Advertisement
ಮೈಸೂರು: ರಾಜ್ಯಾದ್ಯಂತ ನಾಳೆಯಿಂದ ಶಾಲಾ-ಕಾಲೇಜು ಆರಂಭವಾಗಲಿದ್ದು, ಜಿಲ್ಲೆಯಲ್ಲೂ ಯಾವುದೇ ಸಮಸ್ಯೆಯಾಗದಂತೆ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ನಡೆಸಿದೆ. ಜಿಲ್ಲೆಯಲ್ಲಿ ಒಟ್ಟು766 ಪ್ರೌಢ ಶಾಲೆಗಳಿದ್ದು,232 ಸರ್ಕಾರಿ,45 ಸಮಾಜ ಕಲ್ಯಾಣ ಇಲಾಖೆಯ ಶಾಲೆಗಳು, 134 ಅನುದಾನಿತ ಹಾಗೂ 349 ಖಾಸಗಿ ಶಾಲೆಗಳು ಹಾಗೂ 6 ಕೇಂದ್ರ ವಿದ್ಯಾಲಯಗಳಿವೆ. ಎಲ್ಲಾ ಶಾಲೆಗಳಲ್ಲೂ ಸ್ವತ್ಛತೆ ಹಾಗೂ ಸ್ಯಾನಿಟೈಸ್ಮಾಡಲಾಗಿದೆ. ಹಾಗಯೇ ಜಿಲ್ಲೆಯಲ್ಲಿ 9 ಮತ್ತು 10 ತರಗತಿ ಯಲ್ಲಿ85,125 ವಿದ್ಯಾರ್ಥಿಗಳಿದ್ದಾರೆ.
Related Articles
Advertisement
9,088 ಶಿಕ್ಷಕರು: ಜಿಲ್ಲೆಯಲ್ಲಿ ಒಟ್ಟು766 ಪ್ರೌಢಶಾಲೆಗಳಿದ್ದು, ಇವುಗಳಲ್ಲಿ ಸರ್ಕಾರಿ ಶಾಲೆಯ 4,365 ಶಿಕ್ಷಕರ ಪೈಕಿ 837 ಮಂದಿ 2ನೇ ಡೋಸ್ ಲಸಿಕೆ ಪಡೆದುಕೊಳ್ಳಬೇಕಿದೆ. ಹಾಗೆಯೇ ಅನುದಾನಿತ ಶಾಲೆಯ1,019 ಶಿಕ್ಷಕರಲ್ಲಿ ಎಲ್ಲರೂ ಮೊದಲ ಡೋಸ್ ಲಸಿಕೆ ಪಡೆದಿದ್ದು, 345 ಮಂದಿ 2ನೇ ಡೋಸ್ ಪಡೆಯಬೇಕಿದೆ. ಅನುದಾನ ರಹಿತ ಪ್ರೌಢಶಾಲೆಗಳಲ್ಲಿ 3,704 ಶಿಕ್ಷಕರಿದ್ದು, ಇವರಲ್ಲಿ ಎಲ್ಲರೂ ಮೊದಲ ಡೋಸ್ ಪಡೆದಿದ್ದರೆ, 1,235 ಮಂದಿ 2ನೇ ಡೋಸ್‌ಲಸಿಕೆ ಪಡೆಯಬೇಕಿದೆ. ಒಟ್ಟಾರೆ 9,088 ಪ್ರೌಢಶಾಲಾ ಶಿಕ್ಷಕರಲ್ಲಿ 2,412 ಮಂದಿ ಶಿಕ್ಷಕರು2ನೇ ಡೊಸ್ ಲಸಿಕೆ ಪಡೆದುಕೊಳ್ಳಬೇಕಿದೆ. ಕಳೆದ ವರ್ಷದ ಬಸ್ ಪಾಸ್: ಜಿಲ್ಲೆಯಲ್ಲಿ ನಾಳೆಯಿಂದ ಶಾಲೆ ಮತ್ತುಕಾಲೇಜು ಆರಂಭ ವಾಗುತ್ತಿರುವು ದರಿಂದ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ಸಮಸ್ಯೆ ಎದುರಾಗಿರುವುದನ್ನು ಗಮನಿಸಿ, ಕಳೆದ ಸಾಲಿನಲ್ಲಿ ವಿದ್ಯಾರ್ಥಿಗಳು ಪಡೆದುಕೊಂಡಿರುವ ಬಸ್ ಪಾಸ್‌ಗಳನ್ನೇ ಪರಿಗಣಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಮಕ್ಕಳಿಗೆ ಬಸ್‌ಪಾಸ್ ಸಮಸ್ಯೆಯಾಗ ದಂತೆ ಎಚ್ಚರವ ಹಿಸಲಾಗಿದೆ.
ಶಾಲಾ ಕೊಠಡಿಗಳಿಗೆ ಸ್ಯಾನಿಟೈಸ್: ಶಾಲೆ-ಕಾಲೇಜುಗಳ ಪುನಾರಂಭ ಹಿನ್ನೆಲೆ ಶಿಕ್ಷಣ ಇಲಾಖೆ ಸ್ಥಳೀಯ ಗ್ರಾಮ ಪಂಚಾಯ್ತಿ, ಪಟ್ಟಣಪಂಚಾಯ್ತಿ ಹಾಗೂ ನಗರ ಸಭೆಯ ಸಹಕಾರ ದೊಂದಿಗೆ ಶಾಲಾ ಕೊಠ ಡಿಗಳನ್ನು ಸ್ಯಾನಿಟೈಸ್ ಮಾಡುವ ಕಾರ್ಯ ನಡೆಸಲಾಗುತ್ತಿದೆ. ಜೊತೆಗೆ ವಿದ್ಯಾರ್ಥಿ ಗಳ ಪೋಷಕರ ಸಭೆ ಕರೆದು ಧೈರ್ಯ ತುಂಬುವ ಕೆಲಸವನ್ನು ಮುಖ್ಯ ಶಿಕ್ಷಕರಿಂದ ಮಾಡಿಸಲಾಗಿದೆ.
ಪಠ್ಯ ಪುಸ್ತಕಗಳಿಗೆ ಕೊರತೆಯಿಲ್ಲಪ್ರಸಕ್ತ ಶೈಕ್ಷಣಿಕವರ್ಷದ ಶೇ.30ರಷ್ಟು ಪಠ್ಯಪುಸ್ತಕಗಳು ಇಲಾಖೆಯನ್ನು ತಲುಪಿದೆ. ಶೇ.50ರಷ್ಟು ಪುಸ್ತಕಬಂದ ಮೇಲೆ ಹಂಚಿಕೆ ಮಾಡಲಾಗು ವುದು. ಅಲ್ಲಿಯವರೆಗೆ ಮಕ್ಕಳಿಗೆ ಪುಸ್ತಕಗಳ ಕೊರತೆ ಉಂಟಾಗಬಾರದು ಎಂಬ ಉದ್ದೇಶದಿಂದ ಕಳೆದ ವರ್ಷ ಪಾಸಾದ ಹಳೆಯ ವಿದ್ಯಾರ್ಥಿ ಗಳಿಂದ 1.25ಲಕ್ಷ ಪುಸ್ತಕಗಳನ್ನು ಸಂಗ್ರಹಿಸಿದ್ದು, ವಿದ್ಯಾರ್ಥಿಗಳಿಗೆ ವಿತರಿಸಲಾಗುತಿದೆ. ವಿದ್ಯಾರ್ಥಿಗಳಿಗೆ ಬಿಸಿಯೂಟ ಇಲ್ಲ
ಕೋವಿಡ್ ಕಾರಣದಿಂದ ಶಾಲೆಗಳಲ್ಲಿ ಬಿಸಿಯೂಟ ನಿಲ್ಲಿಸಲಾಗಿದೆ. ಮಕ್ಕಳು ನೀರಿನ ಬಾಟಲ್ ತೆಗೆದುಕೊಂಡು ಬಂದರೆ ಒಳ್ಳೆಯದು. ಇಲ್ಲದಿದ್ದರೆ ಶಾಲೆಯಲ್ಲೇ ಬಿಸಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಪೋಷಕರ ಒಪ್ಪಿಗೆ ಇದ್ದರೆ ಮಾತ್ರ ಮಕ್ಕಳು ಶಾಲೆಗೆಬರಬಹುದು. ಇಲ್ಲದಿದ್ದರೆ ಆನ್‌ಲೈನ್ ಮೂಲಕ ಪಾಠ-ಪ್ರವಚನ ಕೇಳಬಹುದು. ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲೆಗೆ ಹಾಜರಾಗಬೇಕೆಂದು ಯಾವುದೇ ನಿರ್ದೇಶನ ನೀಡಿಲ್ಲ. ಶಾಲೆ ಗಳ ಪ್ರಸ್ತುತ ಸ್ಥಿತಿ ಪರಿಶೀಲನೆಗಾಗಿ 9 ತಾಲೂಕಿಗೆ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಲಸಿಕೆ ಅಭಿಯಾನ
ಶಾಲೆ ಮತ್ತು ಕಾಲೇಜು ಆರಂಭಿಸುವ ಸಲುವಾಗಿ ಜಿಲ್ಲೆಯ ಎಲ್ಲಾ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಲಸಿಕೆ ನೀಡುವ ಸಲುವಾಗಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಜಿಲ್ಲಾದ್ಯಂತ ಲಸಿಕೆ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಸೋಮವಾರದಿಂದ ಶಾಲೆ ಆರಂಭವಾಗುತ್ತಿದ್ದು,ಕಡ್ಡಾಯವಾಗಿ ಹಾಜರಾಗಬೇಕು ಎಂಬ ನಿಯಮ ಇಲ್ಲ. ಆಸಕ್ತಿ ಇರುವ ಮಕ್ಕಳು ಶಾಲೆಗೆ ಹಾಜರಾಗಬಹುದು. ಒಂದು ಕೊಠಡಿಯಲ್ಲಿ 15ರಿಂದ 20 ಮಕ್ಕಳನ್ನು ಮಾತ್ರ ಕೂರಿಸಲಾಗುವುದು. ಬಿಸಿ ಊಟದ ವ್ಯವಸ್ಥೆ ಇರುವುದಿಲ್ಲ. ಮಕ್ಕಳೇ ನೀರು, ಮಾಸ್ಕ ತರಬೇಕು.
● ರಾಮಚಂದ್ರ ರಾಜೇ ಅರಸ್, ಉಪ ನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ ಕೇರಳ ಗಡಿ ತಾಲೂಕಿನಲ್ಲಿ ಶೇ.0.37 ಪಾಸಿಟಿವಿಟಿ
ಎಚ್.ಡಿ.ಕೋಟೆ: ಕೇರಳ ಗಡಿಗೆ ಹೊಂದಿಕೊಂಡಿರುವ ತಾಲೂಕಿನಲ್ಲಿ ಪ್ರತಿದಿನ 1ರಿಂದ 3 ಕೋವಿಡ್ ಸಂಖ್ಯೆ ದಾಖಲಾಗುತ್ತಿದ್ದು,ಕೆಲ ದಿನ ಶೂನ್ಯಕ್ಕೂ ಇಳಿದಿರುತ್ತದೆ. ತಾಲೂಕಿನಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಶೇ.0.37ರಷ್ಟು ಇದೆ. ತಾಲೂಕಿನ ಎಲ್ಲಾ ಶಾಲೆಗಳಿಂದ 6,05 ಶಿಕ್ಷಕರಿದ್ದು, ಎಲ್ಲರೂ ಲಸಿಕೆ ಹಾಕಿಸಿ ಕೊಂಡಿದ್ದಾರೆ. ಈ ಪೈಕಿ ಬಹುತೇಕ ಮಂದಿ 2ನೇ ಡೋಸ್‌ಕೂಡ ಪಡೆದಿದ್ದಾರೆ. ತಾಲೂಕಿನಲ್ಲಿ 9ನೇ ತರಗತಿ 1,080 ಬಾಲಕರು ಹಾಗೂ 1,115 ಬಾಲಕಿಯರು ಸೇರಿ ಒಟ್ಟು2,195 ವಿದ್ಯಾರ್ಥಿಗಳಿದ್ದಾರೆ.10ನೇ ತರಗತಿಯಲ್ಲಿ1,059 ಬಾಲಕರು,
1,130 ಬಾಲಕಿಯರು ಸೇರಿ 4,484 ವಿದ್ಯಾರ್ಥಿಗಳಿದ್ದಾರೆ ಎಂದುಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ ಮಾಹಿತಿ ನೀಡಿದ್ದಾರೆ. ತಾಲೂಕಿನಲ್ಲಿ ಇದುವರೆಗೆ 1.27 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. 45 ವರ್ಷ ಮೇಲ್ಪಟ್ಟವರ ಪೈಕಿ ಶೇ.78 ಹಾಗೂ 18 ವರ್ಷ ಮೇಲ್ವಟ್ಟವರ ಪೈಕಿ ಶೇ.32ರಷ್ಟು ಜನರಿಗೆ ಲಸಿಕೆ ಹಾಕಿಸಲಾಗಿದೆ. ಕೋವಿಡ್ ಪಾಸಿಟಿವಿಟಿಶೇ.0.4
ಕೆ.ಆರ್.ನಗರ: ತಾಲೂಕಿನಲ್ಲಿ ಪ್ರಸ್ತುತ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇತ್ತೀಚಿನ ದಿನಗಳಲ್ಲಿ ನಿತ್ಯ ಸರಾಸರಿ 4 ರಿಂದ5 ಪಾಸಿಟಿವ್ ಪ್ರಕರಣಗಳುಕಂಡು ಬರುತ್ತಿವೆ. ಪಾಸಿಟಿವಿಟಿ ದರ ಶೇ.0.4ಕ್ಕೆ ಇಳಿದಿದೆ. ತಾಲೂಕಿನಲ್ಲಿ ಒಟ್ಟು2,74,955 ಜನಸಂಖ್ಯೆಯಿದ್ದು, ಈ ಪೈಕಿ65,329 ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.32,288 ಜನರಿಗೆ2ನೇ ಡೋಸ್ ನೀಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ|ಕೆ.ಆರ್. ಮಹೇಂದ್ರಪ್ಪ ತಿಳಿಸಿದ್ದಾರೆ. ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 2021-22ನೇ ಸಾಲಿನಲ್ಲಿ ಒಂದನೇ ತರಗತಿಯಿಂದ10ನೇ ತರಗತಿಯವರೆಗೆ ಇಲ್ಲಿಯವರೆಗೆ ಒಟ್ಟು 28,946 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.9ನೇ ತರಗತಿಯಲ್ಲಿ 3,067 ಹಾಗೂ 10ನೇ ತರಗತಿಯಲ್ಲಿ3.010 ಸೇರಿದಂತೆ ಒಟ್ಟು6,077 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದನ್ನೂ ಓದಿ:ಬಿಲ್ ಗೇಟ್ಸ್ ಗೆ ಪಾಕಿಸ್ತಾನದ ನಖ್ವಿ 100 ಮಿಲಿಯನ್ ಪಂಗನಾಮ ಹಾಕಿದ್ದು ಹೇಗೆ..? ತಾಲೂಕಿನಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ671 ಮಂದಿ ಶಿಕ್ಷಕರಿದ್ದು, ಅದರಲ್ಲಿ641 ಶಿಕ್ಷಕರುಕೋವಿಡ್ ಲಸಿಕೆ ಪಡೆದುಕೊಂಡಿದ್ದು, ಇಳಿದ 30 ಮಂದಿ ಪಡೆದಿರುವುದಿಲ್ಲ. ಪ್ರೌಢಶಾಲೆಗಳಲ್ಲಿ347 ಶಿಕ್ಷಕರಿದ್ದು,327 ಶಿಕ್ಷಕರು ಲಸಿಕೆ ಹಾಕಿಸಿಕೊಂಡಿದ್ದು,20 ಮಂದಿ ಲಸಿಕೆ ಪಡೆದಿಲ್ಲ.
ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಒಟ್ಟು1018 ಶಿಕ್ಷಕರಲ್ಲಿ968 ಮಂದಿ ಲಸಿಕೆ ಹಾಕಿಸಿಕೊಂಡಿದ್ದು,50 ಶಿಕ್ಷಕರು ಲಸಿಕೆ ಪಡೆದಿರುವುದಿಲ್ಲ. ತಾಲೂಕಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಅಡುಗೆ ಸಿಬ್ಬಂದಿ ಲಸಿಕೆ ಪಡೆದಿದ್ದಾರೆ. ತಾಲೂಕಿನಲ್ಲಿ ನಿಯಂತ್ರಣಕ್ಕೆ ಬಾರದ ಕೋವಿಡ್
ಹುಣಸೂರು: ತಾಲೂಕಿನಲ್ಲಿ ಶಾಲೆ ಕಾಲೇಜು ಆರಂಭಕ್ಕೆ ಒಂದು ದಿನ ಮಾತ್ರ ಬಾಕಿ ಇದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಒಂದೆಡೆ ಉತ್ಸುಕತೆಯಿಂದಿದ್ದರೆ ಮತ್ತೂಂದೆಡೆ ಆತಂಕದಿಂದಲೇ ಶಾಲೆಗಳಿಗೆ ಮಕ್ಕಳನ್ನುಕಳುಹಿಸಬೇಕಾಗಿದೆ. ಜಿಲ್ಲೆಯಲ್ಲಿ ಹುಣಸೂರು ತಾಲೂಕಿನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಶನಿವಾರ (ನಿನ್ನೆ ) ಒಂದೇ ದಿನ23 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ತಾಲೂಕಿನ ಗುರುಪುರ-16, ಹುಣಸೂರು ನಗರ-2, ಮಂಚಬಾಯನಹಳ್ಳಿ-3, ಅಗ್ರಹಾರ-1 ಸೊಂಕುಕಂಡು ಬಂದಿದೆ. ತಾಲೂಕಿನಲ್ಲಿ ಇದುವರೆಗೆ1.50 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ. ಈ ಪೈಕಿ 45 ವರ್ಷ ಮೇಲ್ಪಟ್ಟವರಲ್ಲಿ 27,136 ಮಂದಿ ಮೊದಲ ಡೋಸ್ ಹಾಗೂ 17,563 ಎರಡನೇ ಡೋಸ್ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟವರಲ್ಲಿ
ಮೊದಲ ಡೋಸ್26,161 ಮಂದಿ ಮತ್ತು ಎರಡನೇ ಡೋಸ್17,521 ಮಂದಿ ವ್ಯಾಕ್ಸಿನ್‌ಗೊಳಗಾಗಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ17,150 ಮಂದಿಗೆ 1ನೇ ಡೋಸ್ ಹಾಗೂ 2,158 ಮಂದಿ ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ತಾಲೂಕಿನಲ್ಲಿ ಪ್ರತಿದಿನ 6-8 ಪ್ರಕರಣಗಳು ದಾಖಲು
ಪಿರಿಯಾಪಟ್ಟಣ: ತಾಲೂಕಿನ ಗಡಿ ಕೊಡಗು ಜಿಲ್ಲೆಗೆ ಹೊಂದಿಕೊಂಡಿದ್ದು, ಕೇರಳಿಗರು ಬಂದು ಹೋಗುವುದು ಸಾಮಾನ್ಯವಾಗಿದೆ. ಇತ್ತೀಚೆಗೆ
ಪ್ರತಿದಿನ 6-8ಕೋವಿಡ್ ಪ್ರಕರಣಗಳು ಕಂಡು ಬರುತ್ತಿವೆ. ತಾಲೂಕಿನಲ್ಲಿ ಶನಿವಾರ (ನಿನ್ನೆ)74 ಮಂದಿ ಕೋವಿಡ್ ಟೆಸ್ಟ್‌ಗೊಳಗಾಗಿದ್ದು, ಈ ಪೈಕಿ6 ಜನರಿಗೆ ಪಾಸಿಟಿವ್ ವರದಿ ಬಂದಿದೆ. ಒಟ್ಟಾರೆ81 ಸಕ್ರಿಯ ಪ್ರಕರಣಗಳು ಮಾತ್ರ ಇವೆ. ತಾಲೂಕಿನಾದ್ಯಂತ1,16,955 ಜನರು ಲಸಿಕೆ ಪಡೆದಿದ್ದು, ಇದರಲ್ಲಿ 85,384 ಮಂದಿ ಮೊದಲ ಡೋಸ್ ಹಾಗೂ 31571 ಮಂದಿ 2ನೇ
ಡೋಸ್ ಹಾಕಿಸಿಕೊಂಡಿದ್ದಾರೆ. ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ 226 ಶಿಕ್ಷಕರು ಮತ್ತು ಖಾಸಗಿ ಶಾಲೆಗಳಲ್ಲಿ 400 ಶಿಕ್ಷಕರಿದ್ದು ಎಲ್ಲಾ ಶಿಕ್ಷಕರು ಕೂಡ ಲಸಿಕೆ ಹಾಕಿಸಿಕೊಂಡಿದ್ದಾರೆ.ಶಾಲಾ ಆವರಣ,ಕೊಠಡಿಗಳು, ಪೀಠೊಪರಣಗಳಿಗೆ ಸ್ಯಾನಿಟೈಸರ್ ಮಾಡಲಾಗಿದೆ. ವಿದ್ಯಾರ್ಥಿ ಗಳು ಮನೆಯಿಂದಲೇ ಊಟ ಹಾಗೂ ಬಿಸಿ ನೀರು ಹಾಗೂ ಮಾಸ್ಕ್ ತರಬೇಕು. ಹಾಗೇ ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳುವಂತೆ ಮಾಹಿತಿ ನೀಡಲಾಗಿದೆ. ಪ್ರತಿ ತರಗತಿಗಳಲ್ಲಿ20 ವಿದ್ಯಾರ್ಥಿಗಳಿಗೆ ಮಾತ್ರ ಅನುಮತಿ ಇದೆ. ಹೀಗಾಗಿ ಎಲ್ಲ ಮಕ್ಕಳು ಶಾಲೆಗೆ ಬರಲೇಬೇಕು ಎಂಬ ಆದೇಶವಿಲ್ಲ. ಪೋಷಕರ ಒಪ್ಪಿಗೆ ಮೇರೆಗೆ ಶಾಲೆಗೆ ಬರಲು ಅವಕಾಶ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಮಾಹಿತಿ ನೀಡಿದ್ದಾರೆ. ನಿತ್ಯ 0-1 ಪ್ರಕರಣದಾಖಲು
ತಿ.ನರಸೀಪುರ: ತಾಲೂಕಿನಲ್ಲಿ ಕೋವಿಡ್ ಪ್ರಮಾಣ ಸಂಪೂರ್ಣ ಇಳಿಕೆ ಕಂಡಿದೆ. ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಒಂದು ಎರಡು ಪ್ರಕರಣ ಮಾತ್ರಕಂಡು ಬರುತ್ತಿದೆ.ಕೆಲ ದಿನ ಶೂನ್ಯಕ್ಕೂ ಇಳಿದಿದೆ. ಸದ್ಯದ ಮಟ್ಟಿಗೆ ಇದು ಆಶಾದಾಯ ಸಂಗತಿಯಾಗಿದೆ. ಶಾಲಾ ಕಾಲೇಜಿನ ಬಹುತೇಕ ಶಿಕ್ಷಕರು ಕೋವಿಡ್ ಲಸಿಕೆ ಪಡೆದಿದ್ದಾರೆ. ಈ ಪೈಕಿ ಶೇ.50ರಷ್ಟು ಹೆಚ್ಚು ಮಂದಿ ಎರಡೂ ಡೋಸ್‌ಗಳನ್ನು ಹಾಕಿಸಿಕೊಂಡಿದ್ದಾರೆ. ತಾಲೂಕಿನಲ್ಲಿ 9ನೇ ತರಗತಿಯಿಂದ ದ್ವಿತೀಯ ಪಿಯುಸಿಯವರೆಗೆ ಸುಮಾರು 7 ಸಾವಿರ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ದಾಖಲಾಗಿದ್ದಾರೆ. ತಾಲೂಕಿನಲ್ಲಿ 65 ಪ್ರೌಢಶಾಲೆಗಳಿದ್ದು, ಎಲ್ಲಾ ಶಾಲೆಗಳಿಗೆ ಆಯಾ ವ್ಯಾಪ್ತಿಯ ಪುರಸಭೆ ಹಾಗೂ ಗ್ರಾಮ ಪಂಚಾಯ್ತಿ ವತಿಯಿಂದ ಸ್ಯಾನಿಟೈಸ್‌ಮಾಡಿಸಲಾಗಿದೆ. ಇತ್ತೀಚೆಗೆ ಮುಖ್ಯ ಶಿಕ್ಷಕರ ಸಭೆಕರೆದು ಮಾಹಿತಿ ನೀಡಿ ಸರ್ಕಾರಿ ಮಾರ್ಗಸೂಚಿ ಪಾಲನೆಗೆ ಸೂಚನೆ ನೀಡಿದ್ದೇವೆ. ಬಹುತೇಕ ಶಿಕ್ಷಕರು ಲಸಿಕೆ ಪಡೆದಿದ್ದು,ಕೆಲವರಿಗೆ ಮಾತ್ರ 2ನೇ ಡೋಸ್ ಸಿಗಬೇಕಿದೆ. ಎಲ್ಲಾ ಶಿಕ್ಷಕರಿಗೆ ಲಸಿಕೆ ಹಾಕಿಸಲು ಅಗತ್ಯ ಕ್ರಮವಹಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ ತಿಳಿಸಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ| ರವಿಕುಮಾರ್ ಮಾತನಾಡಿ, ತಾಲೂಕಿನಲ್ಲಿ ಕೋವಿಡ್ ಸಂಪೂರ್ಣ ನಿಯಂತ್ರಣದಲ್ಲಿ ಇದೆ. ವಾರದಲ್ಲಿ 2ರಿಂದ5 ಪ್ರಕರಣಗಳು ಮಾತ್ರ ಬರುತ್ತಿವೆ.45 ವರ್ಷ ಮೇಲ್ಪಟ್ಟವರಲ್ಲಿ ಶೇ.80 ರಷ್ಟು ಮಂದಿ ಎರಡು ಡೋಸ್ ಪಡೆದಿದ್ದಾರೆ.60 ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದಾರೆ.18 ರಿಂದ45 ರೊಳಗಿರುವವರಿಗೆ ಶೇ.25 ರಷ್ಟು ಲಸಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. -ಸತೀಶ್ ದೇಪುರ