Advertisement
ನವೀಕರಣದ ಬಳಿಕಕಾರ್ಪೊರೇಶನ್ ಬ್ಯಾಂಕ್ ಸ್ಥಾಪಕ ಹಾಜಿ ಅಬ್ದುಲ್ಲಾ ಸಾಹೇಬರ ಮನೆಯಾಗಿದ್ದ ಈ ಸ್ಥಳವೀಗ ಅಪೂರ್ವ ವಸ್ತುಗಳ ಸಂಗ್ರಹವಾಗಿದೆ. ಮ್ಯೂಸಿಯಂನ್ನು ಮಾರ್ಚ್ 22ರಂದು ಕೊರೊನಾ ಕಾರಣದಿಂದ ಬಂದ್ ಮಾಡಲಾಗಿತ್ತು. 7 ತಿಂಗಳ ಬಳಿಕ ನ.3ರಂದು ತೆರೆಯಲಾಗಿದೆ. 2011ರಲ್ಲಿ ಈ ಮ್ಯೂಸಿಯಂ ಅನ್ನು ವಿತ್ತ ಸಚಿವ ಪ್ರಣವ್ ಮುಖರ್ಜಿಯವರು ಉದ್ಘಾಟಿಸಿದ್ದರು.
ರಾಜರ ಕಾಲದ ನಾಣ್ಯಗಳಲ್ಲಿ ಚಿನ್ನ, ಬೆಳ್ಳಿ, ತಾಮ್ರದ ನಾಣ್ಯಗಳಿವೆ. ಸುಮಾರು 1,500 ನಾಣ್ಯಗಳು, ಸುಮಾರು 700 ನೋಟುಗಳಿವೆ. ಇದರ ಜತೆ ಕಾರ್ಪೊರೇಶನ್ ಬ್ಯಾಂಕಿನ ಆರಂಭಿಕ ಆಡಳಿತ ಮಂಡಳಿಯ ನಿರ್ದೇಶಕರ ಚಿತ್ರಗಳು, 1934ರಲ್ಲಿ ಗಾಂಧೀಜಿಯವರು ಬಂದ ಸಂದರ್ಭ ಅಬ್ದುಲ್ಲಾ ಸಾಹೇಬರ ಅಧ್ಯಕ್ಷತೆಯಲ್ಲಿ ಸ್ವಾಗತಿಸಿದ ಅಪೂರ್ವ ಕ್ಷಣಗಳು, ಅಬ್ದುಲ್ಲಾ ಸಾಹೇಬರು ನಿಧನ ಹೊಂದಿದಾಗ ಉಡುಪಿಯಲ್ಲಿ ಸೇರಿದ ಜನಸಾಗರದ ಚಿತ್ರಗಳೂ ಇವೆ. 121 ವರ್ಷ ಇತಿಹಾಸದ ಕಟ್ಟಡದಲ್ಲಿ ವಿಶಿಷ್ಟ ದಾರುಶಿಲ್ಪಗಳನ್ನು (ಬರ್ಮಾ ಟಿಂಬರ್) ನೋಡಬಹುದಾಗಿದೆ ಎನ್ನುತ್ತಾರೆ ಕ್ಯುರೇಟರ್ ಜಯಪ್ರಕಾಶ್ ರಾವ್. ಪ್ರವೇಶ ಸಮಯ
ನಿತ್ಯ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ರವಿವಾರ ಮತ್ತು ರಜಾ ದಿನಗಳಲ್ಲಿ ತೆರೆದಿರುವುದಿಲ್ಲ. ಎರಡು ಮತ್ತು ನಾಲ್ಕನೆಯ ಶನಿವಾರವೂ ತೆರೆದಿರುತ್ತದೆ.
Related Articles
ಮೊದಲ ಬಾರಿಗೆ ನೋಟು ನಿಷೇಧವಾಗಿದ್ದು 1946ರಲ್ಲಿ. ಆಗ ಬ್ರಿಟಿಷರು 10,000 ರೂ., 1,000 ರೂ. ನೋಟುಗಳನ್ನು ನಿಷೇಧ ಮಾಡಿದ್ದರು. 1978ರಲ್ಲಿ ಮೊರಾರ್ಜಿ ದೇಸಾಯಿಯವರ ಸರಕಾರ 1,000 ರೂ., 5,000 ರೂ., 10,000 ರೂ. ನೋಟುಗಳನ್ನು ನಿಷೇಧ ಮಾಡಿತ್ತು. 2016ರಲ್ಲಿ ಕೇಂದ್ರ ಸರಕಾರ 500, 1,000 ರೂ. ನೋಟು ನಿಷೇಧ ಮಾಡಿತು. ಈ ಎಲ್ಲ ನೋಟುಗಳೂ ಇಲ್ಲಿವೆ.
Advertisement