Advertisement

ಎಚ್ಚರ ತಪ್ಪಿದರೆ ಮತ್ತೆ ಲಾಕ್‌: ಸಚಿವರಿಂದ ಎಚ್ಚರಿಕೆ, ವೈದ್ಯರಿಂದಲೂ ಸಲಹೆ

02:09 AM Jul 05, 2021 | Team Udayavani |

ಬೆಂಗಳೂರು : ಜನರು ಸ್ವಲ್ಪ ಎಚ್ಚರ ತಪ್ಪಿದರೂ ರಾಜ್ಯದಲ್ಲಿ ಮೂರನೇ ಬಾರಿಗೆ ಲಾಕ್‌ಡೌನ್‌ ಖಚಿತ ಎಂದು ಸಚಿವ ಆರ್‌. ಅಶೋಕ್‌ ಎಚ್ಚರಿಸಿದ್ದಾರೆ.

Advertisement

ಒಂದು ಮತ್ತು ಎರಡನೇ ಅಲೆಯ ಹಾವಳಿಯಿಂದ ವರ್ಷದ ಅಂತರದಲ್ಲಿ 2 ಬಾರಿ ಲಾಕ್‌ಡೌನ್‌ ಮಾಡಬೇಕಾಯಿತು. ತಜ್ಞರು 3ನೇ ಅಲೆಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಈಗಷ್ಟೇ ಅನ್‌ಲಾಕ್‌ ಆಗುತ್ತಿದ್ದು, ಜನರು ಎಚ್ಚರದಿಂದ ಇರಬೇಕು ಎಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು ಆತಂಕ ವ್ಯಕ್ತಪಡಿಸಿದರು.

ಮೈಮರೆತರೆ ಅಪಾಯ
ರಾಜ್ಯಾದ್ಯಂತ ಸೋಮವಾರದಿಂದ ಹೆಚ್ಚು ಕಡಿಮೆ ಎಲ್ಲ ನಿರ್ಬಂಧಗಳೂ ತೆರವಾಗಲಿವೆ. ಆದರೆ ಜನ ಮೈಮರೆಯಬಾರದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರ, ಕೇರಳದಲ್ಲಿ ಪ್ರತೀ ದಿನ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಆಂಧ್ರ, ತಮಿಳುನಾಡಿನಲ್ಲೂ ದಿನಕ್ಕೆ ನಾಲ್ಕೈದು ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಡೆಲ್ಟಾ+ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಹೀಗಾಗಿ ರಾಜ್ಯದ ಜನತೆ ಮೈಮರೆಯುವಂತಿಲ್ಲ ಎಂದು ತಜ್ಞರು ಹೇಳಿದ್ದಾರೆ.

ನಿಯಮ ಪಾಲನೆಯಾಗದಿದ್ದರೆ ಮತ್ತೆ ಸೋಂಕು ಏರಿಕೆಯಾಗುತ್ತದೆ ಎಂದು ಡಾ| ವಿ. ರವಿ ಎಚ್ಚರಿಸಿದ್ದಾರೆ. ವರ್ಷಾಂತ್ಯದ ವರೆಗೂ ಮುಂಜಾಗ್ರತೆ ಕ್ರಮ ಪಾಲಿಸಲೇಬೇಕು ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ| ಸಿ.ಎನ್‌. ಮಂಜುನಾಥ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next