Advertisement

ವೇತನ ಪಡೆಯದೆ ಸಂದಿಗ್ಧ ಸ್ಥಿತಿಯಲ್ಲಿ  ಕೊರೊನಾ ಯೋಧ ಶಿಕ್ಷಕರು

12:45 PM May 21, 2021 | Team Udayavani |

ನಾಗಪುರ: ರಾಜ್ಯದಲ್ಲಿ  ಸಾವಿರಾರು ಶಿಕ್ಷಕರು ಕೊರೊನಾ ಯೋಧ ರಾಗಿ ಕೆಲಸ ಮಾಡುತ್ತಿದ್ದರೆ, ಅಂತಹ ಕಷ್ಟದ ಸಮಯದಲ್ಲಂತೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಿಕ್ಷಕರು ತಮ್ಮ ಮಾರ್ಚ್‌, ಎಪ್ರಿಲ್‌ ವೇತನವನ್ನು ಪಡೆಯದ ಕಾರಣ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಕೊರೊನಾ ಕೆಲಸ ಮಾಡಿದರೂ ಶಿಕ್ಷಕರ ವೇತನವನ್ನು ಇನ್ನೂ ಮಂಜೂರು ಮಾಡದ ಕಾರಣ ರಾಜ್ಯಾದ್ಯಂತ ಶಿಕ್ಷಕರು ಮತ್ತು ಬೋಧಕೇತರ ಸಿಬಂದಿಯಲ್ಲಿ  ಅಸಮಾಧಾನವಿದೆ.

Advertisement

ರಾಜ್ಯದ ಅನೇಕ ಶಿಕ್ಷಕರು ಕೊರೊನಾ ತಡೆಗಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಇದರಲ್ಲಿ ಅನೇಕ ಶಿಕ್ಷಕರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಮೃತಪಟ್ಟ ಶಿಕ್ಷಕರ ಕುಟುಂಬಗಳಿಗೆ ಇನ್ನೂ ವಿಮಾ ಹಣ ದೊರೆತಿಲ್ಲ. ಆದ್ದರಿಂದ ಸರಕಾರ ಯಾವಾಗಲೂ ಶಿಕ್ಷಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಕೊರೊನಾ ಸೇವೆ ಸಲ್ಲಿಸುತ್ತಿರುವಾಗ ಅನೇಕ ಶಿಕ್ಷಕರು ಕೊರೊನಾದಿಂದ ಪ್ರಭಾವಿತರಾಗಿದ್ದಾರೆ. ವೈದ್ಯಕೀಯ ಚಿಕಿತ್ಸೆ, ಮಿತಿಮೀರಿದ ಬ್ಯಾಂಕ್‌ ಕಂತುಗಳು, ವಿಮಾ ಕಂತುಗಳಿಂದಾಗಿ ಶಿಕ್ಷಕರು ಈಗಾಗಲೇ ಬಳಲುತ್ತಿದ್ದಾರೆ.

ಹಣ ಮಂಜೂರು ಮಾಡುವಂತೆ ಆಗ್ರಹ

ಪ್ರತಿ ತಿಂಗಳು ಬ್ಯಾಂಕ್‌ ಕಂತುಗಳನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ ಎಪ್ರಿಲ್‌ನಿಂದ ಮಾರ್ಚ್‌ವರೆಗೆ ಶಿಕ್ಷಕರು ಮತ್ತು ಶಿಕ್ಷರೇತರರ ವೇತನಕ್ಕೆ ಸರಕಾರ ಹಣ ಒದಗಿಸಬೇಕು ಮತ್ತು ಶಿಕ್ಷಕರಿಗೆ ಸಮಯಕ್ಕೆ ಸರಿಯಾಗಿ ಪಾವತಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ಶಿಕ್ಷಕರ ಒಕ್ಕೂಟವು ಮುಖ್ಯಮಂತ್ರಿ, ಹಣಕಾಸು ಸಚಿವರು, ಶಿಕ್ಷಣ ಸಚಿವರು, ಶಿಕ್ಷಣ ನಿರ್ದೇಶಕರು ಮತ್ತು ಶಿಕ್ಷಣ ಆಯುಕ್ತರಿಗೆ ಪತ್ರ ಬರೆದಿದ್ದು, ವರ್ಷಕ್ಕೆ ತತ್‌ಕ್ಷಣ ಹಣ ಮಂಜೂರು ಮಾಡುವಂತೆ ಆಗ್ರಹಿದೆ.

ಈ ಜಿಲ್ಲೆಗಳ ಶಿಕ್ಷಕರಿಗೆ ವೇತನವಿಲ್ಲ

Advertisement

ಮುಂಬಯಿಯ ಉತ್ತರ ಮತ್ತು ಪಶ್ಚಿಮ ದಕ್ಷಿಣ, ಕೊಂಕಣದಲ್ಲಿ ರತ್ನಾಗಿರಿ, ಸಿಂಧುದುರ್ಗ, ರಾಯಘಡ ಮತ್ತು ಪಾಲ^ರ್‌, ನಾಗ್ಪುರ ವಿಭಾಗದ ನಾಗ್ಪುರ, ಗೊಂಡಿಯಾ, ಭಂಡಾರ, ಚಂದ್ರಪುರ, ವಾರ್ಧಾ, ಮರಾಠವಾಡದಲ್ಲಿ ಬೀಡ್‌, ನಾಂದೇಡ್‌, ಔರಂಗಾಬಾದ್‌, ಬುಲಾVನಾದ ಉಸ್ಮಾನಾಬಾದ್‌, ಅಮವತಿಮಾಲ್‌, ಉತ್ತರ ಮಹಾರಾಷ್ಟ್ರದ ಅಮರಾವತಿ, ಜಲ್ಗಾಂವ್‌, ಬಿಜೆಪಿ ಧುಲೆ, ನಗರ, ನಂದೂರ್‌ಬಾರ್‌ ಮತ್ತು ನಾಸಿಕ್‌ ಜಿಲ್ಲೆಗಳಲ್ಲಿ ಶಿಕ್ಷಕರಿಗೆ ಪಾವತಿಸಲು ಹಣವಿಲ್ಲ ಎಂದು ಬಿಜೆಪಿ ಶಿಕ್ಷಕರ ಮೈತ್ರಿ ಆರೋಪಿಸಿದೆ. ಅನೇಕ ಜಿಲ್ಲೆಗಳಲ್ಲಿ ಶಿಕ್ಷಕರು ತಮ್ಮ ಮಾರ್ಚ್‌ ವೇತನ ಪಡೆಯದ ಕಾರಣ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ.

ಕೊರೊನಾ ಅವಧಿಯಲ್ಲಿ ಸರಕಾರ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿದೆ. ಆದರೆ ಅವರ ವೇತನಕ್ಕೆ ಹಣಕಾಸು ಒದಗಿಸುವಲ್ಲಿ  ನಿರ್ಲಕ್ಷ್ಯ ವಹಿಸುತ್ತಿದೆ. ಪರಿಣಾಮವಾಗಿ ಶಿಕ್ಷಕರು ಎರಡು ತಿಂಗಳುಗಳಿಂದ ವೇತನವನ್ನು  ಪಡೆದಿಲ್ಲ. ಸರಕಾರ ಕೂಡಲೇ ಹಣವನ್ನು ಮಂಜೂರು ಮಾಡಬೇಕು.

-ಅನಿಲ್‌ ಶಿವಂಕರ್‌

ಸಂಚಾಲಕರು, ಜೆಪಿ ಶಿಕ್ಷಕರ ಘಟಕ

Advertisement

Udayavani is now on Telegram. Click here to join our channel and stay updated with the latest news.

Next