Advertisement

ಲಸಿಕೆ ಸಾಗಾಟ “ಸಮರ’ಕ್ಕೆ ವಾಯುಪಡೆ ವಿಮಾನ: ಕೇಂದ್ರ ಸರಕಾರದ ಜತೆ ಕೈಜೋಡಿಸಿದ ಐಎಎಫ್

11:17 PM Dec 06, 2020 | sudhir |

ಹೊಸದಿಲ್ಲಿ: ಕೊರೊನಾ ಸೋಂಕಿನ ವಿರುದ್ಧ ಸಮರ ಸಾರಿರುವ ಕೇಂದ್ರ ಸರಕಾರವು ದೇಶಾದ್ಯಂತ ಲಸಿಕೆ ವಿತರಣೆಗೆ ಅಗತ್ಯ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ನಡೆಸುತ್ತಿದೆ. ಲಸಿಕೆ ವಿತರಣೆಯಲ್ಲಿ ಕೇಂದ್ರದ ಜತೆ ಕೈಜೋಡಿಸಲು ಭಾರತೀಯ ವಾಯುಪಡೆ (ಐಎಎಫ್) ಸಜ್ಜಾಗಿದೆ.

Advertisement

ಈಗಾಗಲೇ ಪ್ರವಾಹ ಮತ್ತಿತರ ನೈಸರ್ಗಿಕ ವಿಕೋಪಗಳು, ಗಡಿ ಬಿಕ್ಕಟ್ಟು ವೇಳೆ ಭಾರೀ ಪ್ರಮಾಣದ ವಸ್ತುಗಳ ಸಾಗಾಟದಲ್ಲಿ ಪರಿಣತಿ ಹೊಂದಿರುವ ವಾಯುಪಡೆಯು ಲಸಿಕೆಯನ್ನು ದೇಶಾದ್ಯಂತ ಸಾಗಿಸಲು ಮುಂದೆ ಬಂದಿರುವುದು ಆಶಾಕಿರಣ ಮೂಡಿಸಿದೆ. ಏಕೆಂದರೆ ಲಸಿಕೆ ಸಿದ್ಧವಾದ ಬಳಿಕ ದೇಶದ 28 ಸಾವಿರ ಕೋಲ್ಡ್‌ ಸ್ಟೋರೇಜ್‌ಗಳಿಗೆ ಅದರ ಸಾಗಣೆ ಸುಲಭವಾದ ಮಾತೇನಲ್ಲ.

ಮೂಲಗಳ ಪ್ರಕಾರ, ವಾಯುಪಡೆಯ ಭಾರೀ ಕಾರ್ಗೋ ವಿಮಾನಗಳೇ ಲಸಿಕೆ ಸಾಗಾಟಕ್ಕೆ ಇಳಿಯಲಿವೆ. ಸುಮಾರು 100 ವಿಮಾನಗಳು ಈ ಕಾರ್ಯದಲ್ಲಿ ಕೈಜೋಡಿಸಲಿವೆ. ಈ ಬಗ್ಗೆ ಆಂಗ್ಲ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಸದ್ಯ ಕೇಂದ್ರ ಸರಕಾರವಾಗಲಿ ಅಥವಾ ಭಾರತೀಯ ವಾಯುಪಡೆಯಾಗಲಿ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ಸಿ-17 ಗ್ಲೋಬ್‌ ಮಾಸ್ಟರ್‌ ಎಂಬ ಆನೆ ಗಾತ್ರದ 11 ಯುದ್ಧ ವಿಮಾನಗಳು, ಸಿ-130 ಹರ್ಕ್ಯುಲಸ್‌ ವಿಮಾನಗಳನ್ನು ಪ್ರಮುಖವಾಗಿ ಬಳಕೆ ಮಾಡಲಾಗುತ್ತದೆ.

ವಿಮಾನ ನಿಲ್ದಾಣಗಳೂ ಸಿದ್ಧ
ದಿಲ್ಲಿ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲೂ ಲಸಿಕೆ ಸಾಗಾಟಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ. ಈ ಎರಡೂ ವಿಮಾನ ನಿಲ್ದಾಣಗಳಲ್ಲಿ ಕೆಲವು ಟರ್ಮಿನಲ್‌ಗಳನ್ನು ಲಸಿಕೆ ಸಾಗಾಟಕ್ಕೆ ಮೀಸಲು ಇರಿಸಲು ನಿರ್ಧರಿಸಲಾಗಿದೆ.

Advertisement

ಐಎಎಫ್ ಹಿಂದಿನ ಸಾಧನೆಗಳು
ಚೀನ ಮತ್ತು ಭಾರತದ ನಡುವೆ ಲಡಾಖ್‌ ಗಡಿಯಲ್ಲಿ ಸಂಘರ್ಷ ಆರಂಭವಾದ ಮೇಲೆ ಐಎಎಫ್ ಯುದ್ಧ ವಿಮಾನಗಳು ಭಾರೀ ಪ್ರಮಾಣದ ಇಂಧನ, ಆಹಾರ, ಅಗತ್ಯ ವಸ್ತುಗಳು, ಉಪಕರಣಗಳನ್ನು ಗಡಿಗೆ ಹೊತ್ತೂಯ್ದಿವೆ. ಹಾಗೆಯೇ ದೇಶದೊಳಗೆ ಮತ್ತು ನೆರೆ ದೇಶಗಳಲ್ಲಿ ಪ್ರಾಕೃತಿಕ ವಿಕೋಪಗಳಾದಾಗಲೂ ಅವು ವೈದ್ಯಕೀಯ ವಸ್ತುಗಳು ಮತ್ತು ಸಲಕರಣೆಗಳನ್ನು ಹೊತ್ತೂಯ್ದಿವೆ.

ಕೊರೊನಾ ಆರಂಭವಾದ ಮೇಲೂ ಮಾಲ್ಡೀವ್ಸ್‌ನಂಥ ದೇಶಗಳಿಗೆ ವೈದ್ಯಕೀಯ ವಸ್ತುಗಳನ್ನು ತೆಗೆದುಕೊಂಡು ಹೋಗಲಾಗಿದೆ. ನೋಟು ರದ್ದತಿ ವೇಳೆಯಲ್ಲಿ ದೇಶಾದ್ಯಂತ ಕರೆನ್ಸಿ ನೋಟುಗಳನ್ನು ರವಾನಿಸಿದ್ದು ಇವೇ ಐಎಎಫ್ ಯುದ್ಧ ವಿಮಾನಗಳು.

ಯಾವ್ಯಾವ ವಿಮಾನ?
1. 11 ಸಿ-17 ಗ್ಲೋಬ್‌ ಮಾಸ್ಟರ್‌ ಹೆವ್ವಿ-ಲಿಫ್ಟ್ ವಿಮಾನ – ಪ್ರತೀ ವಿಮಾನವು ಒಮ್ಮೆಗೆ 75 ಟನ್‌ನಷ್ಟು ಸರಕು ಸಾಗಣೆ ಮಾಡಬಲ್ಲದು.
2. ಸಿ-130 ಹರ್ಕ್ಯುಲ‌ ವಿಮಾನ – ಒಮ್ಮೆಗೆ 19 ಟನ್‌ ನಷ್ಟು ಸರಕು ಸಾಗಣೆ ಮಾಡುವ ಸಮರ್ಥ.
3. ಐ 1-76 ಮತ್ತು ಎಎನ್‌-32 ಎಸ್‌
4. ಡಾರ್ನಿಯರ್‌ ನಂಥ ಪುಟ್ಟ ವಿಮಾನಗಳು
5. ಹೆಲಿಕಾಪ್ಟರ್ ಗಳು – ರಿಮೋಟ್‌ ಸ್ಥಳಗಳಿಗೆ ತಲುಪಲು ಬಳಕೆ

Advertisement

Udayavani is now on Telegram. Click here to join our channel and stay updated with the latest news.

Next