Advertisement

ಸ್ವ-ಸಹಾಯ ಸಂಘ ರಚಿಸಿ ಆರ್ಥಿಕ ಪ್ರಗತಿ ಹೊಂದಿ

05:03 PM Jun 20, 2018 | Team Udayavani |

ನಾರಾಯಣಪುರ: ಮಹಿಳೆಯರ ಸಬಲಿಕರಣಕ್ಕೆ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ರಚಿಸಿ ಸ್ವಯಂ ಉದ್ಯೋಗಕ್ಕೆ ಪೂರಕವಾದ ಯೋಜನೆ ರೂಪಿಸಿ ತರಬೇತಿನೀಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯ ಶ್ಲಾಘನೀಯವಾಗಿದೆ ಎಂದು ಪಿಎಸ್‌ಐ ಕೆ.ಎಚ್‌. ಶಿರೋಮಣಿ ಹೇಳಿದರು.

Advertisement

ಪಟ್ಟಣದ ಹನುಮದೇವರ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ
ಮಂಗಳವಾರ ನಡೆದ ನೂತನ ಮಹಾಲಕ್ಷ್ಮೀ ಮಹಿಳಾ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ ಹಾಗೂ ದಾಖಲಾತಿ ಹಸ್ತಾಂತರ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರದಂತೆ ಎನ್ನುವಂತೆ ಪ್ರತಿ ಮಹಿಳೆ ಶಿಕ್ಷಣವಂತರಾಗುವುದು
ಅವಶ್ಯವಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಶಿಕ್ಷಣ ಪಡೆದು ಸ್ವ-ಸಹಾಯ ಗುಂಪುಗಳಲ್ಲಿ ಭಾಗಿಯಾಗಿ ಸರ್ಕಾರ
ವಿವಿಧ ಯೋಜನೆಗಳಡಿಯಲ್ಲಿ ದೊರೆಯುವ ಆರ್ಥಿಕ ನೆರವಿನ ಸಹಾಯದೊಂದಿಗೆ ಸ್ವಯಂ ಉದ್ಯೋಗ ಹೊಂದಿ
ಆರ್ಥಿಕವಾಗಿ ಸದೃಢರಾಗಿ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುರಪುರ ಸಮನ್ವಯಾಧಿಕಾರಿ ವಿಶಾಲಾ ಪ್ರಾಸ್ಥಾವಿಕವಾಗಿ
ಮಾತನಾಡಿ, ಇಲ್ಲಿನ 75 ಸ್ವ-ಸಹಾಯ ಗುಂಪುಗಳಲ್ಲಿ ಐದು ಗುಂಪುಗಳನ್ನು ಆಯ್ಕೆ ಮಾಡಿ, ಆರೋಗ್ಯ, ಶಿಕ್ಷಣ, ಸ್ವಯಂ
ಉದ್ಯೋಗ, ಪ್ರತಿಭೆ, ಸರ್ಕಾರದ ಸೌಲಭ್ಯ ಸೇರಿದಂತೆ ಇತರೆ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಸಮಗ್ರ
ಮಾಹಿತಿ ಒದಗಿಸಿ ತರಬೇತಿಗೊಳಿಸಲಾಗುತ್ತದೆ. ಈ ಎಲ್ಲಾ ಯೋಜನೆಗಳ ಸದುಪಯೋಗವನ್ನು ಗುಂಪಿನ ಸದಸ್ಯೆಯರು ಪಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ರೇಣುಕಾ ವಹಿಸಿದ್ದರು. ಎಎಸೈ ಕೃಷ್ಣಮೂರ್ತಿ, ನಾಗರಾಜ
ಜೂಗುರ ವೇದಿಕೆ ಮೇಲಿದ್ದರು. ಭೀಮಾಬಾಯಿ ಸಂಗಡಿಗರು ಪ್ರಾರ್ಥಿಸಿದರು. ಸೇವಾ ಪ್ರತಿನಿಧಿ  ಸವಿತಾ
ಸ್ವಾಗತಿಸಿದರು. ಕೊಡೇಕಲ್‌ ವಲಯದ ಮೇಲ್ವಿಚಾರಕ ಶ್ರೀನಿವಾಸ ನಿರೂಪಿಸಿ, ವಂದಿಸಿದರು. ಮಹಿಳಾ ಸ್ವ-ಸಹಾಯ
ಗುಂಪುಗಳ ಸದಸ್ಯೆಯರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next