Advertisement

ಕುಟುಂಬ ಸದಸ್ಯರ ಭ್ರಷ್ಟಾಚಾರ ಸಹಿಸಲು ಸಾಧ್ಯವೇ ಇಲ್ಲ: ಕ್ಸಿ ಎಚ್ಚರಿಕೆ

11:29 PM Dec 25, 2023 | Team Udayavani |

ಬೀಜಿಂಗ್‌: ರಾಜಕಾರಣಿಗಳಿಗೆ ವೈಯಕ್ತಿಕ ಶಿಸ್ತು ಬಹಳ ಮುಖ್ಯ! ನೀವು ಭ್ರಷ್ಟಾಚಾರದಿಂದ ದೂರವಿರುವುದರ ಜತೆಗೆ ನಿಮ್ಮ ಕುಟುಂಬಸ್ಥರು, ಸಂಬಂಧಿಕರು ಭ್ರಷ್ಟಾಚಾರದಲ್ಲಿ ತೊಡಗದಂತೆ ನೋಡಿಕೊಳ್ಳಿ’.ಹೀಗೆಂದು ಚೀನ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ತಮ್ಮ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಆಡಳಿತಾರೂಢ ಕಮ್ಯೂನಿಸ್ಟ್‌ ಪಾರ್ಟಿ ಆಫ್ ಚೀನ ಡಿ.22ರಂದು ನಡೆಸಿದ್ದ ಸಭೆಯಲ್ಲಿ ಈ ಅಂಶ ಪ್ರಸಾವ ಮಾಡಿದ್ದಾರೆ. ಅದರಲ್ಲಿ ವಿದೇಶಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕ್ಸಿ ತಮ್ಮ ಪಕ್ಷದ ನಾಯಕರಿಗೆ ಉದಾಹರಣೆ ನೀಡಿದ್ದಾರೆಂದು ತಿಳಿದುಬಂದಿದೆ.

Advertisement

ಪಕ್ಷದ ನಾಯಕರೆಲ್ಲರಿಗೂ ವೈಯಕ್ತಿಕ ಶಿಸ್ತನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿ ರುವ ಅವರು ಭ್ರಷ್ಟಾಚಾರದಲ್ಲಿ ತೊಡಗದಂತೆ ಕುಟುಂಬಸ್ಥರು, ಸಂಬಂಧಿಕರು, ಆಪ್ತರನ್ನು ದೂರವಿಡಿ. ಇದಕ್ಕಾಗಿ ಕಠಿನ ನಿಮಗಳನ್ನು ನೀವೆ ರೂಪಿಸಿಕೊಳ್ಳುವ ಮೂಲಕ ಮಾದರಿ ರಾಜಕಾರಣಿಗಳಾಗಿ ಎಂದಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next