Advertisement

ಜಿಎಸ್‌ಟಿ ವ್ಯಾಪ್ತಿಯಡಿ ನೈಸರ್ಗಿಕ ಅನಿಲ, ವೈಮಾನಿಕ ಇಂಧನ ?

03:27 PM Jun 08, 2018 | udayavani editorial |

ಹೊಸದಿಲ್ಲಿ : ನೈಸರ್ಗಿಕ ಅನಿಲವನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ  ಜಿಎಸ್‌ಟಿ ಮಂಡಳಿ ತನ್ನ ಮುಂದಿನ ತಿಂಗಳ ಸಭೆಯಲ್ಲಿ ಚರ್ಚಿಸಲಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

Advertisement

ಐದು ಪೆಟ್ರೋಲಿಯಂ ಉತ್ಪನ್ನಗಳ ಪೈಕಿ ಒಂದಾಗಿರುವ ವೈಮಾನಿಕ ಇಂಧನ ವನ್ನು ಕೂಡ ಜಿಎಸ್‌ಟಿ ವ್ಯಾಪ್ತಿಗೆ ತರುವ ದಿಶೆಯಲ್ಲಿ ಕೂಡ ಚರ್ಚಿಸಲಾಗುವುದು ಎಂದು ಜಿಎಸ್‌ಟಿ ಮಂಡಳಿಯ ಜಂಟಿ ಕಾರ್ಯದರ್ಶಿ ಧೀರಜ್‌ ರಸ್ತೋಗಿ ತಿಳಿಸಿದ್ದಾರೆ.

ಆದರೆ ವೈಮಾನಿಕ ಇಂಧನವನ್ನು ಜಿಎಸ್‌ಟಿಯಡಿ ಯಾವ ಕಾಲಮಿತಿಯೊಳಗೆ ತರಲಾಗುವುದು ಎಂಬುದನ್ನು ರಸ್ತೋಗಿ ತಿಳಿಸಿಲ್ಲ. ನೈಸರ್ಗಿಕ ಅನಿಲವನ್ನು ಜಿಎಸ್‌ಟಿ ಅಡಿ ಪ್ರಾಯೋಗಿಕವಾಗಿ ತರುವ ಆಲೋಚನೆಯನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದವರು ಹೇಳಿದರು. 

ಪೆಟ್ರೋಲಿಯಂ ಉತ್ಪನ್ನಗಳಾದ ಸೀಮೆ ಎಣ್ಣೆ, ನಾಫ್ತಾ ಮತ್ತು ಎಲ್‌ಪಿಜಿ ಯನ್ನು ಆರಂಭದಿಂದಲೇ ಜಿಎಸ್‌ಟಿ ವ್ಯಾಪ್ತಿಯಡಿ ತರಲಾಗಿದೆ; ಆದರೆ ಕಚ್ಚಾ ತೈಲ, ನೈಸರ್ಗಿಕ ಅನಿಲ, ವೈಮಾನಿಕ ಇಂಧನ, ಡೀಸಿಲ್‌ ಮತ್ತು ಪೆಟ್ರೋಲ್‌ ಗ‌ಳನ್ನು ಆರಂಭದ ವರ್ಷಗಳಲ್ಲಿ ಹೊರಗಿಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next