Advertisement

“ಕೋವಿಡ್‌ 19 ವಾರಿಯರ್ಸ್‌ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ’

10:41 PM May 20, 2020 | Sriram |

ತೆಕ್ಕಟ್ಟೆ: ಗ್ರಾಮೀಣ ಭಾಗದಲ್ಲಿ ಕೋವಿಡ್‌ 19 ವಾರಿಯರ್ಸ್‌ನ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯವಾದುದು, ತಮ್ಮ ಕರ್ತವ್ಯವನ್ನೇ ಸೇವೆಯೆಂದು ಭಾವಿಸಿ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ಇವರಿಗೆ ಗ್ರಾಮದ ಪ್ರತಿಯೊಬ್ಬ ಪ್ರಜೆಯೂ ಕೂಡ ಸಹಕಾರ ನೀಡಬೇಕಾಗಿದೆ. ಇಡೀ ವಿಶ್ವವನ್ನೇ ಕಾಡುತ್ತಿದ್ದ ಕೋವಿಡ್‌ 19 ಅಟ್ಟಹಾಸದಿಂದಾಗಿ ನಗರ ಪ್ರದೇಶದ ಮಂದಿ ಮತ್ತೆ ಗ್ರಾಮೀಣ ಬದುಕು ಮತ್ತು ಭಾವನೆಗಳಿಗೆ ಒಗ್ಗಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಪ್ರಸ್ತುತ ಕೋವಿಡ್‌ 19 ಭೀತಿಯಿಂದಾಗಿ ಮತ್ತೆ ಭಾರತೀಯ ಸಂಸ್ಕಾರಯುತ ಜೀವನ ಶೈಲಿಯೆಡೆಗೆ ಬರುತ್ತಿದ್ದೇವೆ ಎಂದು ಗ್ರಾ.ಪಂ. ಸದಸ್ಯ ಅರುಣ ಕುಮಾರ್‌ ಹೆಗ್ಡೆ ಹೇಳಿದರು.

ಅವರು ಮೇ 20 ರಂದು ಹೊಂಬಾಡಿ ಮಂಡಾಡಿ ಗ್ರಾ.ಪಂ.ನಲ್ಲಿ ಬಿದ್ಕಲ್‌ಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೋವಿಡ್‌ 19 ವಾರಿಯರ್ಸ್‌ಗೆ ಸಮ್ಮಾನ ಹಾಗೂ ನೂತನ ಗ್ರಾ.ಪಂ.ನ ಸಭಾಂಗಣ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಬಿದ್ಕಲ್‌ಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೋವಿಡ್‌ 19 ವಾರಿಯರ್ಸ್‌ಗಳಾದ ರೇಖಾ,ಸರಸ್ವತಿ ಪಟಗಾರ್‌, ಶೈಲಜಾ ತೆಕ್ಕಟ್ಟೆ, ಮಂಜುನಾಥ ಹಾಗೂ ಆಶಾ ಕಾರ್ಯಕರ್ತೆಯರಾದ ಸುಶೀಲಾ, ಮಾಲತಿ, ಬೇಬಿ, ಅನ್ನಪೂರ್ಣ, ಗುಲಾಬಿ, ಶಾಂತಾ, ಪೂರ್ಣಿಮಾ ಅವರು ಗ್ರಾ.ಪಂ.ವತಿಯಿಂದ ಗುರುತಿಸಿ ಸಮ್ಮಾನಿಸಲಾಯಿತು.
ಹೊಂಬಾಡಿ ಮಂಡಾಡಿ ಗ್ರಾ. ಪಂ.ನ ಅಧ್ಯಕ್ಷೆ ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷ ಮಂಜುನಾಥ ಪೂಜಾರಿ, ಗ್ರಾ.ಪಂ. ಸದಸ್ಯರಾದ ಚಂದ್ರಶೇಖರ್‌ ಹೆಗ್ಡೆ, ಶಾಂತಾರಾಮ ಶೆಟ್ಟಿ, ಗಣೇಶ್‌ ಶೆಟ್ಟಿ , ಆನಂದ ಮೊಗವೀರ,ಶಾಂತಾ, ಸವಿತಾ, ಸೀತಾರಾಮ ಶೆಟ್ಟಿ, ಜಯಂತಿ, ದೀಪಾ, ಮಹೇಶ್‌, ಗಂಗೆ ಕುಲಾಲ್ತಿ, ಸವಿತಾ ಡಿ.ನಾಯ್ಕ, ರಮಣಿ ಶೆಡ್ತಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚಂದ್ರಕಾಂತ್‌ ಬಿಲ್ಲವ, ಗ್ರಾ.ಪಂ. ಸಿಬಂದಿಗಳಾದ ವಿನೋದ, ಪ್ರಮೋದ, ಸಚಿನ್‌, ನಾಗರಾಜ್‌, ಸೋಮ ಉಪಸ್ಥಿತರಿದ್ದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚಂದ್ರಕಾಂತ್‌ ಬಿಲ್ಲವ ಸ್ವಾಗತಿಸಿ, ವನಿತಾ ಪ್ರಾರ್ಥಿಸಿ, ವಂದಿಸಿದರು.

Advertisement

ಲೋಕಾರ್ಪಣೆಗೊಂಡ
ಗ್ರಾ.ಪಂ. ಸಭಾಂಗಣ
ಜಗತ್ತಿನಾದ್ಯಂತ ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ ಕೋವಿಡ್‌ 19 ವೈರಸ್‌ ತಡೆಗಟ್ಟಲು ಇಡೀ ದೇಶಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದ್ದು ನಿಯಮದಂತೆ ಯಾವುದೇ ಸಭಾ ಕಾರ್ಯಕ್ರಮಕ್ಕೆ ಅವಕಾಶವಿಲ್ಲದ ಹಿನ್ನೆಲೆ ಕುಂದಾಪುರ ತಾಲೂಕಿನ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್‌ನಲ್ಲಿ ನೂತನವಾಗಿ ನಿರ್ಮಾಣವಾದ ಸುವ್ಯವಸ್ಥಿತ ಸಭಾಂಗಣವನ್ನು ಧಾರ್ಮಿಕ ಕಾರ್ಯಕ್ರಮದೊಂದಿಗೆ ಮೇ.20ರಂದು ಅತ್ಯಂತ ಸರಳವಾಗಿ ಲೋಕಾರ್ಪಣೆಗೊಂಡಿತು.

 

Advertisement

Udayavani is now on Telegram. Click here to join our channel and stay updated with the latest news.

Next