Advertisement

ಶೇ.1ಕ್ಕಿಂತ ಕಡಿಮೆ ಕೋವಿಡ್ ಪಾಸಿಟಿವಿಟಿ

02:13 PM Nov 12, 2020 | Suhan S |

ಬೆಂಗಳೂರು: ವಿಧಾನಸಭೆಯ ಉಪ ಚುನಾವಣೆ ಹಿನ್ನೆಲೆ ಮೊದಲ ಹಂತದ ಕೋವಿಡ್ ಸೋಂಕು ಪರೀಕ್ಷೆ ಮುಕ್ತಾಯಗೊಂಡಿದೆ. ಪರೀಕ್ಷೆಗಳ ಪಾಸಿಟಿವಿಟಿ ದರ ರಾಜರಾಜೇಶ್ವರಿ ನಗರದಲ್ಲಿ ಶೇ.0.57 ರಷ್ಟಿದೆ.

Advertisement

ನ.6 ರಿಂದ 9 ರ ವರೆಗೆ ಒಂದು ಹಂತದ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮತ್ತೂಂದು ಹಂತದ ಕೋವಿಡ್‌ ಪರೀಕ್ಷೆ ನ.11ರಿಂದ 14ರ ವರಗೆ ನಡೆಯಲಿದೆ. ಮೊದಲಹಂತದಲ್ಲಿ ರಾಜರಾಜೇಶ್ವರಿ ನಗರದಲ್ಲಿ 14,727  ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದು, 84 ಮಂದಿಯಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಪಾಸಿಟಿವಿಟಿ ದರ ಶೇ.0.57 ರಷ್ಟಿದೆ. ಅಂದರೆ, ಪರೀಕ್ಷೆಗೊಳಪಟ್ಟ 200 ಜನರಲ್ಲಿ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.

ರಾಜಾರಾಜೇಶ್ವರಿನಗರದಲ್ಲಿಈಗಾಗಲೇಉಪಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಕಂದಾಯ ಇಲಾಖೆ ಅಧಿಕಾರಿಗಳು ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಎಂಸಿಸಿ ತಂಡ, ಎಸ್‌ಎಸ್‌ ಟಿ ತಂಡ ,ಲೆಕ್ಕಾಧಿಕಾರಿಗಳು, ಬಿಎಂಟಿಸಿ ಸಿಬ್ಬಂದಿಗಳು, ಪೊಲೀಸ್‌ ಸಿಬ್ಬಂದಿಗಳು ಹಾಗೂಆರೋಗ್ಯ ಇಲಾಖೆಯ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು. ಇವರೆಲ್ಲರಿಗೂ ಕೋವಿಡ್ ತಪಾಸಣೆ ಮಾಡಲಾಗಿದೆ. ಹಾಗೆಯೆ 2,310 ಚುನಾವಣಾ ಸಿಬ್ಬಂದಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದ್ದು ಆರು ಮಂದಿಯಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ.

287 ಮಂದಿ ಪೊಲೀಸರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಯಾವುದೇ ರೀತಿಯಕೋವಿಡ್‌ ಸೋಂಕುಕಾಣಿಸಿಕೊಂಡಿಲ್ಲ. ಇದರ ಜತೆಗೆ 12,417 ಮಂದಿ ಸಾರ್ವಜನಿಕರ ತಪಾಸಣೆ ಮಾಡಲಾಗಿದ್ದು ಇದರಲ್ಲಿ 78 ಮಂದಿಯಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ.

ಚುನಾವಣೆ ಭಾಗವಹಿಸಿದ್ದವರಿಗೆ ಸೋಂಕು ಪರೀಕ್ಷೆ :

Advertisement

ಬೆಂಗಳೂರು: ಚುನಾವಣೆ ಕಾರ್ಯದಲ್ಲಿ ಭಾಗವಹಿಸಿದ್ದ ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿ ವರದಿಯನ್ನು ಇಲಾಖೆಗೆ ಸಲ್ಲಿಸುವಂತೆ ಇಲಾಖೆ ಸೂಚಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳಲ್ಲಿ ನ.15ರೊಳಗೆ ಕೋವಿಡ್ ಪರೀಕ್ಷೆ ಮಾಡಿಸಿ ಎಸ್‌ಆರ್‌ಎಫ್‌ ಐಡಿಯ ಜತೆಗೂಡಿದ ವರದಿಯನ್ನು ರಾಜರಾಜೇಶ್ವರಿನಗರ ವಲಯ ಬಿಬಿಎಂಪಿ ಕಚೇರಿಗೆಕಳುಹಿಸುವಂತೆ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next