪರಮಾನಂದ ಸಾಲ್ಯಾನ್, ಸುಧಾಕರ್, ನಾಗೇಶ್ ಸುವರ್ಣ ನಿರೂಪಿಸಿದರು.
ಲೋಕಸಭೆಯಲ್ಲಿ ಬಿಲ್ಲವರಿರಬೇಕಲ್ಲವೇ?ಮುಖ್ಯಮಂತ್ರಿಯಾಗಿ ಬಿಲ್ಲವ ಸಮಾಜದ ಬಂಗಾರಪ್ಪ, ಕೇಂದ್ರ ಸಚಿವರಾಗಿ ಬಿ. ಜನಾರ್ದನ ಪೂಜಾರಿ ಅವರು ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಅಲಂಕರಿಸಿ, ಸಮಾಜದ ಅಭ್ಯುದಯಕ್ಕಾಗಿ ದುಡಿದು ಧೀಮಂತ ನಾಯಕ ರೆನಿಸಿಕೊಂಡವರು. ಬಹುದೊಡ್ಡ ಸಮಾಜಗಳಲ್ಲಿ ಬಿಲ್ಲವ ಸಮಾಜವೂ ಒಂದಾಗಿದ್ದು, ಲೋಕಸಭೆಯಲ್ಲಿ ಓರ್ವರಾದರೂ ನಮ್ಮನ್ನು ಪ್ರತಿನಿಧಿಸು ವವರು ಬೇಕಲ್ಲವೇ ಎಂದು ಸೊರಕೆ ಹೇಳಿದರು.