Advertisement

ದೇವೇಗೌಡರಿಗೆ ಕೊರೋನಾ ಪಾಸಿಟಿವ್: ಆರೋಗ್ಯ ಉತ್ತಮ

01:11 PM Jan 22, 2022 | Team Udayavani |

ಬೆಂಗಳೂರು : ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ನೆಗಡಿ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲೂ ದೇವೇ ಗೌಡರಿಗೆ ಕೋವಿಡ್ ದೃಢಪಟ್ಟಿತ್ತು. ಎಂಬತ್ತಾರರ ಹೊಸ್ತಿಲಲ್ಲೂ ಆರೋಗ್ಯವನ್ನು ಗೌಡರು ಉತ್ತಮವಾಗಿಟ್ಟುಕೊಂಡಿದ್ದಾರೆ.

ಪಾಸಿಟಿವ್ ಇದ್ದರೂ ಬೇರಾವುದೇ ರೋಗ ಲಕ್ಷಣಗಳನ್ನು ಅವರು ಹೊಂದಿಲ್ಲ ಎಂದು ಅವರ ಆಪ್ತ ಶಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next