Advertisement

ಚೀನಾದಲ್ಲಿ ಎಪ್ಪತ್ತು ದಿನಗಳ ಬಳಿಕ ಮರುಕಳಿಸಿದ ಕೋವಿಡ್ ಸೋಂಕು

05:08 PM Apr 23, 2020 | Hari Prasad |

ವುಹಾಂಗ್‌: ಕೋವಿಡ್ ವೈರಸ್‌ ಪ್ರಕರಣಗಳು ಇಳಿಮುಖವಾಗುತ್ತಿದ್ದರೂ ಸಂಭ್ರಮಿಸುವ ಸ್ಥಿತಿಯಲ್ಲಿ ಚೀನವಿಲ್ಲ.

Advertisement

ಹೌದು, ಇದಕ್ಕೆ ಕಾರಣ ಚೀನದಲ್ಲಿ ಕೋವಿಡ್ ವೈರಸ್ ನಿಂದ ಗುಣಮುಖರಾಗಿ ಮನೆಗೆ ತೆರಳಿದ್ದವರಲ್ಲಿ ಹಲವರಲ್ಲಿ ಮತ್ತೆ ಮಾರಕ ವೈರಸ್‌ ಕಾಣಿಸಿಕೊಳ್ಳುತ್ತಿದೆ. ಹೀಗೆಂದು ಮಾಧ್ಯಮವೊಂದು ವರದಿ ಮಾಡಿದೆ.

ಚೀನ ವೈದ್ಯರ ವರದಿಯೊಂದು ಅಲ್ಲಿನ ಜನರನ್ನು ಮತ್ತೆ ಧೃತಿಗೆಡಿಸಿದೆ. ಕೋವಿಡ್ ನಿಂದ  ಚಿಕಿತ್ಸೆ ಪಡೆದು ಗುಣಮುಖರಾಗಿ ಹೋದವರಲ್ಲಿ ಕೆಲವರಿಗೆ 70 ದಿನಗಳು ಕಳೆದ ಬಳಿಕ ಮತ್ತೆ ವೈರಸ್‌ ಕಾಣಿಸಿಕೊಳ್ಳುತ್ತಿದೆ. ವಿಶೇಷವೆಂದರೆ ವ್ಯಕ್ತಿಯಲ್ಲಿ ಯಾವುದೇ ರೋಗದ ಲಕ್ಷಣ ಕಾಣಿಸಿಕೊಳ್ಳದಿರುವ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next