Advertisement

ನೀರಿನ ಸೃಷ್ಟಿ ಸಾಧ್ಯವಾಗಿಲ್ಲ, ಪೆಟ್ರೋಲ್‌ ರೀತಿ ವಿತರಣಾ ದಿನ ಬರಬಹುದು

10:12 AM Mar 28, 2017 | |

ಉಡುಪಿ: ನಾವಿನ್ನೂ ನೀರು ಸೃಷ್ಟಿ ಮಾಡಲು ಸಾಧ್ಯವಾಗಿಲ್ಲ. ಇದೇ ಮಾದರಿಯಲ್ಲಿ ನೀರು ಬಳಸಿದರೆ ಮುಂದೊಂದು ದಿನ ಪೆಟ್ರೋಲ್‌ನಂತೆ ನೀರು ವಿತರಿಸುವ ದಿನ ಬರಲಿದೆ ಎಂದು ರಾಜ್ಯ ವಿಜ್ಞಾನ ತಂತ್ರಜ್ಞಾನ ಮಂಡಳಿ ಪ್ರಧಾನ ವೈಜ್ಞಾನಿಕ ಅಧಿಕಾರಿ ಎ.ಆರ್‌. ಶಿವಕುಮಾರ್‌ ಕಳವಳ ವ್ಯಕ್ತಪಡಿಸಿದರು. 

Advertisement

ಸೋಮವಾರ ಜಿ.ಪಂ. ಸಭಾಂಗಣದಲ್ಲಿ ಏರ್ಪಡಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಲಾದ ಜಲ
ಸಂರಕ್ಷಣೆ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಒಬ್ಬರು ದಿನಕ್ಕೆ ಗರಿಷ್ಠ 11,500 ಲೀಟರ್‌ ನೀರು ಬಳಸುತ್ತಿದ್ದಾರೆ. ಸಾರ್ವಜನಿಕ ನೀರು ಸಂಗ್ರಹ ತಾಣಗಳನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡಿರುವ ನಾವು ಅಂತರ್ಜಲಕ್ಕೆ ಕನ್ನ ಹಾಕಿ ಬೋರ್‌ವೆಲ್‌ಗ‌ಳನ್ನು ಮಿತಿಮೀರಿ ಕೊರೆದು ನೀರು ಪಡೆದೆವು. ಈಗ ಶೇ. 98 ಬೋರ್‌ವೆಲ್‌ಗ‌ಳು ನಿಷ್ಪ್ರಯೋಜಕವಾಗಿವೆ ಎಂದರು.

ಮುಂದಿನ ವರ್ಷಕ್ಕೆ ಈಗಲೇ ಸಜ್ಜಾಗಬೇಕು
ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ನೈಸರ್ಗಿಕವಾಗಿ ದೊರೆಯುವ ನೀರೆಂಬ ಸಂಪತ್ತಿನ ಸದ್ಬಳಕೆ ಅಗತ್ಯ. ನೀರಿಗಾಗಿ ಕಷ್ಟಪಡಬೇಕಾದ ದಿನಗಳು ನಮ್ಮ ಮುಂದಿದ್ದು, ಕೆರೆ, ಬಾವಿ ಸ್ವತ್ಛಗೊಳಿಸಿ ಮುಂದಿನ ವರ್ಷ ನೀರು ಸಂಗ್ರಹಕ್ಕೆ ಜಿಲ್ಲೆ ಸಜಾjಗಬೇಕು ಎಂದರು.

ಎಂಜಿನಿಯರ್‌ಗಳಿಗೆ ಡಿಸಿ ಕರೆ
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಕಾರ್ಯಾಗಾರ ಫ‌ಲಪ್ರದವಾಗಲು ನೀರಿನ ಕೊರತೆ ನಿವಾರಿಸಲು ಯೋಜನೆ ರೂಪಿಸಿ. ಸರಕಾರಿ ಹಾಸ್ಟೆಲ್‌, ಅಂಗನವಾಡಿ, ಮನೆಗಳಿಗೆ ಮಳೆ ನೀರು ಸಂರಕ್ಷಣೆ ವಿನ್ಯಾಸ ರೂಪಿಸಿ. ಅನುಷ್ಠಾನಕ್ಕೆ ಅನುದಾನ ನೀಡುವ ಹೊಣೆ ನನ್ನದು ಎಂದು ಜಿಲ್ಲೆಯ ಎಂಜಿನಿಯರ್‌ಗಳಿಗೆ ಕರೆ ನೀಡಿದರು. 

ಜಿ.ಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಉಪಕಾರ್ಯದರ್ಶಿ ನಾಗೇಶ್‌ ರಾಯ್ಕರ್‌ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌ ವಂದಿಸಿದರು.

Advertisement

ಮಳೆ ನೀರು ಸಂರಕ್ಷಣೆಗೆ ಆ್ಯಪ್‌
ನೀರು ಇಂದು ಆಡಳಿತ ನಡೆಸುವ ಅಂಶವಾಗಿ ಪರಿವರ್ತನೆಯಾಗಿದೆ. ಇದಕ್ಕೆಂದೇ ಯೋಜನೆ ರೂಪಿಸುವ ಹಂತಕ್ಕೆ ತಲುಪಿದ್ದೇವೆ. ಮಳೆ ನೀರು ಸಂಗ್ರಹಿಸುವ ಅತ್ಯುತ್ತಮ ಮಾದರಿಗಳನ್ನು ಸುವರ್ಣ ಜಲ ಯೋಜನೆಯಡಿ ಉಡುಪಿ ಜಿಲ್ಲೆಯ ಹಲವು ಶಾಲೆಗಳಲ್ಲಿ ನಿರ್ಮಿಸಲಾಗಿತ್ತು. ಈಗ ಅದೂ ಕಾರ್ಯನಿರ್ವಹಿಸುತ್ತಿಲ್ಲ. ಈ ಮಾದರಿಗಳ ನಿರ್ವಹಣೆ ಅಗತ್ಯವಿದೆ. ಮಳೆ ನೀರು ಅತ್ಯಂತ ಶುದ್ಧ
ನೀರು. ಈ ನೀರನ್ನು ಸಂರಕ್ಷಿಸುವುದು ಕಷ್ಟದ ಕೆಲಸವೇನಲ್ಲ. ಇದಕ್ಕಾಗಿಯೇ ಹೊಸ ಆ್ಯಪ್‌ ಒಂದನ್ನು ತಯಾರಿಸಲಾಗಿದ್ದು, ಮಳೆನೀರು ಸಂರಕ್ಷಣೆಯ ಯೋಜನೆ, ಮಾಹಿತಿಯನ್ನು rwh-adviosr.info ದಲ್ಲಿ ಪಡೆಯಬಹುದು. ಮಳೆ ನೀರು ಸಂರಕ್ಷಣೆಯ ಬಗ್ಗೆ rainmanspeaks.blogspot.com ನಿಂದಲೂ ಮಾಹಿತಿ ಪಡೆಯಬಹುದು ಎಂದರು. ಮಳೆ ನೀರು ಸಂಗ್ರಹದೊಂದಿಗೆ ಅಂತರ್ಜಲ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದ ಅವರು, ಬೋರ್‌ವೆಲ್‌ಗೆ ಜಲಮರುಪೂರಣ ಮಾಡುವ ಬಗ್ಗೆಯೂ ವಿವರಿಸಿದರು. ಜಿಲ್ಲೆಯಲ್ಲಿ ನೀರಿನ ಕೊರತೆ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next