Advertisement

ನಕಲಿ ರೋಗಿ ಕಂಡು ಬೆಚ್ಚಿ ಬಿದ್ದರು

10:05 AM Apr 25, 2020 | Sriram |

ಲಾಕ್‌ಡೌನ್‌ ಇದ್ದರೂ ಅದನ್ನು ಉಲ್ಲಂಘಿಸಿ, ಮಾಸ್ಕ್ ಧರಿಸದೆ ಒಂದೇ ಬೈಕ್‌ ನಲ್ಲಿ ಸವಾರಿ ಮಾಡುತ್ತಿದ್ದ ಮೂವರು ಯುವಕರಿಗೆ ಪಾಠ ಕಲಿಸುವ ಸಲುವಾಗಿ ಪೊಲೀಸರು, ನಕಲಿ ಕೋವಿಡ್-19 ರೋಗಿ ಇರುವ ಅಂಬ್ಯುಲೆನ್ಸ್‌ ಹತ್ತಿಸಿ, ಬುದ್ಧಿ ಕಲಿಸಿದ ಘಟನೆ ತಮಿಳುನಾಡಿನ ತಿರುಪ್ಪೂರ್‌ನಲ್ಲಿ ನಡೆದಿದೆ.

Advertisement

ಸದ್ಯಕ್ಕೆ ಈ ವಿಡಿಯೊ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಪೊಲೀಸರು ಆ ಯುವಕರಿಗೆ ತಕ್ಕ ಪಾಠ ಕಲಿಸಿದ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೋವಿಡ್-19 ವೈರಸ್‌ ಹರಡುವುದನ್ನು ತಪ್ಪಿಸಲು ದೇಶವ್ಯಾಪ್ತಿ ಲಾಕ್‌ಡೌನ್‌ ಘೋಷಿಸಿದ್ದರೂ, ಅದನ್ನು ಲೆಕ್ಕಿಸದೆ, ಮುಖಕ್ಕೆ ಮಾಸ್ಕ್ ಕೂಡ ಧರಿಸದೆ, ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಯುವಕರನ್ನು ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ತಡೆದರು.

ಅವರಿಗೆ ಪಾಠ ಕಲಿಸಲು ಅಂಬ್ಯುಲೆನ್ಸ್‌ ಹತ್ತಿ ಕೂರುವಂತೆ ಸೂಚಿಸಿದ್ದಾರೆ. ಗಾಬರಿಯಲ್ಲಿದ್ದ ಆ ಯುವಕರು ಅಂಬ್ಯುಲೆನ್ಸ್‌ ಪ್ರವೇಶಿಸಿದಾಗ ಅಲ್ಲೊಂದು ಅಚ್ಚರಿ ಕಾದಿತ್ತು. ಒಳಗೆ ಹೋಗುತ್ತಿದ್ದಂತೆಯೇ, ಆ ಮೂವರು ಯುವಕರಿಗೆ ಪೊಲೀಸರು ಒಳಗೆ ಕೋವಿಡ್-19 ವೈರಸ್‌ ತಗುಲಿರುವ ರೋಗಿ ಇದ್ದಾರೆ ಎಂದು ಹೇಳಿದ್ದಾರೆ.

ತಕ್ಷಣವೇ, ಹೆದರಿದ ಆ ಯುವಕರು, ಅಂಬ್ಯುಲೆನ್ಸ್‌ ನಿಂದ ಹೊರ ಜಿಗಿಯಲು ಪ್ರಯತ್ನಿಸಿದ್ದಾರೆ. ಒಳಗಿದ್ದ ನಕಲಿ ಕೋವಿಡ್-19 ವೈರಸ್‌ ರೋಗಿ ಕೂಡ ಆ ಯುವಕರ ಬಳಿ ಕೆಮ್ಮುತ್ತಲೇ ಬರಲು ಯತ್ನಿಸುತ್ತಾರೆ. ಆಗ ಕಿಟಕಿಯಿಂದ ಹೊರ ಹಾರಲು ಯತ್ನಿಸುವ ಯುವಕರನ್ನು ಸ್ವಲ್ಪ ಸಮಯ ಅಲ್ಲೇ ಇರುವಂತೆ ಹೇಳುತ್ತಾರೆ. ಕೊನೆಗೆ ಆ ಯುವಕರು ಅಳುವುದನ್ನು ನೋಡಿದ ಬಳಿಕ ವಾಹನದಿಂದ ಕೆಳಗಿಳಿಸುತ್ತಾರೆ. ಇರುವ ಸತ್ಯ ಸಂಗತಿ ವಿವರಿಸಿ, ವಿನಾಕಾರಣ ಹೊರಗೆ ಸುತ್ತಾಡುವುದುನ್ನು ನಿಲ್ಲಿಸಬೇಕು ಎಂದು ಮನವಿ ಮಾಡುವ ಪೊಲೀಸರ ವಿಡಿಯೋ ಈಗ ಸಾಕಷ್ಟು ಮೆಚ್ಚುಗೆಗೂ ಪಾತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next